ನವದೆಹಲಿ:ಶಾಶ್ವತ ಖಾತೆ ಸಂಖ್ಯೆ (PAN) ಎಂದರೆ ಪ್ಯಾನ್ ಕಾರ್ಡ್ (PAN Card) ಒಂದು ಪ್ರಮುಖ ದಾಖಲೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಪ್ಯಾನ್ ಕಾರ್ಡ್ ಇಲ್ಲದೆ ನಿಮ್ಮ ಅನೇಕ ಕೆಲಸಗಳು ಸ್ಥಗಿತಗೊಳ್ಳಬಹುದು. ಆದಾಯ ತೆರಿಗೆ ರಿಟರ್ನ್ ಸಲ್ಲಿಸಬೇಕೆ ಅಥವಾ 50,000 ರೂ.ಗಿಂತ ಹೆಚ್ಚಿನ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಡಬೇಕಾದರೆ ಹೀಗೆ ಹಣಕಾಸಿನ ವಹಿವಾಟಿಗೆ ಸಂಬಂಧಿಸಿದ ಕೆಲಸಗಳಿಗಾಗಿ ಪ್ಯಾನ್ ಕಾರ್ಡ್ ಹೊಂದಿರುವುದು ಅತ್ಯಾವಶ್ಯಕ.
ಕೇಂದ್ರ ಸರ್ಕಾರ ಇದೀಗ ಪ್ಯಾನ್ ಕಾರ್ಡ್‌ಗಳನ್ನು ಪಡೆಯುವ ನಿಯಮಗಳನ್ನು ಸರಳೀಕರಿಸಿದೆ. ಹೀಗಾಗಿ ಇನ್ಮುಂದೆ ನೀವು ಕೇವಲ ಒಂದೇ ಕ್ಲಿಕ್‌ನಲ್ಲಿ ಪ್ಯಾನ್ ಕಾರ್ಡ್ ಪಡೆಯಬಹುದು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಸೌಲಭ್ಯವನ್ನು ಔಪಚಾರಿಕವಾಗಿ ಬಿಡುಗಡೆಗೊಳಿಸಿದ್ದಾರೆ. ಹೀಗಾಗಿ ಇನ್ಮುಂದೆ ಪ್ಯಾನ್ ಸಂಖ್ಯೆಯನ್ನು ಪಡೆಯಲು, ಕೇವಲ ನಿಮ್ಮ ಆಧಾರ್ ಕಾರ್ಡ್ ಮಾತ್ರ ಅಗತ್ಯವಿರುತ್ತದೆ ಮತ್ತು ಕೇವಲ ನಿಮಿಷಗಳಲ್ಲಿ ನಿಮ್ಮ ಪ್ಯಾನ್ ಕಾರ್ಡ್ ನಿಮ್ಮ ಬಳಿ ಇರಲಿದೆ.
ನೀವು ಮನೆಯಲ್ಲಿ ಪ್ಯಾನ್ ಕಾರ್ಡ್ ತಯಾರಿಸಬಹುದು. ಪ್ಯಾನ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ತುಂಬಾ ಸುಲಭ. ನಿಮ್ಮ ಪ್ಯಾನ್ ಕಾರ್ಡ್ ನಿಮಿಷಗಳಲ್ಲಿ ಲಭ್ಯವಾಗುತ್ತದೆ. ಈ ಕಾರ್ಡ್ ಅನ್ನು ಇ-ಪ್ಯಾನ್ (e-PAN) ಎಂದೂ ಕರೆಯುತ್ತಾರೆ. ಅರ್ಜಿ ಸಲ್ಲಿಸಿದ ತಕ್ಷಣ ನೀವು ಅದನ್ನು ಡೌನ್‌ಲೋಡ್ ಮಾಡಬಹುದು. ಹೀಗಾಗಿ ಇನ್ಮುಂದೆ ಪ್ಯಾನ್ ಕಾರ್ಡ್ ಪಡೆಯಲು ನೀವು ಯಾವುದೇ ಕಚೇರಿಯ ಚಕ್ಕರ್ ಹೊಡೆಯುವ ಅವಶ್ಯಕತೆ ಇಲ್ಲ ಹಾಗೂ ದೊಡ್ಡ ದೊಡ್ಡ ಅರ್ಜಿ ಸಲ್ಲಿಸುವ ಅವಶ್ಯಕತೆ ಕೂಡ ಇಲ್ಲ.
ಈ ಕುರಿತು ವರ್ಷ 2020-21ರ ಬಜೆಟ್ ಭಾಷಣದಲ್ಲಿ ಘೋಷಣೆ ಮಾಡಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ತತ್ಕಾಲ್ ಪ್ಯಾನ್ ಕಾರ್ಡ್ ವಿತರಿಸುವ ಸೇವೆ ಆರಂಭಿಸಲಾಗುವುದು ಎಂದು ಹೇಳಿದ್ದರು . ಈ ಸೌಲಭ್ಯದ ಪ್ರಕಾರ ಯಾವ ವ್ಯಕ್ತಿಯ ಆಧಾರ್ ಸಂಖ್ಯೆ ಮೊಬೈಲ್ ನಂಬರ್ ಜೊತೆಗೆ ಲಿಂಕ್ ಆಗಿದೆಯೋ ಅವರು ಆದಾಯ ತೆರಿಗೆ ಇಲಾಖೆಯ ವೆಬ್ ಸೈಟ್ ಘೆ ಭೇಟಿ ನೆಇದ್ e-PANಗೆ ಅರ್ಜಿ ಸಲ್ಲಿಸಬಹುದು. ಬಳಿಕ ನಿಮಗೆ ಶೀಘ್ರದಲ್ಲಿಯೇ ನಿಮ್ಮ ಪ್ಯಾನ್ ನಂಬರ್ ಹಂಚಿಕೆಯಾಗಲಿದೆ. ಈ ಹಂಚಿಕೆ OTP ಆಧರಿಸಿ ಇರಲಿದೆ.
ಇ-ಪ್ಯಾನ್ ಕಾರ್ಡ್ ಪಡೆಯುವುದು ಹೇಗೆ?



- ಮೊದಲನೆಯದಾಗಿ, ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್ incometaxindiaefiling.gov.in ಗೆ ಭೇಟಿ ನೀಡಿ
- ಇಲ್ಲಿ ಆಧಾರ್ ಮೂಲಕ ಇನ್ಸ್ಟಂಟ್ ಪ್ಯಾನ್ ಮೇಲೆ ಕ್ಲಿಕ್ ಮಾಡಿ.
- ಹೊಸ ಪುಟ ತೆರೆಯುತ್ತದೆ, ಇಲ್ಲಿ ನೀವು “Get New PAN” ಮೇಲೆ ಕ್ಲಿಕ್ ಮಾಡಬೇಕು.
- ಮತ್ತೊಂದು ಹೊಸ ಪುಟ ತೆರೆಯುತ್ತದೆ. ಆಧಾರ್ ಸಂಖ್ಯೆಯನ್ನು ಇಲ್ಲಿ ಭರ್ತಿ ಮಾಡಬೇಕಾಗುತ್ತದೆ.
- ಕ್ಯಾಪ್ಚಾ ಕೋಡ್ ಅನ್ನು ನಮೂದಿಸಬೇಕಾಗಿದೆ.
- ಅದರ ನಂತರ ಒಟಿಪಿ ರಚಿಸಿ. ಒಟಿಪಿ ನಮೂದಿಸಬೇಕಾಗಿದೆ.
- ಆಧಾರ್ ವಿವರಗಳನ್ನು ದೃಢಪಡಿಸಿ.
- ಪ್ಯಾನ್ ಕಾರ್ಡ್‌ಗಾಗಿ ಇಮೇಲ್ ಐಡಿ ನಮೂದಿಸಿ. ಆಧಾರ್ ಇ-ಕೆವೈಸಿ ಡೇಟಾವನ್ನು ಇ-ಪ್ಯಾನ್‌ಗೆ ವರ್ಗಾಯಿಸಲಾಗುತ್ತದೆ.
- ಈ ಸಂಪೂರ್ಣ ಪ್ರಕ್ರಿಯೆಯನ್ನು ಮಾಡಲು ನಿಮಗೆ ಕೇವಲ 10 ನಿಮಿಷಗಳು ಬೇಕಾಗುತ್ತದೆ.
- ಪ್ರಕ್ರಿಯೆಯು ಪೂರ್ಣಗೊಂಡ ನಂತರ, ನಿಮ್ಮ ಮೊಬೈಲ್ ಗೆ PAN ಕಾರ್ಡ್ ರೆಡಿಯಾಗಿದೆ ಎಂಬ ಸಂದೇಶ ಬರಲಿದೆ.
- ಮತ್ತೆ ಅದೇ ವೆಬ್ಸೈಟ್ ಗೆ ಭೇಟಿ ನೀಡಿ “Get New PAN” ಎದುರುಗಡೆಯ “Check Status/Download PAN” ಕ್ಲಿಕ್ ಮಾಡಿ, ಇ-ಪ್ಯಾನ್ ಪಿಡಿಎಫ್ ರೂಪದಲ್ಲಿ ಕಂಡುಬರುತ್ತದೆ. ಅದನ್ನು ಡೌನ್‌ಲೋಡ್ ಮಾಡಲು ಆಧಾರ್ ಸಂಖ್ಯೆಯನ್ನು ನಮೂದಿಸಬೇಕು.ಇದನ್ನು ನೀವು ಇ-ಮೇಲ್ ಮೂಲಕ ಕೂಡ ಪಡೆಯಬಹುದು.
- pdf ಫೈಲ್ ತೆರೆಯಲು ನಿಮ್ಮ ಜನನ ದಿನಾಂಕವನ್ನು ನೀಡಬೇಕಾಗಿದೆ. (ಉದಾ:01/01/2020 ಆದಲ್ಲಿ 01012020 ಎಂದು ನಮೂದಿಸಬೇಕು)
ಪ್ಯಾನ್ ಕಾರ್ಡ್‌ಗಿಂತ ಇ-ಪ್ಯಾನ್ ಉತ್ತಮವಾಗಿದೆ!
ಪ್ಯಾನ್ ಕಾರ್ಡ್‌ನ ಭೌತಿಕ ನಕಲುಗಿಂತ ಇ-ಪ್ಯಾನ್ ಉತ್ತಮವಾಗಿದೆ. ಅದನ್ನು ಕಳೆದುಕೊಳ್ಳುವ ಯಾವುದೇ ತೊಂದರೆಗಳಿರುವುದಿಲ್ಲ. ಹೇಗಾದರೂ ನೀವು ಅದರ ನಕಲನ್ನು ಬಯಸಿದರೆ, ನೀವು ಅದನ್ನು 50 ರೂಪಾಯಿಗೆ ಮುದ್ರಿಸಬಹುದು ಮತ್ತು ಲ್ಯಾಮಿನೇಟ್ ಮಾಡಬಹುದು.
ಈ 10 ಕೆಲಸಗಳಿಗೆ ಪ್ಯಾನ್ ಕಾರ್ಡ್ ಅತ್ಯಗತ್ಯ:
- ನೀವು ಒಂದು ವರ್ಷದಲ್ಲಿ 2.5 ಲಕ್ಷಕ್ಕೂ ಹೆಚ್ಚು ವಹಿವಾಟು ನಡೆಸಿದರೆ ಪ್ಯಾನ್ ಅಗತ್ಯವಿರುತ್ತದೆ.
- 5 ಲಕ್ಷಕ್ಕಿಂತ ಹೆಚ್ಚಿನ ವಹಿವಾಟು ನಡೆಸುವ ವ್ಯಾಪಾರ ಸಂಸ್ಥೆಯ ಪ್ಯಾನ್ ಅಗತ್ಯವಿದೆ. ವ್ಯವಹಾರವನ್ನು ಪ್ರಾರಂಭಿಸುವಾಗ ಇದು ಅಗತ್ಯವಾಗಿರುತ್ತದೆ.
- ನೀವು ಕಾರು, ಬೈಕು ಅಥವಾ ಯಾವುದೇ ವಾಹನವನ್ನು ಖರೀದಿಸುತ್ತಿದ್ದರೆ ಪ್ಯಾನ್ ಅಗತ್ಯವಿದೆ.
- 10 ಲಕ್ಷಕ್ಕಿಂತ ಹೆಚ್ಚಿನ ಸ್ಥಿರ ಆಸ್ತಿಯನ್ನು ಮಾರಾಟ ಮಾಡಲು ಪ್ಯಾನ್ ನೀಡುವುದು ಅವಶ್ಯಕ.
- 2 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಯಾವುದೇ ಸರಕು ಮತ್ತು ಸೇವೆಗೆ ಪ್ಯಾನ್ ಅಗತ್ಯವಿದೆ.
- ಬ್ಯಾಂಕ್ ಖಾತೆ ತೆರೆಯುವಲ್ಲಿಯೂ ಇದು ಅಗತ್ಯವಾಗಿರುತ್ತದೆ. ಖಾತೆಯಲ್ಲಿ 50 ಸಾವಿರಕ್ಕಿಂತ ಹೆಚ್ಚು ಹಣವನ್ನು ಠೇವಣಿ ಮಾಡಿದರೆ, ನಂತರ ಪ್ಯಾನ್ ಸಂಖ್ಯೆ ಅಗತ್ಯ.
- ನೀವು 50 ಸಾವಿರಕ್ಕಿಂತ ಹೆಚ್ಚಿನ ಜೀವ ವಿಮೆಯನ್ನು ತೆಗೆದುಕೊಂಡರೂ ಪ್ಯಾನ್ ಅಗತ್ಯವಿದೆ.
- ಇದಲ್ಲದೆ ಮ್ಯೂಚುವಲ್ ಫಂಡ್, ಬಾಂಡ್, ವಿದೇಶಿ ಕರೆನ್ಸಿ, ಎಲ್ಲಿಯಾದರೂ ಹೂಡಿಕೆ ಮಾಡಲು ಪ್ಯಾನ್ ಅಗತ್ಯವಿದೆ.
- ನೀವು 1 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ಪಟ್ಟಿಮಾಡದ ಷೇರುಗಳನ್ನು ಖರೀದಿಸಿದರೂ ಪ್ಯಾನ್ ಅಗತ್ಯವಿದೆ.
- ಹೊಸ ನಿಯಮದ ಪ್ರಕಾರ ಈಗ ಪ್ಯಾನ್ ಕಾರ್ಡ್ ಬದಲಿಗೆ ಪ್ಯಾನ್ ಸಂಖ್ಯೆ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ನೀವು ಮೇಲಿನ ಎಲ್ಲಾ ಕೆಲಸಗಳನ್ನು ಯಾವುದೇ ತೊಂದರೆ ತೊಡಕು ಇಲ್ಲದೆ ಮಾಡಲು ಬಯಸಿದರೆ ನಂತರ ಪ್ಯಾನ್ ತೆಗೆದುಕೊಳ್ಳಲು ಮರೆಯಬೇಡಿ.
ಪ್ಯಾನ್ ಕಾರ್ಡ್ ಎಂದರೇನು?
ಆದಾಯ ತೆರಿಗೆ ಇಲಾಖೆ ಶಾಶ್ವತ ಖಾತೆ ಸಂಖ್ಯೆಯನ್ನು ನೀಡುತ್ತದೆ. ಹಣಕಾಸಿನ ವಹಿವಾಟಿನ ಪ್ರಮುಖ ದಾಖಲೆಗಳಲ್ಲಿ ಇದು ಒಂದು. ಇದು 10 ಅಂಕಿಗಳ ಆಲ್ಫಾನ್ಯೂಮರಿಕ್ ಸಂಕೇತವಾಗಿದೆ. ವ್ಯಕ್ತಿಗಳು, ಸಂಸ್ಥೆಗಳು, ಕಂಪನಿಗಳು, ವ್ಯಕ್ತಿಗಳ ಸಂಘಟನೆ, ವೈಯಕ್ತಿಕ ಸಂಸ್ಥೆಗಳು, ಹಿಂದೂ ಅವಿಭಜಿತ ಕುಟುಂಬಗಳು, ಸಹಕಾರ ಸಂಘಗಳು, ಸರ್ಕಾರಿ ಸಂಸ್ಥೆಗಳು, ಕೃತಕ ನ್ಯಾಯಾಂಗ ವ್ಯಕ್ತಿಗಳು, ಸ್ಥಳೀಯ ಪ್ರಾಧಿಕಾರಗಳು, ಸೀಮಿತ ಹೊಣೆಗಾರಿಕೆ ಪಾಲುದಾರಿಕೆಗಳು, ಟ್ರಸ್ಟ್‌ಗಳು ಮತ್ತು ತೆರಿಗೆ ಪಾವತಿದಾರರಿಗೆ ಪ್ಯಾನ್ ಕಾರ್ಡ್ ಅಗತ್ಯವಿದೆ. ಜನರು ಮತ್ತು ಸಂಸ್ಥೆಗಳಲ್ಲಿ ತೆರಿಗೆ ವಂಚನೆ ತಡೆಗಟ್ಟಲು ಪ್ಯಾನ್ ಕಾರ್ಡ್ ನೀಡಲಾಯಿತು. ಇದು ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯಿಂದ ಹಣಕಾಸಿನ ವಹಿವಾಟಿಗೆ ಸಂಪರ್ಕ ಕಲ್ಪಿಸುತ್ತದೆ, ಇದರ ಸಂಪೂರ್ಣ ದಾಖಲೆ ಆದಾಯ ತೆರಿಗೆ ಇಲಾಖೆಯೊಂದಿಗೆ ಇರುತ್ತದೆ.






