ತ್ರಿಶೂರ್: ಕೇರಳದ ದೇವಾಲಯದ ಶೌಚಗೃಹದಲ್ಲಿ ಹಾಕಲಾಗಿದ್ದ ‘ಬ್ರಾಹ್ಮಣರಿಗೆ ಮಾತ್ರ’ ಎಂಬ ನಾಮಫಲಕ ದೊಡ್ಡ ವಿವಾದವನ್ನೇ ಸೃಷ್ಟಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಕೇರಳದ ತ್ರಿಶೂರಿನ ಕುಟ್ಟು ಮುಕ್ಕು ಮಹದೇವ ದೇವಸ್ಥಾನದಲ್ಲಿ ಒಟ್ಟು 3 ಶೌಚಗೃಹಗಳಿವೆ. ಈ ಮೂರು ಶೌಚಗೃಹಗಳೂ ನಾಮಫಲಕವನ್ನು ಹೊಂದಿವೆ. ಒಂದು ಕೇವಲ ಮಹಿಳೆಯರಿಗೆ ಮೀಸಲಿದ್ದರೆ, ಮತ್ತೊಂದು ಪುರುಷರಿಗೆ ಮೀಸಲಾಗಿದೆ. ಉಳಿದ ಇನ್ನೊಂದು ಶೌಚಗೃಹಕ್ಕೆ ‘ಬ್ರಾಹ್ಮಣರಿಗೆ ಮಾತ್ರ’ ಎಂಬ ನಾಮಫಲಕ ಹಾಕಲಾಗಿದೆ. ಇದು ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಸದ್ದು ಮಾಡುತ್ತಿದೆ.
ಅರ್ಚಕರು ಹಾಗೂ ದೇಗುಲದ ಆಡಳಿತ ಮಂದಿ ಮಾತ್ರವೇ ಬಳಸುತ್ತಿದ್ದ ಈ ಟಾಯ್ಲೆಟ್ ಅನ್ನು ಕಳೆದ 20 ವರ್ಷಗಳಿಂದಲೂ ಹೀಗೇ ಪ್ರತ್ಯೇಕವಾಗಿ ಬಳಸಿಕೊಂಡು ಬರಲಾಗುತ್ತಿದೆ. ಇದುವರೆಗೂ ಯಾರೊಬ್ಬರೂ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ ಎಂದು ದೇಗುಲದ ಆಡಳಿತ ಸಮಿತಿಯ ಅಧಿಕಾರಿ ಕಣ್ಣನ್ ತಿಳಿಸಿದ್ದಾರೆ. ಪತ್ರಕರ್ತರು ಒಳ್ಳೆಯ ವಿಷಯಗಳನ್ನು ಮಾತ್ರ ಸಮಾಜಕ್ಕೆ ನೀಡಬೇಕು: ಡಾ.ವೀರೇಂದ್ರ ಹೆಗ್ಗಡೆ ಇದೀಗ ‘ಬ್ರಾಹ್ಮಣರಿಗೆ ಮಾತ್ರ’ ಬೋರ್ಡ್ ಕಿತ್ತೊಗೆದು, ‘ಸಿಬ್ಬಂದಿಗೆ ಮಾತ್ರ’ ಎಂದು ಹೊಸ ಬೋರ್ಡ್ ನೇತು ಹಾಕಲಾಗಿದೆ ಎಂದು ಕಣ್ಣನ್ ತಿಳಿಸಿದ್ದಾರೆ















ಇನ್ನಷ್ಟು ಸುದ್ದಿಗಳು
ಚುನಾವಣಾ ಸಂಭ್ರಮಾಚರಣೆ: ಪಟಾಕಿ ಸಿಡಿದು ಮುಸ್ಲಿಂ ಲೀಗ್ ಕಾರ್ಯಕರ್ತ ಮೃತ್ಯು
ತಮ್ಮದೇ ಸರ್ಕಾರ ಮಂಡಿಸಿದ ಜಾತಿ ಸಮೀಕ್ಷೆ ವರದಿಯನ್ನು ಸುಟ್ಟು ಹಾಕಿದ ಕಾಂಗ್ರೆಸ್ ಎಂಎಲ್ಸಿ
ಕರ್ನಾಟಕ ಸರ್ಕಾರವನ್ನು ಬೀಳಿಸಲು ಕೇರಳ ದೇವಸ್ಥಾನದಲ್ಲಿ ಮೃಗ ಬಲಿ – ದೇವಸ್ವಂ ಸಚಿವರು ಹೇಳಿದ್ದೇನು?
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಮಣಿಪುರ: ಚುನಾವಣೆ ಬಹಿಷ್ಕಾರ ಕ್ಕೆ ಕರೆ ಕೊಟ್ಟ ಕುಕಿ!!
ಬಡತನದಿಂದ ಬಳಲುತ್ತಿರುವ ಕುಟುಂಬದ ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಷಕ್ಕೆ 1 ಲಕ್ಷ ರೂಪಾಯಿ
ಸಯ್ಯಿದ್ ಹಸನುಲ್ ಅಹ್ದಲ್ ತಂಙಳರಿಗೆ ಗೌರವ ‘ಅತ್ತಕ್ರೀಂ’- ಸ್ವಾಗತ ಸಮಿತಿ ಅಸ್ತಿತ್ವಕ್ಕೆ
ಪುಟ್ಟ ಬಾಲಕಿಯ ಅತ್ಯಾಚಾರ,ಹತ್ಯೆ ಪ್ರಕರಣ- ಆರೋಪಿ ಅಶ್ಫಾಕ್ ಆಲಂಗೆ ಮರಣ ದಂಡನೆ
ಕಳಮಶ್ಶೇರಿಯಲ್ಲಿ ಬಾಂಬ್ ಸ್ಫೋಟಿಸಿದ್ದು ಡೊಮಿನಿಕ್ ಮಾರ್ಟಿನ್- ದೃಢೀಕರಿಸಿದ ಪೊಲೀಸ್
ಕಳಮಶ್ಶೇರಿಯಲ್ಲಿ ಬಾಂಬ್ ಇಟ್ಟಿದ್ದು ನಾನೇ – ಪೊಲೀಸ್ ಠಾಣೆಯಲ್ಲಿ ಶರಣಾಗಿ ತಪ್ಪೊಪ್ಪಿಗೆ