ಬಾಗಲಕೋಟೆ : ಎಸ್ಸೆಸ್ಸೆಫ್ ಬಾಗಲಕೋಟೆ ಜಿಲ್ಲಾ ಸಮಿತಿ ವತಿಯಿಂದ ಕೆಸಿಎಫ್ ಒಮಾನ್ ಸಹಕಾರದೊಂದಿಗೆ ಪ್ರವಾಹದಲ್ಲಿ ಮನೆಕಳೆದುಕೊಂಡಿದ್ದ ಹೆಣ್ಮಕ್ಕಳ ವಿವಾಹ ಅದ್ದೂರಿಯಾಗಿ ನಡೆಯಿತು.
ಉತ್ತರ ಕರ್ನಾಟಕ ಜಲಪ್ರವಾಹದಿಂದ ಅಪಾರ ಪ್ರಮಾಣದ ನಾಶನಷ್ಟಗಳು ಸಂಭವಿಸಿದ್ದು ಹಲವು ಕುಟುಂಬಗಳು ನಿರಾಶ್ರಿತವಾದವು. ಈ ವೇಳೆ ಮದುವೆಯ ದಿನಾಂಕ ನಿಗದಿ ಪಡಿಸಿದ್ದ ಎರಡು ಅನಾಥ-ಬಡ ಹೆಣ್ಮಕ್ಕಳ ಮನೆಗಳು ಕುಸಿದು ಬಿದ್ದು ಚಿಂತಾಜನಕ ಸ್ಥಿತಿಯಲ್ಲಿತ್ತು.


ಈ ವೇಳೆ ಭೇಟಿ ಕೊಟ್ಟ ಎಸ್ಸೆಸ್ಸೆಫ್ ತಂಡ ಆ ಹೆಣ್ಮಕ್ಕಳ ಮದುವೆ ನಡೆಸಿಕೊಡುವ ಜವಾಬ್ದಾರಿಯನ್ನು ಕೈಗೆತ್ತಿಕೊಂಡು ಎಸ್ಸೆಸ್ಸೆಫ್ ಬಾಗಲಕೋಟೆ ಜಿಲ್ಲೆಯ ವತಿಯಿಂದ ಕೆಸಿಎಫ್ ಒಮಾನ್ ಸಮಿತಿಯ ಸಹಕಾರದೊಂದಿಗೆ ಇಂದು ಕಲಾದಗಿ ಶಾದೀ ಮಹಲ್ ನಲ್ಲಿ ಅದ್ದೂರಿಯಾಗಿ ಮದುವೆ ನಡೆಸಲಾಯಿತು.
ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಶಾಫೀ ಸಅದಿ ಬೆಂಗಳೂರು, ಮುಸ್ಲಿಂ ಜಮಾಅತ್ ರಾಜ್ಯ ಉಪಾಧ್ಯಕ್ಷ ಅಬೂ ಸುಫ್ಯಾನ್ ಮದನಿ, ಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ, ರಾಜ್ಯ ಟೆಂಟ್ ಆಂಡ್ ಡೆಕರೇಷನ್ ಸಮಿತಿ ಅಧ್ಯಕ್ಷ ಮೆಹಬೂಬ್ ಮುಲ್ಲಾ ಗಂಗಾವತಿ, ಕೆಸಿಎಫ್ ಒಮಾನ್ ಕೋಶಾಧಿಕಾರಿ ಆರಿಫ್ ಕೋಡಿ, ಒಮಾನ್ ಇಹ್ಸಾನ್ ಚೇರ್ಮನ್ ಹಂಝ ಕನ್ನಂಗಾರ್, ಎಸ್ಸೆಸ್ಸೆಫ್ ರಾಜ್ಯ ಡೆಪ್ಯುಟಿ ಅಧ್ಯಕ್ಷ ಖಾಝಿ ಗುಲಾಂ ಹುಸೈನ್ ನೂರಿ, ಕಾರ್ಯದರ್ಶಿ ನವಾಝ್ ಬೆಂಗಳೂರು, ಕೋಶಾಧಿಕಾರಿ ರವೂಫ್ ಖಾನ್ ಕುಂದಾಪುರ, ಯಾಸೀನ್ ಸಖಾಫಿ ಹರಿಹರ, ಬದ್ರುದ್ದೀನ್ ಸಖಾಫಿ ಲಕ್ಷ್ಮೇಶ್ವರ, ಸಿನಾನ್ ಸಖಾಫಿ, ಉಮರ್ ಸಅದಿ ಚಿಂಚಲಿ, ಅಬ್ದುರ್ರಹ್ಮಾನ್ ಸಖಾಫಿ ಇಂಗಳಹಳ್ಳಿ, ಅಮ್ಜದಿ ಬಾದಾಮಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಲ್ ಖಾದಿಸ ವಿದ್ಯಾರ್ಥಿಗಳಿಂದ ಬುರ್ದಾ ಮಜ್ಲಿಸ್ ಹಾಗೂ ನಅತೇ ಶರೀಫ್ ನಡೆಯಿತು.















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ