ಗುರುಪುರ: ಮೂಡಬಿದ್ರೆ ಡಿವಿಶನ್ ವ್ಯಾಪ್ತಿಯ ಗುರುಪುರ ಕೈಕಂಬದ ಬಂಗ್ಲಗುಡ್ಡೆಯಲ್ಲಿ ಗುಡ್ಡ ಕುಸಿತದ ಹಿನ್ನೆಲೆಯಲ್ಲಿ SSF ಮೂಡಬಿದ್ರೆ ಡಿವಿಷನ್ ನಡೆಸಿದ ಕಾರ್ಯಾಚರಣೆ ಅತ್ಯಂತ ಶ್ಲಾಘನೀಯವಾಗಿದೆ.

ರವಿವಾರ ಸುಮಾರು ಎರಡು ಗಂಟೆ ಹೊತ್ತಿಗೆ SSF ಕಾರ್ಯಕರ್ತರು ಘಟನಾ ಸ್ಥಳಕ್ಕೆ ತಲುಪಿದ್ದರೂ, ಸಂಜೆ 4:00 ಗಂಟೆಯವರೆಗೆ ಕಾರ್ಯಾಚರಣೆಗೆ ಅನುಮತಿ ನೀಡಿರಲಿಲ್ಲ. ಆದರೂ ಕೆಲವು ಕಾರ್ಯಕರ್ತರು ಗುಡ್ಡ ಹಾಗೂ ಪೊದೆಗಳ ಎಡೆಯಿಂದ ತೆರಳಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.


ಕುಸಿಯುವ ಹಂತದಲ್ಲಿರುವ ಮನೆಗಳ ಸಾಮಗ್ರಿಗಳನ್ನು ಬೇರೆಡೆಗೆ ತೆರವುಗೊಳಿಸಲು ಕಾರ್ಯಕರ್ತರು ಎರಡು ಮೂರು ವಾಹನಗಳ ವ್ಯವಸ್ಥೆಯನ್ನು ಮಾಡಿದ್ದರು. ಸಂಜೆ 4 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ಮನೆಯ ಸಾಮಗ್ರಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಮೂಡಬಿದ್ರೆ ಡಿವಿಶನ್ ಕೋಶಾಧಿಕಾರಿ ನಜೀಬ್ ಕೈಕಂಬರವರು ಗುಡ್ಡ ಕುಸಿತದಿಂದ ಸಂಕಷ್ಟಕ್ಕೀಡಾಗಿದ್ದ ಒಂದು ಕುಟುಂಬಕ್ಕೆ ತಂಗಲು ತಮ್ಮ ಬಾಡಿಗೆ ಮನೆಯನ್ನು ತಾತ್ಕಾಲಿಕವಾಗಿ ಬಿಟ್ಟುಕೊಟ್ಟಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಸಂಘ ಕುಟುಂಬದ ಹಲವಾರು ನೇತಾರರು ಕೈಜೋಡಿಸಿದ್ದಾರೆ.
ಮರ್ಕಝ್ ಕೈಕಂಬ ಇದರ ಸಾರಥಿ SYS ಕೈಕಂಬ ಸೆಂಟರ್ ಅಧ್ಯಕ್ಷರೂ ಆದ ಬಹುಮಾನ್ಯ ಬದ್ರುದ್ದೀನ್ ಅಝ್‌ಹರಿ ಉಸ್ತಾದ್, ಎಸ್ ವೈ ಎಸ್ ದ.ಕ.ಜಿಲ್ಲಾ West Zone ಅಧ್ಯಕ್ಷರಾದ C.H.ಮುಹಮ್ಮದಲಿ ಸಖಾಫಿ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಬ್ರಾಹೀಮ್ ಖಲೀಲ್ ಮುಸ್ಲಿಯಾರ್, ಉಪಾಧ್ಯಕ್ಷರಾದ N.S. ಉಮರ್ ಮಾಸ್ಟರ್, SYS ಟೀಂ ಇಸಾಬ ಜಿಲ್ಲಾ ಕಾರ್ಯದರ್ಶಿ M.K.M.ಇಸ್ಮಾಯಿಲ್ ಕಿನ್ಯ, ಜಿಲ್ಲಾ ಸದಸ್ಯರಾದ B.H. ಇಸ್ಮಾಯಿಲ್ ಕೇಸಿರೋಡ್, SYS ಕೈಕಂಬ ಸೆಂಟರ್ ಇಸಾಬ ಅಮೀರ್ ಬಶೀರ್ ಎಡಪದವು, ಸ್ವಾದಿಕ್ ಮೊಗರು, ಮರ್ಕಝ್ ವಿಂಗ್ ಕೈಕಂಬ ಇದರ ಅಧ್ಯಕ್ಷರಾದ ಶರೀಫ್ ಅಡ್ಡೂರು, ಉಮರ್ ಅಡ್ಡೂರ್ ,ಆರಿಫ್ ಮಿಸ್ರಿಯಾ, ಅಬ್ದುಲ್ ಹಮೀದ್ ಕೈಕಂಬ, ಮಜೀದ್ ಮರ್ಕಝ್ ನಗರ, ಹಬೀಬ್ ಫ್ರೂಟ್ಸ್ ಕೈಕಂಬ ಹಾಗೂ ಇತರ ಟೀಂ ಇಸಾಬ ಸದಸ್ಯರು ಕೈಜೋಡಿಸಿದ್ದರು.
ಮಾತ್ರವಲ್ಲದೆ, SSF ಮೂಡಬಿದ್ರೆ ಡಿವಿಶನ್ ಅಧ್ಯಕ್ಷರಾದ ರಿಯಾಝ್ ಸಅದಿ, ಕೋಶಾಧಿಕಾರಿ ನಜೀಬ್ ಕೈಕಂಬ, SSF ವೆಸ್ಟ್ ಝೋನ್ ಕಾರ್ಯದರ್ಶಿ ಝುಹೈರ್ ಮಾಸ್ಟರ್ ಬಜ್ಪೆ , ರಮೀಝ್ ಬಜ್ಪೆ, ಫಾರೂಖ್ ಹನೀಫಿ ಬಜ್ಪೆ ಹಾಗೂ ಕೈಕಂಬ ಸೆಕ್ಟರ್ ವ್ಯಾಪ್ತಿಯ ಕ್ಯೂ ಟೀಂ ಸದಸ್ಯರಾದ ಸಿರಾಜುದ್ದೀನ್, ಅಝರುದ್ದೀನ್ ,ಇಫ್ತಿಕಾರ್, ಶಾಕಿರ್, ಸುಹೈರ್, ಸುರತ್ಕಲ್ ಡಿವಿಶನ್ ಸದಸ್ಯರಾದ ಆಸಿಫ್ ಪಕ್ಷಿಕೆರೆ, SMA ಕೈಕಂಬ ರೀಜನಲ್ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಸೈಟ್ ಹಾಗೂ SYS ಬಂಗ್ಲಗುಡ್ಡೆ ಕಾರ್ಯಕರ್ತರಾದ ಅಬ್ದುಲ್ ಅಝೀಝ್ , ಆಬಿದ್ ಅಲಿ, ಅದೇ ರೀತಿ ಬಜ್ಪೆ ಸೆಕ್ಟರ್ ಸದಸ್ಯರಾದ ಶಾಹಿಕ್ ಕಿನ್ನಿಪದವು, ರಿಹಾಬ್ ಭಟ್ರಕೆರೆ, ಸುಲೈಮಾನ್ ಬಜ್ಪೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ