janadhvani

Kannada Online News Paper

ಡಿ.20 ರ “ಸಮಸ್ತ” ಪೌರತ್ವ ಸಂರಕ್ಷಣಾ ಸಮಾವೇಶ ಮುಂದೂಡಿಕೆ

ಮಂಗಳೂರು, ಡಿ.16:ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಕರ್ನಾಟಕ ಮುಷಾವರ, ನೇತೃತ್ವದಲ್ಲಿ ಮಂಗಳೂರಿನಲ್ಲಿ ನಡೆಸಲು ಉದ್ದೇಶಿಸಿದ್ದ ಪೌರತ್ವ ಸಂರಕ್ಷಣಾ ಸಮಾವೇಶವನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ.

ಡಿ.20 ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ “ಸಂವಿಧಾನ ಮತ್ತು ಜಾತ್ಯಾತೀತ ತತ್ವಗಳ ಉಳಿವಿಗಾಗಿ ಹೋರಾಟ” ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಸಲು ತೀರ್ಮಾನಿಸಿದ್ದ ಸಮಾವೇಶಕ್ಕೆ ಪೋಲೀಸ್ ಕಮಿಷನರಿಂದ ಅನುಮತಿ ಲಭಿಸದ ಕಾರಣ ಜನವರಿ ಮೊದಲನೇ ವಾರಕ್ಕೆ ಮುಂದೂಡಲಾಗಿದೆ.

ಕ್ಯಾಂಪಸ್ ಫ್ರಂಟ್ ನವರು ನಡೆಸಿದ ಪ್ರತಿಭಟನಾ ಸಭೆಯ ವೇಳೆ ಅಹಿತಕರ ಘಟನೆ ನಡೆದ ಹಿನ್ನಲೆಯಲ್ಲಿ ನೆಹರೂ ಮೈದಾನದಲ್ಲಿ ಬೃಹತ್ ಸಮಾವೇಶಕ್ಕೆ ಜಿಲ್ಲಾಧಿಕಾರಿಯವರು ಅನುಮತಿ ನಿರಾಕರಿಸಿದ್ದು, ಸ್ಥಳೀಯರನ್ನು ಒಗ್ಗೂಡಿಸಿ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸುವುದಾದಲ್ಲಿ ಅನುಮತಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿರುವುದಾಗಿ ಬಹು: ಹುಸೈನ್ ದಾರಿಮಿ ರೆಂಜಲಾಡಿಯವರು ವಾಟ್ಸಾಪ್ ಸಂದೇಶದಲ್ಲಿ ತಿಳಿಸಿದರು.