ಬೆಂಗಳೂರು: ಏಳನೇ ತರಗತಿಯವರೆಗಿನ ಮಕ್ಕಳಿಗೆ ಆನ್ಲೈನ್ ಕ್ಲಾಸ್ ಮಾಡುವಂತಿಲ್ಲ ಎಂದು ಸರ್ಕಾರ ನಿರ್ಧರಿಸಿದೆ ಎಂಬಂತಹ ಸುದ್ದಿಯನ್ನ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಳ್ಳಿಹಾಕಿದ್ದಾರೆ. ಪ್ರೀಸ್ಕೂಲ್ ಮತ್ತು ಒಂದರಿಂದ ಐದನೇ ತರಗತಿಯವರೆಗೆ ಆನ್ಲೈನ್ ತರಗತಿಗಳನ್ನ ನಿಷೇಧಿಸಲು ಸರ್ಕಾರ ನಿರ್ಧರಿಸಿದೆ ಎಂದು ಸಚಿವರು ಇವತ್ತು ಟ್ವೀಟ್ ಮಾಡಿದ್ದಾರೆ.
ಏಳನೇ ತರಗತಿಯವರೆಗೆ ಆನ್ಲೈನ್ ಪಾಠಕ್ಕೆ ಅವಕಾಶ ನೀಡಬಾರದು ಎಂಬುದು ಕೆಲ ಸಂಪುಟ ಸದಸ್ಯರ ಸಲಹೆ ಮಾತ್ರವಾಗಿದೆ. ಅನೌಪಚಾರಿಕವಾಗಿ ನಡೆದ ಚರ್ಚೆಯ ವೇಳೆ ಬಂದ ಸಲಹೆ ಇದಾಗಿದೆ. ಸಂಪುಟದಲ್ಲಿ ಈ ನಿರ್ಧಾರ ತೆಗೆದುಕೊಂಡಿಲ್ಲ ಎಂದು ತಮ್ಮ ಟ್ವೀಟ್ನಲ್ಲಿ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
Karnataka Govt has decided to stop all On-line classes for LKG, UKG & classes up to 5th std.
To extend this up to 7th std is only a suggestion from few cabinet ministers as expressed in an informal discussion and NOT a decision.— S.Suresh Kumar, Minister – Govt of Karnataka (@nimmasuresh) June 11, 2020
ಅಂದರೆ ಆರನೇ ತರಗತಿಯಿಂದ ಆನ್ಲೈನ್ ಕ್ಲಾಸ್ಗಳನ್ನ ನಡೆಸಲು ಅನುಮತಿ ಇದ್ದಂತಾಗಿದೆ. ನಿನ್ನೆ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿತ್ತು. ಏಳನೇ ತರಗತಿಯವರೆಗೆ ಆನ್ಲೈನ್ ಕ್ಲಾಸ್ ರದ್ದು ಮಾಡಲಾಗಿದೆ ಎಂದು ಕೆಲ ಮುಖಂಡರು ಹೇಳಿದ್ದರು. ಇವತ್ತು ಸಚಿವ ಮಾಧು ಸ್ವಾಮಿ ಕೂಡ ಇದನ್ನೇ ಪುನರುಚ್ಚರಿಸಿದ್ದರು. ಅದಾದ ಬೆನ್ನಲ್ಲೇ ಶಿಕ್ಷಣ ಸಚಿವರೇ ಟ್ವೀಟ್ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ.