ದೋಹಾ: ಖತರ್‌ನಲ್ಲಿ ಹೊಸ ರಾಷ್ಟ್ರೀಯ ವಿಳಾಸ ಕಾನೂನು ಅನುಷ್ಠಾನಕ್ಕೆ ಪ್ರಾರಂಭವಾಗಿದ್ದು, ಎಲ್ಲಾ ವಿದೇಶಿ ಮತ್ತು ಸ್ವದೇಶಿ ಪ್ರಜೆಗಳು ತಮ್ಮ ವಿಳಾಸ ನೋಂದಣಿಯನ್ನು ಆರು ತಿಂಗಳೊಳಗೆ ಪೂರ್ಣಗೊಳಿಸಬೇಕು. ನೋಂದಣಿ ಪ್ರಕ್ರಿಯೆಯನ್ನು ಆನ್‌ಲೈನ್ ಮತ್ತು ನೇರವಾಗಿಯೂ ಪೂರ್ಣಗೊಳಿಸಬಹುದು.
ದೇಶಾದ್ಯಂತ ನೆಲೆಸಿರುವ ನಿವಾಸಿಗಳ ದಾಖಲೆಗಳನ್ನು ಕಾಯ್ದಿರಿಸುವ ಭಾಗವಾಗಿ ರಾಷ್ಟ್ರೀಯ ವಿಳಾಸ ನೋಂದಣಿ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಎಲ್ಲಾ ಸ್ಥಳೀಯರು ಮತ್ತು ವಿದೇಶಿಯರು ತಮ್ಮ ವಿಳಾಸಗಳನ್ನು ಗೃಹ ಸಚಿವಾಲಯದಲ್ಲಿ ನೋಂದಾಯಿಸಿಕೊಳ್ಳಬೇಕು. ಈ ಕಾರ್ಯಕ್ರಮದ ನೋಂದಣಿ ಪ್ರಾರಂಭವಾಗಿದ್ದು, ಆರು ತಿಂಗಳುಗಳ ಒಳಗೆ ನೋಂದಣಿಯನ್ನು ಪೂರ್ಣಗೊಳಿಸಬೇಕು.
ವಿಳಾಸವನ್ನು ಗೃಹ ಸಚಿವಾಲಯದ ಆನ್‌ಲೈನ್ ಸೇವಾ ವ್ಯವಸ್ಥೆ, ‘ಮೆಟ್ರಾಶ್ ಟು ಆಪ್’ ಮತ್ತು ಗೃಹ ಸಚಿವಾಲಯದ ವೆಬ್‌ಸೈಟ್ ಮೂಲಕವೂ ನೋಂದಾಯಿಸಬಹುದು. ಗೃಹ ಸಚಿವಾಲಯದ ಸೇವಾ ಕೇಂದ್ರಗಳಲ್ಲಿಯೂ ನೋಂದಣಿ ಕಾರ್ಯವನ್ನು ನೇರವಾಗಿ ಮಾಡಬಹುದಾಗಿದೆ.
ಜುಲೈ 26 ನೋಂದಣಿಗೆ ಕೊನೆಯ ದಿನಾಂಕವಾಗಿದೆ. ಮೆಟ್ರಾಶ್ ಟು ನಲ್ಲಿ ಮಾಹಿತಿಯನ್ನು ನೀಡುವಾಗ, 18 ವರ್ಷದೊಳಗಿನ ಮಕ್ಕಳಿಗೆ ಅವರ ಪೋಷಕರು ಮಾಹಿತಿಯನ್ನು ಒದಗಿಸಬೇಕು. ಅದೇ ಸಮಯದಲ್ಲಿ, ಗಂಡ ಮತ್ತು ಹೆಂಡತಿ ಪ್ರತ್ಯೇಕವಾಗಿ ನೋಂದಣಿಯನ್ನು ಪೂರ್ಣಗೊಳಿಸಬೇಕು. ವಿಳಾಸ, ಫೋನ್ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ಸ್ಪಷ್ಟವಾಗಿ ನಮೂದಿಸಬೇಕು.
ಉದ್ಯೋಗದಾತ ಅಥವಾ ಕಂಪನಿಯ ಬಗ್ಗೆ ಮಾಹಿತಿಯನ್ನು ಸಹ ಒದಗಿಸಬೇಕು. ನೋಂದಣಿ ಪೂರ್ಣಗೊಂಡ ನಂತರ, ಗ್ರಾಹಕರು ಒದಗಿಸಿದ ಮಾಹಿತಿಯನ್ನು ದೃಢೀಕರಿಸುವ ಸಂದೇಶವನ್ನು ತಮ್ಮ ಮೊಬೈಲ್ ಮೂಲಕ ಸ್ವೀಕರಿಸುತ್ತಾರೆ. ಆನ್‌ಲೈನ್‌ನಲ್ಲಿ ನೀಡಿದ ನೋಂದಣಿ ವಿಳಾಸಗಳನ್ನು ಮಾರ್ಪಡಿಸುವ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ.
ವಿಳಾಸದ ಮಾಹಿತಿಯನ್ನು ನವೀಕರಿಸದಿದ್ದರೆ ದಂಡ ವಿಧಿಸಲಾಗುತ್ತದೆ. ನೋಂದಾಯಿತ ಮಾಹಿತಿಯು ತಪ್ಪಾಗಿದೆ ಎಂದು ಕಂಡುಬಂದಲ್ಲಿ,10,000 ರಿಯಾಲ್ ವರೆಗೆ ದಂಡ ವಿಧಿಸಲಾಗುತ್ತದೆ.
ಹೊಸ ವಿಳಾಸ ಶಾಸನವು ಸಾರ್ವಜನಿಕರಿಗೆ ವಿವಿಧ ಸರಕಾರಿ ಸಂಸ್ಥೆಗಳ ಸೇವೆಗಳನ್ನು ಒದಗಿಸಲು, ನ್ಯಾಯಾಲಯದ ವಹಿವಾಟುಗಳಿಗೆ ಅನುಕೂಲವಾಗುವಂತೆ ಮತ್ತು ಪೋಸ್ಟರ್ ಸೇವೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಅನುಕೂಲವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ