ಮಸ್ಕತ್: ಒಮಾನ್‌ನಿಂದ ಏರ್ ಇಂಡಿಯಾ ವಿಮಾನ ಮೂಲಕ ಯಾತ್ರೆ ಕೈಗೊಳ್ಳುವವರ ಕ್ಯಾಬಿನ್ ಲಗೇಜ್ ಎಂಟು ಕಿಲೋಗ್ರಾಂಗಳಿಗಿಂತ ಹೆಚ್ಚಿದ್ದರೆ, ಹೆಚ್ಚಿನ ದರ ವಸೂಲು ಮಾಡುವುದಾಗಿ ಕಂಪನಿ ತಿಳಿಸಿದೆ. ಡ್ಯೂಟಿ-ಫ್ರೀ ಶಾಪ್ ಗಳಿಂದ ಖರೀದಿಸಿದ ವಸ್ತುಗಳು ಸೇರಿದಂತೆ ಕೈಚೀಲಗಳಲ್ಲಿ ಗರಿಷ್ಠ 8 ಕಿ.ಗ್ರಾಂ. ಮಾತ್ರ ಉಚಿತ ಎಂದು ಏರ್ ಇಂಡಿಯಾ ಕಳೆದ ವಾರ ಹೇಳಿಕೆಯಲ್ಲಿ ತಿಳಿಸಿದ್ದು, ಈ ನಿರ್ಧಾರವನ್ನು ಒಮಾನ್‌ನ ವಿಮಾನಗಳಲ್ಲಿ ತಕ್ಷಣವೇ ಜಾರಿಗೆ ತರಲಾಗಿದೆ.
ಹ್ಯಾಂಡ್ ಬ್ಯಾಗಿನ ಪ್ರತಿ ಹೆಚ್ಚುವರಿ ಕಿಲೋಗ್ರಾಂಗೆ, ಆರು ಓಮಾನಿ ರಿಯಾಲ್ ಶುಲ್ಕ ವಿಧಿಸಲಾಗುತ್ತದೆ. ಸಂಪರ್ಕ ವಿಮಾನಗಳಲ್ಲಿ ಪ್ರಯಾಣಿಸುವವರು ಪ್ರತಿ ವಿಮಾನಕ್ಕೂ ಈ ಮೊತ್ತವನ್ನು ಪಾವತಿಸಬೇಕು. ಹೆಚ್ಚು ಶುಲ್ಕ ಪಾವತಿಸಿದರೂ, 10 ಕೆಜಿಗಿಂತ ಹೆಚ್ಚಿನ ಕ್ಯಾಬಿನ್ ಸಾಮಾನುಗಳನ್ನು ಅನುಮತಿಸಲಾಗುವುದಿಲ್ಲ.
ಇದು ಡ್ಯೂಟಿ ಫ್ರೀ ಸರಕುಗಳನ್ನು ಒಳಗೊಂಡಿದೆ. ಕ್ಯಾಬಿನ್ ಬ್ಯಾಗೇಜ್ 10 ಕೆ.ಜಿ ಗಿಂತ ಹೆಚ್ಚಿನ ತೂಕ ಕಂಡುಬಂದಲ್ಲಿ, ಅದನ್ನು ಚೆಕ್-ಇನ್ ಬ್ಯಾಗೇಜ್‌ನೊಂದಿಗೆ ಒದಗಿಸಬೇಕಾಗುತ್ತದೆ. ಕೈ ಸಾಮಾನು ಸರಂಜಾಮುಗಳ ಗರಿಷ್ಠ ಅನುಮತಿಸುವ ಗಾತ್ರ 55 ಸೆಂ. ಎತ್ತರ x35 ಸೆಂ. ಉದ್ದ x 25 ಸೆಂ. ಅಳತೆ ನಿಗದಿಪಡಿಸಲಾಗಿದೆ.















ಇನ್ನಷ್ಟು ಸುದ್ದಿಗಳು
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ