ಉಳ್ಳಾಲ: ಅನಿವಾಸಿ ಕನ್ನಡಿಗರ ಸಂಘಟನೆಯಾದ ಕೆಸಿಎಫ್ ರಿಯಾದ್ ಝೊನ್ ಸಮಿತಿಯಿಂದ ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್ ಸಮಿತಿಗೆ ಆಂಬ್ಯುಲೆನ್ಸ್ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಕೆಸಿಎಫ್ ರಿಯಾದ್ ಝೊನ್ ಸಮಿತಿಯ ಸದಸ್ಯರಾದ ನಝೀರ್ ಉಸ್ತಾದ್ ರವರ ದುಆದೊಂದಿಗೆ ಆರಂಭಿಸಿದ ಕಾರ್ಯಕ್ರಮದಲ್ಲಿ ಕೆಸಿಎಫ್ ಅಂತರ್ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಾ॥ಶೇಖ್ ಬಾವ ಹಾಜಿ ರವರು ಶಾಸಕರಾದ ಯು. ಟಿ. ಖಾದರ್ ರವರ ಸಮ್ಮುಖದಲ್ಲಿ ಆಂಬ್ಯುಲೆನ್ಸ್ ಕೀಯನ್ನು ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್ ಸಮಿತಿಗೆ ಹಸ್ತಾಂತರ ಮಾಡಿದರು.
“ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವವರು ಅಲ್ಲಾಹನಿಗೆ ಬಹಳ ಇಷ್ಟವಾದವರು ಹಾಗೂ ಇದು ಲೋಕ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ತಂಙಳ್ ರವರಿಗೂ ಬಹಳ ಸಂತೋಷವನ್ನು ನೀಡುವ ಕಾರ್ಯವಾಗಿದೆ” “ಸಮಾಜ ಸೇವೆ ಇಸ್ಲಾಮಿನ ತತ್ವಗಳಲ್ಲಿ ಬಹುದೊಡ್ಡ ಭಾಗವಾಗಿದೆ” ಈ ಕೆಲಸವನ್ನು ಕರ್ನಾಟಕ ಕಲ್ಚರಲ್ ಫೌಂಡೇಶನ್ ಸಮಿತಿ ಮಾಡುತ್ತಿದೆ ಎಂದು ಕಾರ್ಯಕ್ರಮದಲ್ಲಿ ಮಾತನಾಡಿದ ವೆಸ್ಟ್ ಝೊನ್ ಅಧ್ಯಕ್ಷರು ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಯವರು ಹೇಳಿದರು.
ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್ ನ ಅಧ್ಯಕ್ಷರಾದ ಇರ್ಫಾನ್ ನೂರಾನಿ ಯವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಿಯಾದ್ ಝೊನ್ ಸಮಿತಿಯ ನಾಯಕರಾದ ಹನೀಫ್ ಕಣ್ಣೂರು, ಅಶ್ರಫ್ ಮದನಿ, ಅಶ್ರಫ್ KMS, ಅಮಾನಿ ಉಸ್ತಾದ್, ಸುನ್ನೀ ಸಂಘಟನೆಯ ನಾಯಕರಾದ ಪಾರೂಕ್ ಅಬ್ಬಾಸ್ ಉಳ್ಳಾಲ, ಸಲೀಮ್ ಕನ್ಯಾಡಿ ಹಾಗೂ ಎಸ್ಸೆಸ್ಸೆಫ್ ದ ಕ ಜಿಲ್ಲಾ ನಾಯಕರಾದ ಸಯ್ಯಿದ್ ಖುಬೈಬ್ ತಂಙಳ್, ಶರೀಫ್ ನಂದಾವರ, ರಶೀದ್ ಹಾಜಿ ವಗ್ಗ, ಶರೀಫ್ ಬೇರ್ಕಲ, ಇಕ್ಬಾಲ್ ಮಾಚಾರ್, ಹಕೀಂ ಕಳಂಜಿಬೈಲು,ಹಾಗೂ ವೆಸ್ಟ್ ಝೊನ್ ನಾಯಕರಾದ ಹೈದರ್ ಕಾಟಿಪಳ್ಳ, ಮನ್ಸೂರ್ ಬಜಾಲ್, ಜಿ ಎ ಇಬ್ರಾಹಿಮ್, ಹಕೀಮ್ ಪೂಮಣ್ಣ್, ಹಮೀದ್ ತಲಪಾಡಿ, ಉಸ್ಮಾನ್ ಕೆ ಸಿ ರೊಡ್, ಕುಂಞಿ ಮೊನು , UB ಹಾಜಿ, ಇಸ್ಮಾಯಿಲ್ BH ಹಾಗೂ ಸುನ್ನೀ ಸಂಘಟನೆಗಳ ನಾಯಕರುಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
KCF ಸೌದಿ ರಾಷ್ಟ್ರೀಯ ಸಮಿತಿ ಸಂಘಟನಾ ಕಾರ್ಯದರ್ಶಿ ಬಶೀರ್ ತಲಪ್ಪಾಡಿ ಯವರು ಕೆಸಿಎಫ್ ರಿಯಾದ್ ಝೊನ್ ಸಮಿತಿಯ ಹಲವಾರು ಯೋಜನೆಗಳನ್ನು ವಿವರಿಸಿದರು.
ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್ ಪ್ರಧಾನ ಕಾರ್ಯದರ್ಶಿ ಜಾಫರ್ ಯು ಎಸ್ ರವರು ಕಾರ್ಯಕ್ರಮವನ್ನು ಸ್ವಾಗತಿಸಿ
ನಿರೂಪಿಸಿದರು.















ಇನ್ನಷ್ಟು ಸುದ್ದಿಗಳು
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ