ರಿಯಾದ್: ಸೌದಿ ಅರೇಬಿಯಾದ ಆಡಳಿತಗಾರ ಮತ್ತು ಎರಡು ಹರಮ್‌ಗಳ ಕಾರ್ಯಾಲಯದ ಮುಖ್ಯಸ್ಥರೂ ಆದ ರಾಜ ಸಲ್ಮಾನ್, ಕರೋನಾ ಹರಡುವ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದರು. ಅವರು ತನ್ನ ಭಾಷಣದಲ್ಲಿ ಜಗತ್ತು ಅಸಾಧಾರಣ ಹಂತದ ಮೂಲಕ ಸಾಗುತ್ತಿದ್ದು, ಇವು ಅತ್ಯಂತ ಕಷ್ಟದ ದಿನಗಳಾಗಿವೆ ಎಂದಿದ್ದಾರೆ.
ತನ್ನ ಮಾತು ಮುಂದುವರಿಸುತ್ತಾ, ಕೋವಿಡ್ 19 ರೋಗಿಗಳ ಸಂಖ್ಯೆ ವಿಶ್ವಾದ್ಯಂತ ಹೆಚ್ಚುತ್ತಿದೆ. ಆದ್ದರಿಂದ, ಮುಂದಿನ ಹಂತವು ಹೆಚ್ಚು ಕಷ್ಟಕರ ಮತ್ತು ನಿರ್ಣಾಯಕವಾಗಿದೆ. ಸೌದಿ ಅರೇಬಿಯಾ ದೊಡ್ಡ ಬಿಕ್ಕಟ್ಟುಗಳನ್ನು ಎದುರಿಸಿದ ದೇಶವಾಗಿದೆ. ಇಲ್ಲಿ ಸ್ಥಳೀಯರು ಮತ್ತು ವಿದೇಶಿಯರ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದರು.
ರಾಜ ಸಲ್ಮಾನ್ ದೂರದರ್ಶನದ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದರು.
ದೇಶದ ನಾಗರಿಕರು ಮತ್ತು ವಲಸಿಗರ ಎಲ್ಲಾ ಅಗತ್ಯಗಳನ್ನು ಖಚಿತಪಡಿಸುವುದು. ಕಷ್ಟದ ಕ್ಷಣಗಳನ್ನು ನಿವಾರಿಸಲು ದೇಶವು ಏನು ಬೇಕಾದರೂ ಮಾಡಲಿದೆ. ಇದನ್ನು ಸಾಧಿಸಲು ವಿವಿಧ ಸಚಿವಾಲಯಗಳು ಒಟ್ಟಾಗಿ ಕಾರ್ಯ ನಿರ್ವಹಿಸುತ್ತಿವೆ. ಕರೋನಾ ಹರಡುವಿಕೆಯನ್ನು ತಡೆಯುವ ಸರಕಾರದ ಪ್ರಯತ್ನಗಳು ಯಶಸ್ವಿಯಾಗಬೇಕು. ಇದಕ್ಕೆ ಜನರ ಸಂಪೂರ್ಣ ಸಹಕಾರದ ಅಗತ್ಯವಿದೆ ಎಂದು ಸಲ್ಮಾನ್ ಹೆಳಿದರು.
ಜನರ ಸಹಕಾರದೊಂದಿಗೆ ಈ ಹಂತವನ್ನು ಜಯಿಸಬಹುದೆಂಬ ಭರವಸೆಯೊಂದಿಗೆ ರಾಜ ಸಲ್ಮಾನ್, ದೂರದರ್ಶನದ ತನ್ನ ಭಾಷಣವನ್ನು ಕೊನೆಗೊಳಿಸಿದರು.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ