janadhvani

Kannada Online News Paper

ಕೆಸಿಎಫ್ ಒಮಾನ್:ನಾಳೆ ನಿಝ್ವದಲ್ಲಿ ರಾಷ್ಟ್ರೀಯ ಪ್ರತಿಭೋತ್ಸವ

ಕರ್ನಾಟಕ ಕಲ್ಚರಲ್ ಫೌಂಡೇಷನ್ ಒಮಾನ್ ಇದರ ವತಿಯಿಂದ ರಾಷ್ಟ್ರೀಯ ಮಟ್ಟದ ಏಳು ಝೋನ್ ಗಳನ್ನು (ಮಸ್ಕತ್,ಬೌಶರ್,ಸೊಹಾರ್, ನಿಝ್ವ, ಸೀಬ್,ಸಲಾಲ,ಬುರೈಮಿ) ಒಳಗೊಂಡ ಪ್ರತಿಭೋತ್ಸವವು 2020 ಮಾರ್ಚ್ 6 ರಂದು ನಿಝ್ವ ದ ಹೈತುರಾತ್ ನ ಅಲ್ ಬುಸ್ತಾನ್ ಫಾರ್ಮ್ ಹೌಸ್ ನಲ್ಲಿ ನಡೆಯಲಿದೆ.

ಕೆಸಿಎಫ್ ಒಮಾನ್ ರಾಷ್ಟ್ರೀಯ ಅಧ್ಯಕ್ಷ ಜನಾಬ್ ಅಯ್ಯೂಬ್ ಕೊಡಿ ಇವರ ಅಧ್ಯಕ್ಷತೆಯಲ್ಲಿ ಜರಗುವ ಕಾರ್ಯಕ್ರಮದ ಉದ್ಘಾಟನೆಯನ್ನು ಬಹು ಉಮರ್ ಸಖಾಫಿ ಮಿತ್ತೂರ್ ಕಾರ್ಯದರ್ಶಿ ಶಿಕ್ಷಣ ವಿಭಾಗ ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ,ಪ್ರಾಸ್ತಾವಿಕ ಭಾಷಣವನ್ನು ಕೆಸಿಎಫ್ ಒಮಾನ್ ಇದರ ಪ್ರಧಾನ ಕಾರ್ಯದರ್ಶಿ ಸಾದಿಕ್ ಹಾಜಿ ಸುಳ್ಯ ಇವರು ನೆರವೇರಿಸಲಲಿದ್ದಾರೆ.

ಮುಖ್ಯ ಅಥಿತಿಯಾಗಿ ಇಕ್ಬಾಲ್ ಬೊಲ್ಮಾರ್ ಬರ್ಕ ಕಾರ್ಯದರ್ಶಿ ಆಡಳಿತ ವಿಭಾಗ ಕೆಸಿಎಫ್ ಅಂತರರಾಷ್ಟ್ರೀಯ ಸಮಿತಿ, ಹಾಗೂ
ಸಯ್ಯಿದ್ ಆಬಿದ್ ಅಲ್ ಹೈದ್ರೋಸಿ ತಂಙಳ್ ಸಂಘಟನಾ ಅಧ್ಯಕ್ಷರು,ಆರಿಫ್ ಕೊಡಿ ಕೋಶಾಧಿಕಾರಿ, ಉಬೈದುಲ್ಲಾ ಸಖಾಫಿ ಅಧ್ಯಕ್ಷರು ಶಿಕ್ಷಣ ವಿಭಾಗ, ಹಂಝ ಹಾಜಿ ಕನ್ನಂಗಾರ್ ಅಧ್ಯಕ್ಷರು ಇಹ್ಸಾನ್ ಕರ್ನಾಟಕ, ಇಬ್ರಾಹಿಮ್ ಅತ್ರಾಡಿ ಅಧ್ಯಕ್ಷರು ಸಾಂತ್ವನ ವಿಭಾಗ, ಶಮೀರ್ ಉಸ್ತಾದ್ ಹೂಡೆ ಅಧ್ಯಕ್ಷರು ಪಬ್ಲಿಷಿಂಗ್ ವಿಭಾಗ, ಖಾಸಿಂ ಹಾಜಿ ಅಧ್ಯಕ್ಷರು ಆಡಳಿತ ವಿಭಾಗ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿ ಮತ್ತ ನಿಝ್ವ ಝೋನ್ ಅಧ್ಯಕ್ಷರಾದ ಬಾಷ‌ ತೀರ್ಥಹಳ್ಳಿ ಇವರ ಉಪಸ್ಥಿತಿಯಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಫ್ಯಾಮಿಲಿ ಮೀಟ್ ಮತ್ತು ಮಹಿಳೆಯರ ಮತ್ತು ಮಕ್ಕಳ ವಿಭಾಗದ ಸ್ಪರ್ಧಾತ್ಮಕ ಕಾರ್ಯಕ್ರಮ ಹಾಗೂ ಇದರೊಂದಿಗೆ ಬದರ್ ಅಲ್ ಸಮಾ ನಿಝ್ವ ಆಸ್ಪತ್ರೆಯ ಸಹಯೋಗದೊಂದಿಗೆ ಉಚಿತವಾಗಿ ಮೆಡಿಕಲ್ ಕ್ಯಾಂಪ್ ನಡೆಯಲಿದೆ ಎಂದು
ಸ್ವಾಗತ ಸಮಿತಿ ಚಯರ್ಮೆನ್ ಅಬ್ಬಾಸ್ ಮರಕಡ ಮತ್ತು ಕನ್ವೀನರ್ ಝುಬೈರ್ ಸ ಅದಿ ಪಾಟ್ರಕೋಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com