ಉಳ್ಳಾಲ: SSF ಕರ್ನಾಟಕ ರಾಜ್ಯ ಆದೇಶದಂತೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಇದರ ಸದಸ್ಯರಾದ ಮೌಲಾನ ಶಾಫಿ ಸಅದಿ ಉಸ್ತಾದರ ನಿರ್ದೇಶನದ ಮೇರೆಗೆ ಮಂಜನಾಡಿ ನೆತ್ತಿಲ ಪದವು ನಲ್ಲಿರುವ 115 ಅರ್ಹ ಕುಟುಂಬಗಳಿಗೆ ಜಾತಿ ಮತ ವ್ಯತ್ಯಾಸವಿಲ್ಲದೆ ದ.ಕ ಜಿಲ್ಲಾ ವೆಸ್ಟ್ ಝೋನ್ ವತಿಯಿಂದ ಈದ್ ಕಿಟ್ ವಿತರಣೆಯನ್ನು ಮಾಡಲಾಯಿತು.
ಕಿಟ್ ವಿತರಣೆಯ ಮುಂಚಿತವಾಗಿ ಜರುಗಿದ ಸಭಾ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ನಾಯಕರಾದ ಸಯ್ಯಿದ್ ಖುಬೈಬ್ ತಂಙಳ್ ದುಆಗೈದರು. ಎಸ್ಸೆಸ್ಸೆಫ್ ದ.ಕ ಜಿಲ್ಲಾ ವೆಸ್ಟ್ ಝೋನ್ ನಾಯಕರು ಹಾಗೂ ಮುಡಿಪು ಡಿವಿಷನ್ ಅಧ್ಯಕ್ಷ ಇಬ್ರಾಹಿಂ ಅಹ್ಸನಿ ಉಸ್ತಾದರು ಉದ್ಘಾಟಿಸಿದರು. ಜಿಲ್ಲಾ ವೆಸ್ಟ್ ಝೋನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಸ್ತಾದ್ ಉಳ್ಳಾಲ ಸಂದೇಶ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ದ.ಕ ಜಿಲ್ಲಾ ವೆಸ್ಟ್ ಝೋನ್ ನಾಯಕರಾದ ಹಕೀಂ ಪೂಮನ್ನು, ಉಳ್ಳಾಲ ಡಿವಿಷನ್ ನಾಯಕರು, ಬ್ಲಡ್ ಸೈಬೋ ಉಸ್ತುವಾರಿಗಳಾದ ಅಲ್ತಾಫ್ ಶಾಂತಿಭಾಗ್, ದೇರಳಕಟ್ಟೆ ಸೆಕ್ಟರ್ ನಾಯಕರಾದ ಆಶಿಕ್ ಕಲ್ಪಾದೆ,ರಫೀಕ್ ತಿಬ್ಲಪದವು, ಸಫ್ವಾನ್ ಬದ್ಯಾರ್,ಅನೀಸ್, ಶಿಹಾಬ್ ಉಳ್ಳಾಲ, ನಿಝಾಮ್ ಒಂಬತ್ತು ಕೆರೆ ಮುಂತಾದವರು ಉಪಸ್ಥಿತರಿದ್ದರು.
KCF, INC ಜನರಲ್ ಸೆಕ್ರಟರಿ ಖಮರುದ್ದೀನ್ ಗೂಡಿನ ಬಳಿ, ಆಸಿಫ್ ಹಾಜಿ ಗೂಡಿನ ಬಳಿ, ಸಮೀಉಲ್ಲಾ ಗೂಡಿನ ಬಳಿ ಹಾಗೂ ಇಲ್ಯಾಸ್ ಕೈಕೋ ಕಾರ್ಯಕ್ರಮದ ಯಶಸ್ವಿಗಾಗಿ ವಿಶೇಷವಾದ ಸಹಕಾರ ನೀಡಿದ್ದರು.















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ