ಸಿಎಎ, ಎನ್ಸಿಆರ್ ನಂತಹ ವಿವಾದಾತ್ಮಕ ಕಾಯ್ದೆಗಳಿಂದ ಬಹುಜನ ಭಾರತೀಯರು ಆತಂಕಕ್ಕೀಡಾಗಿದ್ದು, ಸಂವಿಧಾನವೇ ಪ್ರಶ್ನಿಸಲ್ಪಡುತ್ತಿದೆ. ಈ ಹಿನ್ನೆಲೆಯಲ್ಲಿ ಬಹು ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ವಿಶ್ವ ಸಾಮಾಜಿಕ ನ್ಯಾಯ ದಿನವಾದಫೆಬ್ರವರಿ 20ರಿಂದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜಯಂತಿ ದಿನವಾದ ಏಪ್ರಿಲ್ 14ರ ತನಕ 55ದಿನಗಳ “ಪ್ರಜಾ ಭಾರತ” ಅಭಿಯಾನವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.

ಈ ವೇಳೆ “ದ್ವೇಷ ಬಿಟ್ಟು ದೇಶ ಕಟ್ಟು” ಎಂಬ ಘೋಷಣೆಯೊಂದಿಗೆ ರಾಜ್ಯಾದ್ಯಂತ ವಿವಿಧ ಬಗೆಯ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ತಿಳಿಸಿದರು. ಅಭಿಯಾನದ ಉದ್ಘಾಟನೆ ಫೆಬ್ರವರಿ 20 ಉಡುಪಿಯಲ್ಲಿ ನಡೆಯಲಿದೆ.

ರಾಜ್ಯದ ಮುಸ್ಲಿಂ ಸಮುದಾಯದಲ್ಲಿ ಐಕ್ಯತೆ ಮೂಡಿಸಿ ಸಮಾಜದ ಸಬಲೀಕರಣ ಮತ್ತು ರಾಷ್ಟ್ರಹಿತದ ಸಂರಕ್ಷಣೆಗಾಗಿ ರೂಪುಗೊಂಡಿರುವ ಕರ್ನಾಟಕ ಮುಸ್ಲಿಂ ಜಮಾತ್ ಇದರ ಸದಸ್ಯತನ ಅಭಿಯಾನವು ಮಾರ್ಚ್.1ರಿಂದ 31ರ ತನಕ ನಡೆಯಲಿದೆ ಎಂದು ಪ್ರಧಾನ ಕಾರ್ಯದರ್ಶಿ ಎನ್ ಕೆ ಎಂ ಶಾಫೀ ಸಅದಿ ಹೇಳಿದರು.
ಇಂದು ಬೆಂಗಳೂರಿನ ದಿ ಕೌಂಟಿ ಹೋಟೇಲ್ ನಲ್ಲಿ ನಡೆದ ಮುಸ್ಲಿಂ ಜಮಾತ್ ರಾಜ್ಯ ಪ್ರತಿನಿಧಿ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಉಪಾಧ್ಯಕ್ಷ ಮೌಲಾನಾ ಅಬೂ ಸುಫ್ಯಾನ್ ಮದನಿ ಅಧ್ಯಕ್ಷತೆಯಲ್ಲಿ ನಡೆದ ಪ್ರತಿನಿಧಿ ಸಮಾವೇಶವನ್ನು ಉಪಾಧ್ಯಕ್ಷ ಮೌಲಾನಾ ಮುಫ್ತಿ ಶಬ್ಬೀರ್ ಅಲಿ ನೂರಿ ಬೆಂಗಳೂರು ಉದ್ಘಾಟಿಸಿದರು.
‘ ಭಾರತದ ಪ್ರಚಲಿತ ವಿದ್ಯಮಾನಗಳು ‘ ಎಂಬ ಬಗ್ಗೆ ನಿವೃತ್ತ ಕೆಎಎಸ್ ಅಧಿಕಾರಿ ಈಜಾಝ್ ಅಹ್ಮದ್, “ಮುಸ್ಲಿಮರ ರಾಜಕೀಯ ಸಬಲೀಕರಣ”ದ ಬಗ್ಗೆ ಹಿರಿಯ ಪತ್ರಕರ್ತ ಬಿಎಂ ಹನೀಫ್, ಕರ್ನಾಟಕ ಮುಸ್ಲಿಂ ಜಮಾತ್ ಕಾರ್ಯ ಯೋಜನೆಗಳು ಎಂಬ ಬಗ್ಗೆ ಪತ್ರಕರ್ತ ಅಬ್ದುಲ್ ಹಮೀದ್ ಬಜ್ಪೆ ವಿಷಯ ಮಂಡಿಸಿದರು. ಸಯ್ಯದ್ ಸೈಫುಲ್ಲಾ ದಾವಣಗೆರೆ, ಡಾ. ಬಿ. ಎಂ ಉಮರ್ ಹಾಜಿ ಬೆಂಗಳೂರು, ಮುಹಮ್ಮದ್ ಸಾಗರ, ಅಬ್ದುರ್ರಹ್ಮಾನ್ ನ್ಯಾಷನಲ್ ತಿರ್ಥಹಳ್ಳಿ, ಹಾಜಿ ಅಬೂಬಕರ್ ನೇಜಾರು, ಮೌಲಾನಾ ತಖಿಯುದ್ದೀನ್ ಹಾಸನ, ಅಬ್ದುಲ್ ಅಝೀಝ್ ರಝ್ವಿ ಬಿಜಾಪುರ, ಅಹ್ಮದ್ ಪಾಷಾ ಬೀದರ್, ನ್ಯಾಯವಾದಿ ಜುಲ್ಫಿಕರ್ ಅಲಿ ಚಿತ್ರದುರ್ಗ, ಅಸ್ಮತ್ ಪಾಷಾ ರಾಮನಗರ, ಜಾಕಿರ್ ಹುಸೇನ್ ಮೂಡಿಗೆರೆ, ಝಬೀಉಲ್ಲಾ ರಝ್ವಿ ತುಮಕೂರು, ಗೌಸ್ ಮುರಾದಾನ್ ಬಳ್ಳಾರಿ ಮೊದಲಾದವರು ಉಪಸ್ಥಿತರಿದ್ದರು.















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ