janadhvani

Kannada Online News Paper

ಮಸ್ಕತ್: ಒಮಾನ್‌ನಿಂದ ಏರ್ ಇಂಡಿಯಾ ವಿಮಾನ ಮೂಲಕ ಯಾತ್ರೆ ಕೈಗೊಳ್ಳುವವರ ಕ್ಯಾಬಿನ್ ಲಗೇಜ್ ಎಂಟು ಕಿಲೋಗ್ರಾಂಗಳಿಗಿಂತ ಹೆಚ್ಚಿದ್ದರೆ, ಹೆಚ್ಚಿನ ದರ ವಸೂಲು ಮಾಡುವುದಾಗಿ ಕಂಪನಿ ತಿಳಿಸಿದೆ. ಡ್ಯೂಟಿ-ಫ್ರೀ ಶಾಪ್ ಗಳಿಂದ ಖರೀದಿಸಿದ ವಸ್ತುಗಳು ಸೇರಿದಂತೆ ಕೈಚೀಲಗಳಲ್ಲಿ ಗರಿಷ್ಠ 8 ಕಿ.ಗ್ರಾಂ. ಮಾತ್ರ ಉಚಿತ ಎಂದು ಏರ್ ಇಂಡಿಯಾ ಕಳೆದ ವಾರ ಹೇಳಿಕೆಯಲ್ಲಿ ತಿಳಿಸಿದ್ದು, ಈ ನಿರ್ಧಾರವನ್ನು ಒಮಾನ್‌ನ ವಿಮಾನಗಳಲ್ಲಿ ತಕ್ಷಣವೇ ಜಾರಿಗೆ ತರಲಾಗಿದೆ.

ಹ್ಯಾಂಡ್ ಬ್ಯಾಗಿನ ಪ್ರತಿ ಹೆಚ್ಚುವರಿ ಕಿಲೋಗ್ರಾಂಗೆ, ಆರು ಓಮಾನಿ ರಿಯಾಲ್ ಶುಲ್ಕ ವಿಧಿಸಲಾಗುತ್ತದೆ. ಸಂಪರ್ಕ ವಿಮಾನಗಳಲ್ಲಿ ಪ್ರಯಾಣಿಸುವವರು ಪ್ರತಿ ವಿಮಾನಕ್ಕೂ ಈ ಮೊತ್ತವನ್ನು ಪಾವತಿಸಬೇಕು. ಹೆಚ್ಚು ಶುಲ್ಕ ಪಾವತಿಸಿದರೂ, 10 ಕೆಜಿಗಿಂತ ಹೆಚ್ಚಿನ ಕ್ಯಾಬಿನ್ ಸಾಮಾನುಗಳನ್ನು ಅನುಮತಿಸಲಾಗುವುದಿಲ್ಲ.

ಇದು ಡ್ಯೂಟಿ ಫ್ರೀ ಸರಕುಗಳನ್ನು ಒಳಗೊಂಡಿದೆ. ಕ್ಯಾಬಿನ್ ಬ್ಯಾಗೇಜ್ 10 ಕೆ.ಜಿ ಗಿಂತ ಹೆಚ್ಚಿನ ತೂಕ ಕಂಡುಬಂದಲ್ಲಿ, ಅದನ್ನು ಚೆಕ್-ಇನ್ ಬ್ಯಾಗೇಜ್‌ನೊಂದಿಗೆ ಒದಗಿಸಬೇಕಾಗುತ್ತದೆ. ಕೈ ಸಾಮಾನು ಸರಂಜಾಮುಗಳ ಗರಿಷ್ಠ ಅನುಮತಿಸುವ ಗಾತ್ರ 55 ಸೆಂ. ಎತ್ತರ x35 ಸೆಂ. ಉದ್ದ x 25 ಸೆಂ. ಅಳತೆ ನಿಗದಿಪಡಿಸಲಾಗಿದೆ.

error: Content is protected !!
%d bloggers like this: