ಅಬುಧಾಬಿ: ಸಾಲ ಪೀಡಿತರಿಗೆ ಸಹಾಯ ಮಾಡುವ ಉದ್ದೇಶದಿಂದ ಯುಎಇ ಜಾರಿಗೊಳಿಸಲಿರುವ ಕಾನೂನಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಜನವರಿಯಿಂದ ಜಾರಿಗೊಳ್ಳುವ ಕಾನೂನಿನ ಸಿದ್ಧತೆಗಳು ಪ್ರಾರಂಭಗೊಂಡಿದೆ. ಸೆರೆವಾಸವನ್ನು ತಪ್ಪಿಸುವ ಮೂಲಕ ಸಾಲವನ್ನು ತೀರಿಸುವ ಮಾರ್ಗಗಳನ್ನು ಕಂಡುಕೊಳ್ಳುವ ಕಾನೂನು ನೂರಾರು ಜನರಿಗೆ ಪ್ರಯೋಜವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಹಣಕಾಸಿನ ಬಿಕ್ಕಟ್ಟಿನಲ್ಲಿ ತಪ್ಪಿತಸ್ಥರೆಂದು ಕಂಡುಬರುವ ಸಾಧ್ಯತೆಯನ್ನು ತೊಡೆದುಹಾಕುವ ಉದ್ದೇಶವನ್ನು ಹೊಸ ಕಾನೂನು ಹೊಂದಿದೆ, ಮತ್ತು ವ್ಯಕ್ತಿಗಳಿಗೆ ಕೆಲಸ ಮಾಡಲು ಮತ್ತು ವ್ಯಾಪಾರ ಮಾಡಲು ಅವಕಾಶವನ್ನು ಒದಗಿಸುತ್ತದೆ.ಈ ಸಮಯದಲ್ಲಿ ಬ್ಯಾಂಕ್ನಿಂದ ಸಾಲ ಪಡೆಯಲು ಮತ್ತು ಚೆಕ್ ನೀಡಲು ಯಾವುದೇ ನಿಷೇಧವಿರುವುದಿಲ್ಲ.
ನಿಗದಿತ ಸಮಯದೊಳಗೆ ವ್ಯಕ್ತಿಗಳು ತಮ್ಮ ಸಾಲವನ್ನು ತೀರಿಸುವ ಹಕ್ಕನ್ನು ಹೊಂದಿರುವುದು ಇದರ ಗುರಿಯಾಗಿದೆ. ಸಿವಿಲ್ ವಿಚಾರಣೆ ಮತ್ತು ಪೊಲೀಸ್ ಚೆಕ್ ಪ್ರಕರಣಗಳಲ್ಲಿ ಮೊಕದ್ದಮೆ ಹೂಡಲ್ಪಟ್ಟವರು ಹೊಸ ಕಾನೂನನ್ನು ಎದುರು ನೋಡುತ್ತಿದ್ದಾರೆ. ಯುಎಇಯ ಉದ್ಯಮಿಗಳು ಕೂಡ ಕಾನೂನನ್ನು ಸ್ವಾಗತಿಸುತ್ತಿದ್ದಾರೆ.
ಲಭಿಸಲು ಮತ್ತು ಪಾವತಿಸಲು ಬಾಕಿ ಇರುವ ಮೊತ್ತದ ವಿವರವಾದ ವರದಿಯನ್ನು ಸಿವಿಲ್ ನ್ಯಾಯಾಲಯಕ್ಕೆ ಸಮರ್ಪಿಸಿ ಸರಕಾರ ಪರವಾಗಿ ಸಮಿತಿಗೆ ದೂರುಗಳನ್ನು ಸಲ್ಲಿಸಬೇಕು. ಪ್ರತಿಯೊಂದು ಪ್ರಕರಣದ ತೀರ್ಪನ್ನು ಸಮಿತಿ ನಿರ್ಧರಿಸುತ್ತದೆ.
ದಿವಾಳಿತನದ ವಿಚಾರಣೆಯ ಪ್ರಕಾರ, ಮೂರು ವರ್ಷಗಳ ಕಾಲಾವಧಿಯನ್ನು ಅನುಮತಿಸಲಾಗುತ್ತದೆ. ಈ ಸಮಯದೊಳಗೆ ಸಾಲವನ್ನು ತೀರಿಸಿರಬೇಕು. ಈಅವಧಿಯಲ್ಲಿ, ಕಾನೂನು ಕ್ರಮವನ್ನು ನಿಲ್ಲಿಸಲಾಗುತ್ತದೆ. ಕಾನೂನಿನ ವಿಶಿಷ್ಟತೆಯೆಂದರೆ, ಸಾಲಗಾರನು ಹಣವನ್ನು ಕಳೆದುಕೊಳ್ಳದ ಪರಿಸ್ಥಿತಿಯನ್ನು ಸೃಷ್ಟಿಸಲು ಸಾಕಷ್ಟು ಅವಕಾಶವನ್ನು ನೀಡಲಾಗುತ್ತದೆ.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು