ಹೊಸದಿಲ್ಲಿ: ನಿರ್ಭಯಾ ಅತ್ಯಾಚಾರಿಗಳನ್ನು ನೇಣುಗಂಬಕ್ಕೆ ಏರಿಸಲು ಮತ್ತೊಮ್ಮೆ ಮುಹೂರ್ತ ನಿಗದಿಯಾಗಿದೆ.ನಿರ್ಭಯಾ ಹಂತಕರ ಕಾನೂನು ಹೋರಾಟದ ನಾಟಕಗಳ ನಂತರ ಈಗ ಗಲ್ಲು ಶಿಕ್ಷೆ ದಿನಾಂಕ ನಿಗದಿಯಾಗಿದೆ. ಮಾರ್ಚ್ 3ರಂದು ಬೆಳಗ್ಗೆ 6 ಗಂಟೆಗೆ ನಾಲ್ವರು ಆರೋಪಿಗಳನ್ನೂ ನೇಣುಗಂಬಕ್ಕೇರಿಸಲು ಡೆತ್ ವಾರಂಟ್ ಜಾರಿ ಮಾಡಲಾಗಿದೆ.
ಅಪರಾಧಿಗಳಾದ ಮುಖೇಶ್ (32), ಪವನ್ ಗುಪ್ತಾ (25), ವಿನಯ್ ಶರ್ಮಾ (26) ಮತ್ತು ಅಕ್ಷಯ್‌ಕುಮಾರ್ ಸಿಂಗ್‌ಗೆ (31) ಡೆತ್ ವಾರಂಟ್ ಜಾರಿಗೊಳಿಸಲಾಗಿದೆ.
ನ್ಯಾಯಾಲಯದ ತೀರ್ಪಿನ ಕುರಿತು ನಿರ್ಭಯಾ ತಾಯಿ ಆಶಾದೇವಿ ಸಂತಸ ವ್ಯಕ್ತಪಡಿಸಿದ್ದಾರೆ. ಹೊಸ ದಿನಾಂಕ ನಿಗದಿ ಮಾಡಿದ್ದು ಸಮಾಧಾನ ತಂದಿದೆ. ಆದರೆ ಈ ಬಾರಿಯಾದರೂ ಇದು ಜಾರಿಯಾಗುತ್ತದಾ ಇಲ್ಲವಾ ಎಂಬ ಸಂಶಯ ಸ್ವಲ್ಪ ಮಟ್ಟಿಗೆ ಈಗಲೂ ಇದೆ. ಆದರೆ ನ್ಯಾಯ ಈಗಲಾದರೂ ನಮಗೆ ದೊರೆಯುತ್ತದೆ ಎಂಬ ನಂಬಿಕೆ ಇದೆ ಎಂದು ಆಶಾದೇವಿ ನ್ಯಾಯಾಲಯದ ಆವರಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳನ್ನೂ ಒಟ್ಟಿಗೇ ಗಲ್ಲಿಗೇರಿಸಲಾಗುತ್ತದೆ. ನಿರ್ಭಯಾ ಅಪರಾಧಿಗಳಿಗೆ ನೇಣು ಕುಣಿಕೆ ಬಿಗಿಯುವ ಮುನ್ನ ಗಲ್ಲಿಗೇರಿಸುವ ‘ಡಮ್ಮಿ ಪ್ರಕ್ರಿಯೆ’ ನಡೆಯಲಿದೆ. ಈಗಾಗಲೇ ತಿಹಾರ್ ಜೈಲಿನಲ್ಲಿ ಒಮ್ಮೆ ಡಮ್ಮಿ ಪ್ರಕ್ರಿಯೆ ಕೂಡ ನಡೆಸಲಾಗಿತ್ತು.















ಇನ್ನಷ್ಟು ಸುದ್ದಿಗಳು
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
ಖುರ್ಆನ್ ದುರ್ವ್ಯಾಖ್ಯಾನಕಾರರಿಂದ ಇಸ್ಲಾಂಗೆ ಭಾರೀ ಹಾನಿಯುಂಟಾಗುತ್ತಿದೆ- ಡಾ. ಝೈನೀ ಕಾಮಿಲ್
ಗ್ಯಾಸ್ ಸಿಲಿಂಡರ್ ಒಂದಕ್ಕೆ 266₹ ಹೆಚ್ಚಳ
ಭಾರತದಿಂದ ಸೌದಿ ಅರೇಬಿಯಾಕ್ಕೆ ನೇರವಾಗಿ ಪ್ರಯಾಣಿಸಲು ಅವಕಾಶ
ಮುಸ್ಲಿಮರು ಸರಕಾರದ ಕೆಲಸ ಮಾಡಬಾರದೇ? ಹಿಂದೂ ರಾಷ್ಟ್ರವಾಯಿತೇ ಭಾರತ!
ಆನ್ಲೈನ್ ಪರೀಕ್ಷೆ: ನಮ್ಮ ವ್ಯವಸ್ಥೆಯಲ್ಲಿ ಸಾಧ್ಯವಿಲ್ಲ- ಉನ್ನತ ಶಿಕ್ಷಣ ಸಚಿವ
ಕೊರೋನಾ ಅಬ್ಬರ: ಲಾಕ್ ಡೌನ್ ಬಗ್ಗೆ ಸಿಎಂ ಮಹತ್ವದ ಸಭೆ
ರಮೇಶ್ ಜಾರಕಿಹೊಳಿ ರಾಸಲೀಲೆ- ಸಂತ್ರಸ್ತೆಯಿಂದ ದೂರು ದಾಖಲು
ಬೆಳಗ್ಗಿನ ಅಝಾನ್ ಕರೆಗೂ ಧ್ವನಿವರ್ಧಕಗಳನ್ನು ಬಳಸಬಹುದು- ವಖ್ಫ್ ಬೋರ್ಡ್