ಮಂಗಳೂರು: ಉಂದು ವಿಭಾಗವನ್ನು ಗುರಿಯಾಗಿಟ್ಟುಕೊಂಡು ಕೇಂದ್ರ ಸರಕಾರ ಜಾರಿಗೆ ತಂದಿರುವ “ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ” ಭಾರತದ ಪರಮೋಚ್ಚ ಸಂವಿಧಾನಕ್ಕೆ ಅತಿದೊಡ್ಡ ಸವಾಲಾಗಿದೆ ಎಂದು ಕರ್ನಾಟಕ ರಾಜ್ಯ ಸುನ್ನೀ ಜಂಇಯ್ಯತುಲ್ ಉಲಮಾ ಮುಶಾವರ ಸದಸ್ಯ ಕೆ.ಎಂ.ಖಾಸಿಂ ಮದನಿ ಕರಾಯ ಅವರ ಪೂರ್ವ ವಿದ್ಯಾರ್ಥಿ ಸಂಘಟನೆ “ಸಿರಾಜುಲ್ ಫಲಾಹ್ ಅಸೋಸಿಯೇಷನ್ ಅಭಿಪ್ರಾಯ ಪಟ್ಟಿದೆ.

ಭಾರತ ಯಾವುದೇ ಒಂದು ಧರ್ಮ, ಜಾತಿಯ ಆಧಾರದಲ್ಲಿ ತಾರತಮ್ಯ ಮಾಡುವ ದೇಶವಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ಸಿಕ್ಕಿದಾಗ ಭಾರತದ ಸರ್ವ ಜನ ವಿಭಾಗದವರನ್ನು ಒಂದೇ ದೃಷ್ಟಿಕೋನದಿಂದ ನೋಡಬೇಕಾದ ಕೇಂದ್ರ ಸರಕಾರ ಕೇವಲ ಮುಸ್ಲಿಂ ಸಮುದಾಯವನ್ನು ಪೌರತ್ವ ಎಂಬ ಅಸ್ತ್ರವನ್ನು ಪ್ರಯೋಗಿಸಿ ಭಾರತ ದೇಶಕ್ಕೆ ಕೆಂಪುಕೋಟೆ, ತಾಜ್ ಮಹಲ್ ನಂಥಾ ಜಗತ್ತು ಬೆರಗು ಹುಟ್ಟಿಸುವ ಕೊಡುಗೆ ಗಳನ್ನು ನೀಡಿದ ದೇಶದ ಶಾಂತಿಪ್ರಿಯ ಮುಸ್ಲಿಂ ಸಮುದಾಯವನ್ನು ಪರಕೀಯರಾಗಿ ಕಾಣುವ ಷಡ್ಯಂತ್ರ ಖಂಡನೀಯ.

ಪ್ರಸ್ತುತ ಕರಾಳ ಕಾನೂನನ್ನು ಕೇಂದ್ರ ಸರಕಾರ ಕೂಡಲೇ ಕೈ ಬಿಡಬೇಕು.
ಭಾರತದ ಸಂವಿಧಾನದ ಚೌಕಟ್ಟಿನಲ್ಲಿ ಸರ್ವರೂ “ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯಿದೆ ” ವಿರುದ್ಧ ಹೋರಾಟ ಮಾಡಿ ಭವ್ಯ ಭಾರತದ ಶಾಂತಿ, ಸೌಹಾರ್ದತೆ,ಏಕತೆಯ ಪರಂಪರೆಯನ್ನು ಉಳಿಸಬೇಕೆಂದು ಅಸಯ್ಯಿದ್ ಕಾಜೂರು ತಂಙಳ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಇಸ್ಮಾಯಿಲ್ ತಂಙಳ್ ಮದನಿ ಉಜಿರೆ, ಜಿ.ಎಂ.ಇಬ್ರಾಹಿಂ ಫುರ್ಖಾನಿ, ಅಬೂಸ್ವಾಲಿಹ್ ಮದನಿ ಆಲಡ್ಕ, ಜಿ. ಎಂ. ಕಾಮಿಲ್ ಸಖಾಫಿ, ಪಿ.ಎಸ್.ಇಬ್ರಾಹಿಂ ಮದನಿ, ತೋಕೆ ಸಖಾಫಿ,ಕೆ.ಎಂ.ಹೈದರ್ ಮದನಿ ಮೊದಲಾದವರು ಕರೆ ನೀಡಿದ್ದಾರೆ.















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ