janadhvani

Kannada Online News Paper

ಅನಿವಾಸಿಗಳಿಗೆ ಕೋರಂಟೈನ್ ಒದಗಿಸಲು ಮರ್ಕಝ್ ಸಮುಚ್ಚಯ ಸಿದ್ಧ- ಎ.ಪಿ.ಉಸ್ತಾದ್

ಕೋಝಿಕ್ಕೋಡ್|ವಿದೇಶದಿಂದ ಮರಳುವ ವಲಸಿಗರನ್ನು ಕೋರಂಟೈನ್ ನಲ್ಲಿರಿಸಲು ಮರ್ಕಝ್ ಮತ್ತು ಸುನ್ನಿ ಸಂಸ್ಥೆಗಳ ಸಮುಚ್ಚಯವನ್ನು ನೀಡಲಾಗುವುದು ಎಂದು ಸಮಸ್ತ ಕೇರಳ ಜಮ್ ಇಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ತಿಳಿಸಿದ್ದಾರೆ. ಎಸ್‌ವೈಎಸ್ ಸಾಂತ್ವನ ತಂಡವು ಅವರ ಆರೈಕೆ ಮತ್ತು ವೈದ್ಯಕೀಯ ಸಹಾಯವನ್ನು ಒದಗಿಸಲಿದೆ ಎಂದು ಅವರು ಹೇಳಿದರು.

ಕೇರಳದ ವಿದ್ಯಾಭ್ಯಾಸ ಮತ್ತು ಸಾಮಾಜಿಕ ಪ್ರಗತಿಗೆ ಗಲ್ಫ್ ವಲಸಿಗರು ಸರಿಸಾಟಿಯಿಲ್ಲದ ಕೊಡುಗೆ ನೀಡಿದ್ದಾರೆ. ಕೊಲ್ಲಿ ರಾಷ್ಟ್ರಗಳಲ್ಲಿ ಕೋವಿಡ್ 19 ವ್ಯಾಪಕವಾಗಿ ಹರಡುತ್ತಿದ್ದು, ಹಲವು ಅನಿವಾಸಿಗಳು ಸ್ವದೇಶಕ್ಕೆ ಮರಳಲು ಬಯಸುತ್ತಾರೆ. ಲಾಕ್ ಡೌನ್ ತೆರವುಗೊಳಿಸಿದ ಕೂಡಲೇ ವಲಸಿಗರನ್ನು ವಾಪಸ್ ಕರೆಸಲು ಕ್ರಮ ಕೈಗೊಳ್ಳಬೇಕೆಂದು ನಿನ್ನೆ ಪ್ರಧಾನಿಯವರಿಗೆ ಪತ್ರ ಬರೆದಿರುವುದಾಗಿ ಕಾಂತಪುರಂ ಉಸ್ತಾದ್ ಹೇಳಿದರು.

ಮುಖ್ಯಮಂತ್ರಿಯವರೊಂದಿಗಿನ ದೂರವಾಣಿ ಸಂಭಾಷಣೆಯಲ್ಲೂ ವಲಸಿಗರ ಸಮಸ್ಯೆಗೆ ಆದ್ಯತೆ ನೀಡಬೇಕೆಂದು ವಿನಂತಿಸಿದ್ದಾರೆ. ಪ್ರಧಾನಮಂತ್ರಿಯವರೊಂದಿಗೆ ಚರ್ಚೆಯಲ್ಲಿ ಇದನ್ನು ತಿಳಿಸಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.

ಪ್ರಸ್ತುತ ಪರಿಸ್ಥಿತಿಯಲ್ಲಿ, ವಿವಿಧ ಕೊಲ್ಲಿ ರಾಷ್ಟ್ರಗಳ ಕೈಗಾರಿಕಾ, ಸಾಮಾಜಿಕ ಮತ್ತು ಸಾಂಸ್ಕೃತಿಕ ನಾಯಕರ ಸಂಘಟಿತ ಸಹಕಾರದಿಂದ ವಲಸೆಗಾರರ ಸಂರಕ್ಷಣೆಯನ್ನು ಖಚಿತಪಡಿಸಿಕೊಳ್ಳಬೇಕು. ಎಲ್ಲಿ ಸಾಧ್ಯವೋ ಅಲ್ಲಿ ತ್ವರಿತ ಕಾರನ್ಟೈನ್ ಒದಗಿಸಬೇಕು.

ವಲಸಿಗ ಭಾರತೀಯರ ಭದ್ರತೆಗಾಗಿ ಒತ್ತಾಯಿಸಿ ವಿವಿಧ ಅರಬ್ ರಾಷ್ಟ್ರಗಳ ಆಡಳಿತಗಾರರು, ಭಾರತೀಯ ರಾಯಭಾರಿಗಳು ಮತ್ತು ಗಣ್ಯರೊಂದಿಗೆ ಸಂಪರ್ಕದಲ್ಲಿರುವುದಾಗಿ ಕಾಂತಪುರಂ ಉಸ್ತಾದ್ ಹೇಳಿದರು.

ಉತ್ತಮ ವ್ಯವಸ್ಥೆಗಳು ಮತ್ತು ವಲಸೆಗಾರರನ್ನು ಪರಿಗಣೆಸುವ ಉನ್ನತ ಆಡಳಿತಾಧಿಕಾರಿಗಳಿರುವುದರಿಂದ ಗಲ್ಫ್ ರಾಷ್ಟ್ರಗಳು ಈಗಿನ ಸಂಕಷ್ಟದಿಂದ ಶೀಘ್ರ ಚೇತರಿಸಿಕೊಳ್ಳಲಿದೆ ಎಂಬ ಆಶಾಭಾವನೆ ಇರುವುದಾಗಿ ಅವರು ತಿಳಿಸಿದರು.

error: Content is protected !! Not allowed copy content from janadhvani.com