ಶೈಖುನಾ ಅಲ್ ಹಾಜ್ ಪಿ.ಕೆ ಮುಹಮ್ಮದ್ ಮದನಿ ಅಳಕೆ ಉಸ್ತಾದರ ಶಿಷ್ಯ ಸಂಘಟನೆಯಾದ ನಿಬ್ರಾಸುಲ್ ಹುದಾ ಅಸೊಶಿಯೇಶನ್ ವತಿಯಿಂದ ಉಸ್ತಾದರ ಮನೆಯಲ್ಲಿ ಬೃಹತ್ ಪ್ರಾರ್ಥನಾ ಸಂಗಮ ಹಾಗೂ ಜಲಾಲಿಯಾ ರಾತೀಬ್ ಮತ್ತು ಅಜ್ಮೀರ್ ಮೌಲಿದ್, ದ್ಸಿಕ್ರ್ ಮಜ್ಲಿಸ್, ಖತ್ಮುಲ್ ಕುರ್’ಆನ್, ಒಲ್ಡ್ ಸ್ಟೂಡೆಂಟ್ ಮೀಟ್ ಕಾರ್ಯಕ್ರಮವು ಶೈಖುನಾ ಪಿ ಕೆ ಉಸ್ತಾದರ ಅದ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯಲ್ಲಿ ಕರಾಯ ಕಾಸಿಮ್ ಮದನಿ ಉಸ್ತಾದ್ ನಿರ್ವಹಿಸಿದ್ದರು. ಮುಖ್ಯ ಅಥಿತಿಯಾಗಿ ಆಗಮಿಸಿದ ಅಸಯ್ಯಿದ್ ಹಬೀಬುಲ್ಲಾಹ್ ತಂಙಳ್ ಕುಪ್ಪೆಟ್ಟಿ ಮುಖ್ಯ ಪ್ರಭಾಷಣ ಮಾಡಿ ಆಶಿರ್ವದಿಸಿದರು.
ಜಲಾಲಿಯಾ ದ್ಸಿಕ್ರ್ ಮಜ್ಲಿಸ್ ನ ನೇತೃತ್ವವು ಮಸ್ಹೂದ್ ಸಅದಿ ಪದ್ಮುಂಜೆ ಯವರ ವಹಿಸಿದ್ದರು. ಎಲ್ಲಾ ವಿಧ ಸಂಘ ಸಂಸ್ಥೆಗಳು ಗಳಲ್ಲಿ ಗುರುತಿಸಿಕೊಂಡು ಸಮುದಾಯದ ಉನ್ನತಿಗಾಗಿ ಕಾರ್ಯಚರಿಸುತ್ತಿರುವ ನಿಬ್ರಾಸುಲ್ ಹುದಾ ಅಸೊಶಿಯೇಶನ್ ನ ಸದಸ್ಯರಾದ A.P ಆದಮ್ ಮದನಿ ಅತೂರು, ಅಶ್ರಫ್ ಮುಸ್ಲಿಯಾರ್ ಮೂಳೂರು, ಹಸೈನಾರ್ ಆನೆಮಹಲ್ ಇವರುಗಳಿಗೆ ನೆನಪಿನ ಕಾಣಿಕೆ ಮತ್ತು ಶಾಲು ಹೊದಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಹೈದರ್ ಮದನಿ ಕರಾಯ, ಅಬ್ದುರಹ್ಮಾನ್ ಸಖಾಫಿ ಖತೀಬರು ಅಳಕೆ, ಕೆ.ವಿ ಉಸ್ತಾದ್ ಕುದ್ರಡ್ಕ, ಸಿದ್ದೀಖ್ ಸಅದಿ ಸುನ್ನಿ ಸೆಂಟರ್ ಮೂಳೂರು, ಡಾ. M.S ಇಬ್ರಾಹಿಮ್ ಮುಸ್ಲಿಯಾರ್ ಶಿಕಾರಿಪುರ, ಸಲಾಮ್ ಮದನಿ ಖತೀಬರು ಉಡುಪಿ ದೊಡ್ಡಣ್ಣಗುಡ್ಡೆ, ಹಾಗೂ ನಿಬ್ರಾಸುಲ್ ಹುದಾ ಅಸೊಶಿಯೇಶನ್ ಇದರ ಪದಾಧಿಕಾರಿಗಳು,ಉಸ್ತಾದರ ನೂರಾರು ಶಿಷ್ಯರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ನಿಬ್ರಾಸುಲ್ ಹುದಾ ಅಸೊಶಿಯೇಶನ್ ಅಧ್ಯಕ್ಷರಾದ AP ಆದಮ್ ಮದನಿ ಆತೂರು ಸ್ವಾಗತಿಸಿ, ಕಾರ್ಯದರ್ಶಿ ಅಶ್ರಫ್ ಮುಸ್ಲಿಯಾರ್ ಮುಳೂರು ನಿರೂಪಿಸಿದರು.
ವರದಿ: ಅಬ್ದುಲ್ ಅಝೀಝ್ ಝುಹ್ರಿ ಕಿಲ್ಲೂರು















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ