ದೋಹಾ: ಕೋವಿಡ್ ಸಮೂಹಿಕ ಹರಡುವಿಕೆಯನ್ನು ತಡೆಯುವ ಉದ್ದೇಶದಿಂದ ಖತರ್ ಹೊಸ ಆ್ಯಪ್ ಅನ್ನು ಅಭಿವೃದ್ಧಿ ಪಡಿಸುತ್ತಿದೆ. ಈ ಮೊಬೈಲ್ ಅಪ್ಲಿಕೇಶನ್ಗೆ ‘ಇಹ್ತಿರಾಝ್’ ಎಂದು ಹೆಸರಿಸಲಾಗಿದೆ. ಅಪ್ಲಿಕೇಶನ್ ಸ್ಥಾಪಿಸುವ ಎಲ್ಲರ ಸಂಪರ್ಕ ಪಟ್ಟಿಯಲ್ಲಿರುವವರನ್ನು ಡೇಟಾಬೇಸ್ ಮೂಲಕ ಸಂಪರ್ಕಿಸುವ ಮೂಲಕ ಅಪ್ಲಿಕೇಶನ್ ಕಾರ್ಯನಿರ್ವಹಿಸುತ್ತದೆ.

ಆ್ಯಪ್ ಸಕ್ರಿಯಗೊಳಿಸಿದ ನಂತರ, ನಾಲ್ಕು ಬಣ್ಣಗಳ ನಿಶಾನೆಯನ್ನು ಪ್ರದರ್ಶಿಸುತ್ತದೆ. 1.ಹಸಿರು ಮೊಬೈಲ್ ಫೋನ್ ಬಳಸುವ ವ್ಯಕ್ತಿ ಆರೋಗ್ಯವಂತ ಎಂದು ತಿಳಿಯಬಹುದು. 2.ಗ್ರೇ (ಬೂದು) ಬಣ್ಣವು ಕೋವಿಡ್ ಕಾಯಿಲೆ ಇರುವವರೊಂದಿಗೆ ಸಂಪರ್ಕದಲ್ಲಿರಬಹುದು ಎಂದು ಸೂಚಿಸುತ್ತದೆ. 3.ಹಳದಿ ಬಣ್ಣದ್ದಾಗಿದ್ದರೆ ನೀವು ಈಗಾಗಲೇ ಸಂಪರ್ಕತಡೆ(ಕಾರಂಟೈನ್) ಯಲ್ಲಿ ಇದ್ದವರು ಎಂಬ ಮಾಹಿತಿಯನ್ನು ನೀಡುತ್ತದೆ.3. ಅಪ್ಲಿಕೇಶನ್ನಲ್ಲಿ ಕೆಂಪು ಬಣ್ಣ ಪ್ರಕಾಶಮಾನವಾಗಿದ್ದರೆ ನೀವು ಕೋವಿಡ್ ಸೋಂಕಿಗೆ ಒಳಗಾಗಿದ್ದೀರಿ ಎಂಬುದನ್ನು ಸೂಚಿಸುತ್ತದೆ.
ವ್ಯಕ್ತಿಯ ಅಪ್ಲಿಕೇಶನ್ ಕೆಂಪು ಬಣ್ಣಕ್ಕೆ ತಿರುಗಿದಾಗ, ಅವರ ಫೋನ್ನ ಸಂಪರ್ಕ ಪಟ್ಟಿಯಲ್ಲಿರುವ ಪ್ರತಿಯೊಬ್ಬರೂ ನಿಮ್ಮ ಅನಾರೋಗ್ಯದ ಕುರಿತು ಅಧಿಸೂಚನೆಯನ್ನು ಪಡೆಯುತ್ತಾರೆ. ರೋಗನಿರ್ಣಯ ಕೇಂದ್ರಗಳಲ್ಲಿ ಅವರು ವಿಶೇಷ ಚಿಕಿತ್ಸೆಗೆ ಪರಿಗಣನೆಯನ್ನೂ ಪಡೆಯಲಿದ್ದಾರೆ. ಹೆಚ್ಚು ಜನರು ಈ ಆ್ಯಪ್ ಅನ್ನು ಬಳಸತೊಡಗಿದಾದ, ಸಮೂಹದಲ್ಲಿ ಯಾರು ಯಾರು ಸಂಪರ್ಕತಡೆಯನ್ನು ಉಲ್ಲಂಘಿಸುತ್ತಿದ್ದಾರೆ ಎಂಬುದನ್ನು ಕಂಡುಹಿಡಿಯಲು ಅಧಿಕಾರಿಗಳಿಗೆ ಸುಲಭವಾಗಲಿದೆ.
ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿಯ ವಕ್ತಾರ ಮತ್ತು ವಿದೇಶಾಂಗ ಸಚಿವ ಲುಲ್ವಾ ಅಲ್-ಖಾತಿರ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೊಸ ಆ್ಯಪ್ ಬಿಡುಗಡೆ ಮಾಡುವ ಬಗ್ಗೆ ಘೋಷಿಸಿದರು.
ಅಪ್ಲಿಕೇಶನ್ ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್ಫಾರ್ಮ್ಗಳಲ್ಲಿ ಲಭ್ಯವಿದ್ದು,ದೇಶಾದ್ಯಂತ ಎಲ್ಲರೂ ತಮ್ಮ ಫೋನ್ಗಳಲ್ಲಿ ಈ ಆ್ಯಪ್ ಅನ್ನು ಸ್ಥಾಪಿಸಬೇಕೆಂದು ಲುಲ್ವಾ ಅಲ್-ಖತೀರ್ ಆಗ್ರಹಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ