ಗುರುಪುರ: ಕೈಕಂಬ ಅಮಾನುಲ್ಲಾ ಕೌಂಪೌಂಡ್ ವ್ಯಾಪ್ತಿಯಲ್ಲಿರುವ ಶಮ್ಷೀರ್ ಟವರ್ ಅಂಡ್ ಶಬೀಬಾ ಪಾಯಿಂಟ್ ನಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುವ ಬೃಹತ್ ಮೀಲಾದ್ ಜಲ್ಸಾವು ಇತ್ತೀಚಿಗೆ ಅಲ್ ಮಸ್ಜಿದುಲ್ ಬದ್ರಿಯಾ ಕಂದಾವರಪದವು ಗೌರವಾಧ್ಯಕ್ಷರಾದ ಕೆ.ಎಂ ಬಾವಾಕರವರ ಅಧ್ಯಕ್ಷತೆಯಲ್ಲಿ ಜರಗಿತು.

ಮೌಲಿದ್ ಪಾರಾಯಣ, ಮಕ್ಕಳ ಪ್ರತಿಭಾ ಕಾರ್ಯಕ್ರಮ, ಪೋಂಪೈ ಸ್ಕೂಲ್ ವಿಧ್ಯಾರ್ಥಿಗಳಿಂದ ಕವಾಲಿ, ಹಯಾತುಸ್ಸುನ್ನ ಹೈಯರ್ ಸೆಕೆಂಡರಿ ದರ್ಸ್ ಕೈಕಂಬ ವಿಧ್ಯಾರ್ಥಿಗಳಿಂದ ಬುರ್ದಾ ಮಜ್ಲಿಸ್ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬದ್ರುದ್ದೀನ್ ಅಝ್ಹರಿ ಅಲ್ ಕಾಮಿಲ್, ಹಾಫಿಝ್ ಅನ್ಸಾರ್ ಸಅದಿ ಬಡಕಬೈಲ್, ಉಸ್ಮಾನ್ ಫಾಳಿಲಿ ಕಂದಾವರ, ಸಲೀಂ ಸಅದಿ ಕಂದಾವರ, ಉಬೈದುಲ್ಲಾ ಸಖಾಫಿ ಅಡ್ಡೂರು, ಅಬ್ದುರ್ರಹ್ಮಾನ್ ಕೋಯ ಕೈಕಂಬ, ಅಬ್ದುರ್ರಹ್ಮಾನ್ ಮೂನ್ಲೈಟ್, ಎಂ.ಎಸ್ ಹಸನಬ್ಬ ಕೈಕಂಬ, ಉಞಿ ಹಾಜಿ ಮೂಡುಕೆರೆ, ಖಲಂದರ್ ಶಿಕಾ ಬಜ್ಪೆ, ಅಹ್ಮದ್ ಬಾವಾ ಇನ್ನಿತರೇ ಹಲವಾರು ಉಲಮಾ ಉಮರಾ ನಾಯಕರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಸ್ಮರಣಾರ್ಥವಾಗಿ ಪೋಂಪೈ ಸ್ಕೂಲ್ ಗೆ ಟ್ರೋಫಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಶಂಶೀರ್ ಟವರ್ ಚಯರ್ಮ್ಯಾನ್ ಬಶೀರ್ ಅಹ್ಮದ್ ಸ್ವಾಗತಿಸಿ, ಪ್ರೋಗ್ರಾಮ್ ಸಮಿತಿ ಕನ್ವೀನರ್ ನೂರುಲ್ಲಾ ಧನ್ಯವಾದಗೈದರು.ಎಸ್ ಜೆ.ಎಂ ಕೈಕಂಬ ರೇಂಜ್ ಪ್ರಧಾನ ಕಾರ್ಯದರ್ಶಿ ಕೆ ಹೆಚ್ ಯು ಶಾಫಿ ಮದನಿ ಕರಾಯ ಕಾರ್ಯಕ್ರಮ ನಿರೂಪಿಸಿದರು.
ವರದಿ: ಮದನಿ ಕರಾಯ















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್