ಉಜಿರೆ: ಸುನ್ನಿ ಯುವ ಜನ ಸಂಘ (SYS) ಉಜಿರೆ,ಅತ್ತಾಜೆ ಹಾಗೂ ಕಕ್ಯಾನ ಬ್ರಾಂಚ್ ವತಿಯಿಂದ ವಿಶೇಷ ತರಗತಿಯು ದಿನಾಂಕ 14.12.2019 ನೇ ಶನಿವಾರ ಮಗ್ರಿಬ್ ನಮಾಝಿನ ಬಳಿಕ ಬದ್ರುಲ್ ಹುದಾ ಹೈಯರ್ ಸೆಕೆಂಡರಿ ಮದರಸ ಹಳೆಪೇಟೆ ಉಜಿರೆಯಲ್ಲಿ ನಡೆಯಿತು. ಅಧ್ಯಕ್ಷತೆಯನ್ನು SYS ಉಜಿರೆ ಬ್ರಾಂಚ್ ಅಧ್ಯಕ್ಷರಾದ ಹೈದರ್ ಮದನಿ ವಹಿಸಿದ್ದರು.
MJM ಹಳೆಪೇಟೆ ಉಜಿರೆಯ ಖತೀಬರಾದ ಬಹು| ಅಲ್‌ಹಾಜ್ ಅಬ್ಬಾಸ್ ಮದನಿ ಉದ್ಘಾಟಿಸಿದರು. ಬೆಳ್ತಂಗಡಿ ಸುನ್ನಿ ಸಂಯುಕ್ತ ಜಮಾಅತ್ ಅಧ್ಯಕ್ಷರಾದ ಬಹು.ಅಸ್ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ ದುಅ ಹಾಗು ಆಶಂಸ ಭಾಷಣ ನಡೆಸಿದರು.
SYS ರಾಜ್ಯಧ್ಯಕ್ಷರಾದ ಬಹು G.ಮುಹಮ್ಮದ್ ಕಾಮಿಲ್ ಸಖಾಫಿ ತರಗತಿಯನ್ನು ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ KMJ ಬೆಳ್ತಂಗಡಿ ತಾಲೂಕು ಅಧ್ಯಕ್ಷರಾದ S.M ಕೋಯ ತಂಙಳ್ ಉಜಿರೆ,SYS ಉಜಿರೆ ಸೆಂಟರ್ ಅಧ್ಯಕ್ಷರಾದ ಅಬ್ದುರ್ರಶೀದ್ ಬಲಿಪಾಯ ನೆರಿಯ, ಪ್ರ.ಕಾರ್ಯದರ್ಶಿ ಖಾಲಿದ್ ಮುಸ್ಲಿಯಾರ್,ಉಪಾಧ್ಯಕ್ಷರಾದ ಮುಹಿಯುದ್ದೀನ್ ಉಜಿರೆ, ಇಬ್ರಾಹಿಂ ವಾಫಿರ್ MJM ಹಳೆಪೇಟೆ ಉಜಿರೆಯ ಕೋಶಾಧಿಕಾರಿ,SYS ಅತ್ತಾಜೆ ಬ್ರಾಂಚ್‌ನ ಅಧ್ಯಕ್ಷರಾದ ಆಸಿಫ್, SYS ಕಕ್ಯಾನ ಬ್ರಾಂಚ್‌ನ ಅಧ್ಯಕ್ಷರಾದ ಯಾಕೂಬ್, ಸಿದ್ದೀಕ್ ವಾಫಿರ್, (ಅಧ್ಯಕ್ಷರು,ಅಲ್- ಅಮೀನ್ ಯಂಗ್‌ಮೆನ್ಸ್ ) ಫಝಲ್ ರಹ್ಮಾನ್ ( ಕೋಶಾಧಿಕಾರಿ, ಅಲ್- ಅಮೀನ್ ಯಂಗ್‌ಮೆನ್ಸ್ ) ಹಾಗೂ SYS ಸದಸ್ಯರುಗಳು ಮತ್ತು SSF ಕಾರ್ಯಕರ್ತರು ಉಪಸ್ಥಿತರಿದ್ದರು.
SYS ಉಜಿರೆ ಬ್ರಾಂಚ್
ಪ್ರ.ಕಾರ್ಯದರ್ಶಿ ಹಾರಿಸ್ AtoZ ಸ್ವಾಗತಿಸಿ,ಕೊನೆಯಲ್ಲಿ ವಂದಿಸಿದರು. ಸ್ವಲಾತ್‌ನೊಂದಿಗೆ ಕೊನೆಗೊಳಿಸಲಾಯಿತು.
ವರದಿ:ಎಂ.ಎಂ.ಉಜಿರೆ















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ