janadhvani

Kannada Online News Paper

ಮಂಗಳೂರು:ಕೋವಿಡ್ -19 ವ್ಯಾಪಕವಾಗಿ ಹರಡುತ್ತಿರುವ ಈ ಸನ್ನಿವೇಶದಲ್ಲಿ ವಿದೇಶದಲ್ಲಿ ದುಡಿಯುತ್ತಿರುವ ಅನಿವಾಸಿ ಕನ್ನಡಿಗರನ್ನು ಸರಕಾರವು ತಾಯ್ನಾಡಿಗೆ ಕರೆತರುವುದಾದರೆ ಅವರನ್ನು ಕಾರೆಂಟೈನ್ ನಲ್ಲಿರಿಸಲು ದಾರುಲ್ ಇರ್ಶಾದ್ ಸಮುಚ್ಚಯ ಸಿದ್ಧವಿದೆ ಎಂದು ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ತಿಳಿಸಿದ್ದಾರೆ.

ಎಸ್ ವೈ ಎಸ್ ಇಸ್ವಾಬ, ಎಸ್ಸೆಸ್ಸೆಫ್ , ಕೆಸಿಎಫ್ ಮುಂತಾದ ಸ್ವಯಂ ಸೇವಾ ಸಂಘಟನೆಗಳ ಸಹಯೋಗದೊಂದಿಗೆ ದಾರುಲ್ ಇರ್ಶಾದ್ ಅಧೀನದ ಕೆಜಿಎನ್ ಕ್ಯಾಂಪಸ್ ನ‌ ಶಾಲಾ, ಕಾಲೇಜು ಕಟ್ಟಡಗಳನ್ನು ನೀಡಲು ಸಿದ್ಧ ಎಂದು ದಾರುಲ್ ಇರ್ಶಾದ್ ವಿದ್ಯಾಸಂಸ್ಥೆಗಳ ಸಾರಥಿ ಝೈನುಲ್ ಉಲಮಾ ತಿಳಿಸಿದ್ದಾರೆ.

ಜೀವನೋಪಾಯಕ್ಕಾಗಿ ವಿದೇಶದಲ್ಲಿರುವ ನೂರಾರು ಕನ್ನಡಿಗರು ಕೋರೋನ ಭೀತಿಯಿಂದ ಸಂಕಷ್ಟದಲ್ಲಿದ್ದಾರೆ. ಹಲವು ದೇಶಗಳಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಅವರ ಸುರಕ್ಷತೆಯನ್ನು ಸರಕಾರವು ಖಚಿತಪಡಿಸಬೇಕೆಂದು ಕರ್ನಾಟಕ ಸುನ್ನಿ ಜಂಇಯ್ಯತುಲ್ ಉಲಮಾದ ರಾಜ್ಯ ಪ್ರ.ಕಾರ್ಯದರ್ಶಿಯೂ ಆಗಿರುವ ಮಾಣಿ ಉಸ್ತಾದ್ ಒತ್ತಾಯಿಸಿದ್ದಾರೆ.

ಮಂಜನಾಡಿ ಅಲ್ ಮದೀನಾ ಅನಿವಾಸಿ ಕನ್ನಡಿಗರಿಗೆ ತೆರೆದಿಟ್ಟಿದೆ

ಮಂಜನಾಡಿ: ಅನಿವಾಸಿ ಮಿತ್ರರಿಗೆ ಕ್ವಾರಂಟೈನ್ ಸಜ್ಜೀಕರಣಕ್ಕಾಗಿ ಅಲ್ ಮದೀನಾ ಮಂಜನಾಡಿ ಸಂಸ್ಥೆಯನ್ನು ಬಿಟ್ಟುಕೊಡುವುದಾಗಿ ಸಂಸ್ಥೆಯ ಅಧ್ಯಕ್ಷರಾದ ಇಂಡಿಯನ್ ಗ್ರಾಂಡ್ ಮುಫ್ತಿ ಶೈಖುನಾ ಸುಲ್ತಾನುಲ್ ಉಲಮಾ ಮತ್ತು ಕಾರ್ಯದರ್ಶಿ ಇಸ್ಮಾಯಿಲ್ ಅಲ್ ಹಾದಿ ಉಜಿರೆ ತಂಙಳ್ ತಿಳಿಸಿದ್ದಾರೆ.

ಸಂಸ್ಥೆಯ ಜನರಲ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಉಸ್ತಾದ್ ಇದರ ಬಗ್ಗೆ ಮಾಹಿತಿ ನೀಡಿದ್ದಾರೆ.

error: Content is protected !!
%d bloggers like this: