ಉಪ್ಪಿನಂಗಡಿ,ಫೆ 4: ದೇಶದ ರಾಜಧಾನಿ ದೆಹಲಿಯಲ್ಲಿ ಜಾತ್ಯಾಧಾರಿತವಾಗಿ ಒಂದೇ ಧರ್ಮದವರನ್ನು ನೋಡಿ ಆಕ್ರಮಿಸುವುದನ್ನು ನಾವು ಸಹಿಸಲ್ಲ.
ಈ ದೇಶದ ವಾಯು,ಮಣ್ಣು, ಪರಿಸರವನ್ನು ಅನುಭವಿಸಿ ಅನ್ಯ ದೇಶಕ್ಕೆ ಜೈಕಾರ ಕೂಗುವ ದೇಶದ್ರೋಹಿಗಳನ್ನು ದೇಶದಿಂದ ಹೊರದಬ್ಬಲೇಬೇಕು,ಆದರೆ ದೇಶದ ಕರಾಳ ಕಾನೂನುಗಳನ್ನು ಪ್ರಶ್ನಿಸಿ ಮಾಡುವ ಪ್ರತಿಭಟನೆಯನ್ನೂ ದೇಶದ್ರೋಹದ ಪಟ್ಟಿಗೆ ಸೇರಿಸಬೇಡಿ.ಅದು ಪ್ರತಿಯೊಬ್ಬ ಮಾನವನ ಹಕ್ಕಾಗಿದೆ ಎಂದು ಜಿಲ್ಲಾ ಎಸ್ಸೆಸ್ಸೆಫ್ಫ್ ಕೋಶಾಧಿಕಾರಿ ಮುಹಮ್ಮದ್ ಅಲೀ ತುರ್ಕಳಿಕ್ಕೆ ಅಭಿಪ್ರಾಯಪಟ್ಟರು.

ಸುನ್ನೀ ಸ್ಟೂಡೆಂಟ್ಸ್ ಫಡೆರೇಶನ್ (ಎಸ್ಸೆಸ್ಸೆಫ್)* ಜಿಲ್ಲಾ ವ್ಯಾಪ್ತಿಯ 11 ಕೇಂದ್ರಗಳಲ್ಲಿ ನಡೆಸುತ್ತಿರುವ ದೆಹಲಿ ಹಿಂಸಾತ್ಮಕ ಘಟನೆ ವಿರೋಧಿ ಪ್ರತಿಭಟನೆಯ ಭಾಗವಾಗಿ ಎಸ್ಸೆಸ್ಸೆಫ್ಫ್ ಉಪ್ಪಿನಂಗಡಿ ಡಿವಿಷನ್ ವತಿಯಿಂದ ಉಪ್ಪಿನಂಗಡಿ ಹಳೇ ಬಸ್ ನಿಲ್ದಾಣದ ಪೃಥ್ವೀ ಶಾಪಿಂಗ್ ಮಾಲ್ ಮುಂಭಾಗದಲ್ಲಿ ನಡೆದ ಪ್ರತಿರೋಧ ಸಭೆಯಲ್ಲಿ ಅವರು ಮಾತನಾಡಿದರು.

ಎಸ್ಸೆಸ್ಸೆಫ್ ಉಪ್ಪಿನಂಗಡಿ ಡಿವಿಷನ್ ಅಧ್ಯಕ್ಷ ಮುಹಮ್ಮದ್ ಮಿಸ್ಬಾಹಿ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಡಿವಿಷನ್ ನಾಯಕರಾದ, ಮಸೂದ್ ಸಅದಿ,ಇಸಾಕ್ ಮದನಿ,ರಫೀಕ್ ಅಹ್ಸನಿ,ಲತೀಫ್ ಕನ್ಯಾರಕೋಡಿ, ಕೆ.ಎಸ್ ಹಕೀಂ ಕಳಂಜಿಬೈಲು, ಇಬ್ರಾಹಿಂ ಸಅದಿ,ರಹ್ಮಾನ್ ಪದ್ಮುಂಜ,ಶಮೀರ್ ಸಅದಿ, ಹಾರಿಸ್ ಸಖಾಫಿ,ಜುನೈದ್ ತುರ್ಕಳಿಕ್ಕೆ ಹಾಗೂ ವಿವಿಧ ಸೆಕ್ಟರ್ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.
ಪ್ರತಿಭಟನಾ ಭಾಷಣದ ಬಳಿಕ ದೆಹಲಿ ಕೃತ್ಯವನ್ನು ಖಂಡಿಸಿ ಮತ್ತು ತಪ್ಪಿತಸ್ತರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಘೋಷಣೆ ಕೂಗಲಾಯಿತು.
ನಂತರ ತಪ್ಪಿತಸ್ತರ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿ ರಾಷ್ಟ್ರಪತಿಗಳಿಗೆ ಉಪ್ಪಿನಂಗಡಿ ಠಾಣಾಧಿಕಾರಿ ಮೂಲಕ ಮನವಿ ಸಲ್ಲಿಸಲಾಯಿತು.
ಕಾರ್ಯಕ್ರಮವನ್ನು ಡಿವಿಷನ್ ಜೊತೆ ಕಾರ್ಯದರ್ಶಿ ಎಂ.ಎಂ ಮಹ್ ರೂಫ್ ಆತೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಡಿವಿಷನ್ ಪ್ರಧಾನ ಕಾರ್ಯದರ್ಶಿ ಯು.ಪಿ ಮುಸ್ತಫಾ ಧನ್ಯವಾದವಿತ್ತರು.















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ