ಮುಂಬೈ: ಬಾಲಿವುಡ್ ನಟ ಅಮಿತಾಬ್ ಬಚ್ಚನ್ಗೆ ಕರೊನಾ ಪಾಸಿಟಿವ್ ಕಾಣಿಸಿಕೊಂಡ ಬಳಿಕ ಅಭಿಷೇಕ್ ಬಚ್ಚನ್ ಅವರಲ್ಲಿಯೂ ಸೋಂಕು ದೃಢಪಟ್ಟಿತ್ತು. ಬಳಿಕ ಐಶ್ವರ್ಯಾ ರೈ ಮತ್ತು ಪುತ್ರಿ ಆರಾಧ್ಯಾಗೂ ಕರೊನಾ ಪಾಸಿಟಿವ್ ವರದಿ ಬಂದಿತ್ತು. ಸದ್ಯ ಅಭಿಷೇಕ್ ಮತ್ತು ಅಮಿತಾಬ್ಗೆ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇತ್ತ ಸೋಂಕಿನ ಲಕ್ಷಣಗಳು ಕಡಿಮೆ ಕಾಣಿಸಿಕೊಂಡಿರುವ ಐಶ್ವರ್ಯಾ ಮತ್ತು ಆರಾಧ್ಯಾಗೆ ಮನೆಯಲ್ಲಿಯೇ ಹೋಮ್ ಕ್ವಾರಂಟೈನ್ ಒಳಪಟ್ಟಿದ್ದಾರೆ. ಈ ವಿಚಾರವನ್ನು ಸ್ವತಃ ಅಭಿಷೇಕ್ ಬಹಿರಂಗಪಡಿಸಿದ್ದು, ‘ಐಶ್ವರ್ಯಾ ಮತ್ತು ಆರಾಧ್ಯಾಗೆ ಕರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಜಲ್ಸಾ ಮನೆಯಲ್ಲಿಯೇ ಸೆಲ್ಫ್ ಕ್ವಾರಂಟೈನ್ನಲ್ಲಿದ್ದಾರೆ. ಬಿಎಂಸಿಯೂ ಸಹ ನಿಗಾವಹಿಸಿದೆ. ನನ್ನ ತಾಯಿಯ ವರದಿ ನೆಗೆಟಿವ್ ಬಂದಿದೆ. ನಿಮ್ಮ ಪ್ರೀತಿ ಮತ್ತು ಕಾಳಜಿಗೆ ಧನ್ಯವಾದ’ ಎಂದು ಅಭಿಷೇಕ್ ಟ್ವಿಟ್ ಮಾಡಿದ್ದಾರೆ.
ಇನ್ನು ಅಮಿತಾಬ್ಗೆ ಸೋಂಕು ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಅಮಿತಾಬ್ ಅವರ ಮನೆಯನ್ನು ಸೋಂಕು ನಿವಾರಕ ಸಿಂಪಡಣೆ ಮಾಡಿ, ಇಡೀ ಪ್ರದೇಶವನ್ನು ಕಂಟೇನ್ಮೆಂಟ್ ಝೋನ್ ಎಂದು ಘೋಷಿಸಲಾಗಿತ್ತು. ನಾನಾವತಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅಮಿತಾಬ್, ಅಲ್ಲಿದ್ದುಕೊಂಡೇ ಅಭಿಮಾನಿಗಳಿಗೆ ತಮ್ಮ ಆರೋಗ್ಯದ ಬಗ್ಗೆಯೂ ಮಾಹಿತಿ ನೀಡಿದ್ದರು. ಯಾವುದೇ ಗಾಬರಿ ಬೇಡ, ನಾನು ಕ್ಷೇಮ ಎಂದಿದ್ದರು. (ಏಜೆನ್ಸೀಸ್)















ಇನ್ನಷ್ಟು ಸುದ್ದಿಗಳು
ಚುನಾವಣಾ ಸಂಭ್ರಮಾಚರಣೆ: ಪಟಾಕಿ ಸಿಡಿದು ಮುಸ್ಲಿಂ ಲೀಗ್ ಕಾರ್ಯಕರ್ತ ಮೃತ್ಯು
ತಮ್ಮದೇ ಸರ್ಕಾರ ಮಂಡಿಸಿದ ಜಾತಿ ಸಮೀಕ್ಷೆ ವರದಿಯನ್ನು ಸುಟ್ಟು ಹಾಕಿದ ಕಾಂಗ್ರೆಸ್ ಎಂಎಲ್ಸಿ
ಕರ್ನಾಟಕ ಸರ್ಕಾರವನ್ನು ಬೀಳಿಸಲು ಕೇರಳ ದೇವಸ್ಥಾನದಲ್ಲಿ ಮೃಗ ಬಲಿ – ದೇವಸ್ವಂ ಸಚಿವರು ಹೇಳಿದ್ದೇನು?
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಮಣಿಪುರ: ಚುನಾವಣೆ ಬಹಿಷ್ಕಾರ ಕ್ಕೆ ಕರೆ ಕೊಟ್ಟ ಕುಕಿ!!
ಬಡತನದಿಂದ ಬಳಲುತ್ತಿರುವ ಕುಟುಂಬದ ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಷಕ್ಕೆ 1 ಲಕ್ಷ ರೂಪಾಯಿ
ಸಯ್ಯಿದ್ ಹಸನುಲ್ ಅಹ್ದಲ್ ತಂಙಳರಿಗೆ ಗೌರವ ‘ಅತ್ತಕ್ರೀಂ’- ಸ್ವಾಗತ ಸಮಿತಿ ಅಸ್ತಿತ್ವಕ್ಕೆ
ಪುಟ್ಟ ಬಾಲಕಿಯ ಅತ್ಯಾಚಾರ,ಹತ್ಯೆ ಪ್ರಕರಣ- ಆರೋಪಿ ಅಶ್ಫಾಕ್ ಆಲಂಗೆ ಮರಣ ದಂಡನೆ
ಕಳಮಶ್ಶೇರಿಯಲ್ಲಿ ಬಾಂಬ್ ಸ್ಫೋಟಿಸಿದ್ದು ಡೊಮಿನಿಕ್ ಮಾರ್ಟಿನ್- ದೃಢೀಕರಿಸಿದ ಪೊಲೀಸ್
ಕಳಮಶ್ಶೇರಿಯಲ್ಲಿ ಬಾಂಬ್ ಇಟ್ಟಿದ್ದು ನಾನೇ – ಪೊಲೀಸ್ ಠಾಣೆಯಲ್ಲಿ ಶರಣಾಗಿ ತಪ್ಪೊಪ್ಪಿಗೆ