ಹೈದ್ರಾಬಾದ್:ಕೋಳಿ ಸಂಬಾರಿಗೆ ಚಿಕನ್ ಮಸಾಲ ಎಂದುಕೊಂಡು ಕೀಟನಾಶಕವನ್ನ ಮಿಕ್ಸ್ ಮಾಡುವ ಮೂಲಕ ಮಹಾ ಯಡವಟ್ಟೊಂದನ್ನ ಮಾಡಿಕೊಂಡಿರುವ ಅಜ್ಜಿ. ಕೀಟನಾಶಕ ಮಿಕ್ಸ್ ಮಾಡಿದ್ದ ಆಹಾರವನ್ನು ಸೇವಿಸಿ ಮಕ್ಕಳಿಬ್ಬರು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ.
ಮೃತರು 11 ವರ್ಷದ ರೋಹಿತ್ ಹಾಗೂ 8 ವರ್ಷದ ಜೀವನ್ ಎಂದು ತಿಳಿದುಬಂದಿದೆ. ಚಿತ್ತೋರ್ ಜಿಲ್ಲೆಯ ಎ.ಎಲ್.ರಾಮ್‌ಪುರಂನಲ್ಲಿ ಅಜ್ಜಿಯ ಮನೆ ಇದ್ದು ಪ್ರಸ್ತುತ ಶಾಲೆಗೆ ರಜೆ ಇರುವ ಹಿನ್ನೆಲೆ ರೋಹಿತ್ ಮತ್ತು ಜೀವನ ಇಬ್ಬರು ತಮ್ಮ ರಜಾದಿನಗಳನ್ನ ಕಳೆಯಲು ಅಲ್ಲಿ ಹೋಗಿದ್ದಾರೆ.
ಜೂ.22ರಂದು ಅಜ್ಜಿ ಗೋವಿಂದಮ್ಮ ತನ್ನ ಮೊಮ್ಮಕ್ಕಳಿಗಾಗಿ ಚಿಕನ್ ಕರಿ ಮಾಡಿದ್ದಾರೆ. ಆದರೆ ಯಡವಟ್ಟಾಗಿ ಚಿಕನ್ ಮಸಾಲ ಎಂದು ಅಂದುಕೊಂಡು ಕೀಟನಾಶಕವನ್ನ ಪದಾರ್ಥಕ್ಕೆ ಬೆರೆಸಿ ಅಡುಗೆ ಮಾಡಿದ್ದಾರೆ. ತಿಳಿಯದೆ ಮಾಡಿದ್ದರಿಂದ ಗೋವಿಂದಮ್ಮ ಹಾಗೂ ಇಬ್ಬರು ಮಕ್ಕಳು ಸೇರಿ ಊಟ ಮಾಡಿದ್ದಾರೆ.
ಊಟ ಮಾಡುತ್ತಿದ್ದಂತೆ ಮೂವರು ಅಸ್ವಸ್ಥರಾಗಿದ್ದಾರೆ. ಕೂಡಲೇ ಮಾಹಿತಿ ತಿಳಿದ ಸ್ಥಳೀಯರು ಮನೆಗೆ ಓಡಿ ಬಂದು. ಮೂವರನ್ನು ಆಸ್ಪತ್ರೆಗೆ ಕರೆದುಕೊಂಡು ಚಿತ್ತೂರಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟರಲ್ಲಿಯೇ ರೋಹಿತ್ ಮತ್ತು ಜೀವನ್ ಮೃತಪಟ್ಟಿದ್ದಾರೆ. ಗೊತ್ತಾಗದೆ ಮಾಡಿದ ಪ್ರಮಾದದಿಂದ ಅಜ್ಜಿಯ ಸ್ಥಿತಿಯು ಗಂಭೀರವಾಗಿದೆ.















ಇನ್ನಷ್ಟು ಸುದ್ದಿಗಳು
ಚುನಾವಣಾ ಸಂಭ್ರಮಾಚರಣೆ: ಪಟಾಕಿ ಸಿಡಿದು ಮುಸ್ಲಿಂ ಲೀಗ್ ಕಾರ್ಯಕರ್ತ ಮೃತ್ಯು
ತಮ್ಮದೇ ಸರ್ಕಾರ ಮಂಡಿಸಿದ ಜಾತಿ ಸಮೀಕ್ಷೆ ವರದಿಯನ್ನು ಸುಟ್ಟು ಹಾಕಿದ ಕಾಂಗ್ರೆಸ್ ಎಂಎಲ್ಸಿ
ಕರ್ನಾಟಕ ಸರ್ಕಾರವನ್ನು ಬೀಳಿಸಲು ಕೇರಳ ದೇವಸ್ಥಾನದಲ್ಲಿ ಮೃಗ ಬಲಿ – ದೇವಸ್ವಂ ಸಚಿವರು ಹೇಳಿದ್ದೇನು?
ಮಣಿಪುರ: ಚುನಾವಣೆ ಬಹಿಷ್ಕಾರ ಕ್ಕೆ ಕರೆ ಕೊಟ್ಟ ಕುಕಿ!!
ಬಡತನದಿಂದ ಬಳಲುತ್ತಿರುವ ಕುಟುಂಬದ ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಷಕ್ಕೆ 1 ಲಕ್ಷ ರೂಪಾಯಿ
ಸಯ್ಯಿದ್ ಹಸನುಲ್ ಅಹ್ದಲ್ ತಂಙಳರಿಗೆ ಗೌರವ ‘ಅತ್ತಕ್ರೀಂ’- ಸ್ವಾಗತ ಸಮಿತಿ ಅಸ್ತಿತ್ವಕ್ಕೆ
ಪುಟ್ಟ ಬಾಲಕಿಯ ಅತ್ಯಾಚಾರ,ಹತ್ಯೆ ಪ್ರಕರಣ- ಆರೋಪಿ ಅಶ್ಫಾಕ್ ಆಲಂಗೆ ಮರಣ ದಂಡನೆ
ಕಳಮಶ್ಶೇರಿಯಲ್ಲಿ ಬಾಂಬ್ ಸ್ಫೋಟಿಸಿದ್ದು ಡೊಮಿನಿಕ್ ಮಾರ್ಟಿನ್- ದೃಢೀಕರಿಸಿದ ಪೊಲೀಸ್
ಕಳಮಶ್ಶೇರಿಯಲ್ಲಿ ಬಾಂಬ್ ಇಟ್ಟಿದ್ದು ನಾನೇ – ಪೊಲೀಸ್ ಠಾಣೆಯಲ್ಲಿ ಶರಣಾಗಿ ತಪ್ಪೊಪ್ಪಿಗೆ
ಕಳಮಶ್ಶೇರಿ ಘಟನೆ ಬಾಂಬ್ ಸ್ಪೋಟದಿಂದ- ಖಚಿತಪಡಿಸಿದ ಡಿಜಿಪಿ ಶೇಖ್ ದರ್ವೇಶ್