ರಿಯಾದ್: ಕೊರೋನ ಭೀತಿಯ ಹಿನ್ನೆಲೆಯಲ್ಲಿ, ಮಕ್ಕಾ ಮದೀನಾಗಳ ಹರಮ್ಗಳನ್ನು ಸೋಂಕು ಮುಕ್ತಗೊಳಿಸುವುದರ ಭಾಗವಾಗಿ ಹೆಚ್ಚುವರಿ ನಿರ್ಬಂಧಗಳನ್ನು ವಿಧಿಸಲಾಗಿದೆ. ಕಅಬಾ ಪ್ರಾಂಗಣವನ್ನು ಇಂದು ಸಂಪೂರ್ಣವಾಗಿ ಜನರಿಂದ ಮುಕ್ತಗೊಳಿಸಲಾಯಿತು.

ಕಅಬಾದ ಸುತ್ತಲೂ ಬೆಲ್ಟ್ ನಿರ್ಮಿಸಲಾಗಿದ್ದು, ಈ ಪ್ರದೇಶದಲ್ಲಿನ ದಟ್ಟಣೆಯನ್ನು ಇದು ಕಡಿಮೆ ಮಾಡಲಿದೆ. ತವಾಫ್ ನಿರ್ವಹಣೆಗೆ ಕಅಬಾ ಸುತ್ತ ಇರುವ ಮಾತಾಫ್ ಸಮುಚ್ಚಯವನ್ನು ಉಪಯೋಗಿಸಬಹುದಾಗಿದೆ.

ಕೋವಿಡ್ 19 ರಕ್ಷಣೆಯ ಭಾಗವಾಗಿ ಹರಮ್ ಮಸೀದಿಯ ಬಳಿ ವಿವಿಧ ಬೋರ್ಡ್ಗಳನ್ನು ಸ್ಥಾಪಿಸಲಾಗಿದ್ದು,
ಪ್ರತಿದಿನ ಇಶಾ ನಮಾಝ್ನ ನಂತರ, ಎರಡೂ ಹರಮ್ಗಳನ್ನು ಮುಚ್ಚಲಾಗುತ್ತದೆ. ಪ್ರತೀ ದಿನ 6 ಬಾರಿ ಅಣುಮುಕ್ತಗೊಳಿಸಿ, ಸುಬಹಿ ನಮಾಝ್ಗಿಂತ ಒಂದು ಗಂಟೆ ಮೊದಲು ತೆರೆಯಲಾಗುತ್ತದೆ. ಪ್ರಾರ್ಥನೆ ಸಮಯ ಹೊರತುಪಡಿಸಿ ಕಠಿಣ ಅಣು ನಿರೋಧಕ ವ್ಯವಸ್ಥೆಯನ್ನು ಬಲಪಡಿಸುವ ಗುರಿಯನ್ನು ಈ ನಿರ್ಧಾರ ಹೊಂದಿದೆ ಎಂದು ಸಚಿವಾಲಯವನ್ನು ಉದ್ದರಿಸಿ ಸೌದಿ ಮಾಧ್ಯಮ ವರದಿ ಮಾಡಿದೆ.

ಝಂಝಂ ನೀರು ಸಂಗ್ರಹಿಸುವುದನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಹರಮ್ ಮಸೀದಿಯೊಳಗಿನ ಎಲ್ಲಾ ಝಂಝಂ ಬಾಟಲಿಗಳನ್ನು ಬದಲಾಯಿಸಲಾಗುತ್ತಿದೆ.

ಅದೇ ಸಮಯದಲ್ಲಿ, ಮತಾಫ್ನಲ್ಲಿನ ದಟ್ಟಣೆ ಸ್ವಲ್ಪ ಕಡಿಮೆಯಾಗಿದೆ. ವಿಶ್ವಾಸಿಗಳು ಇನ್ನೂ ಪ್ರಾರ್ಥನೆಗಾಗಿ ತಲುಪುತ್ತಿದ್ದಾರೆ. ಮಸೀದಿಯಲ್ಲಿ ಪ್ರಾರ್ಥನೆ ಬಳಿಕ ಇಅ್ತಿಕಾಫ್ ಕೂರುವುದನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಮಸೀದಿಯ ಒಳಗೆ ಯಾವುದೇ ಆಹಾರ ಪದಾರ್ಥವನ್ನು ಅನುಮತಿಸಲಾಗುವುದಿಲ್ಲ.

ನಿಯಮಗಳು ಮದೀನಾ ಮಸೀದಿಗೂ ಅನ್ವಯಿಸುತ್ತವೆ. ಪ್ರವಾದಿಯವರ ಕುಟುಂಬ, ಸಹಚರರು ಮತ್ತು ಇತರ ಗಣ್ಯರನ್ನು ಸಮಾಧಿ ಮಾಡಲಾದ ಮದೀನಾದ ಜನ್ನತುಲ್ ಬಕೀಅ್ಗೆ ಭೇಟಿ ನೀಡುವುದನ್ನು ಕೂಡ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ