ಕೈಕಂಬ: ಪ್ರಮುಖ ವಾಗ್ಮಿಯೂ SYS ರಾಜ್ಯ ನಾಯಕರೂ ಆದ ಮೌಲಾನಾ ಎಂ.ಪಿ.ಎಂ ಅಶ್ರಫ್ ಸಅದಿ ಮಲ್ಲೂರು ಇವರ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿರುವ ಅಸಾಸ್ ಎಜುಕೇಷನಲ್ ಸೆಂಟರ್ ಸಂಸ್ಥೆಯಲ್ಲಿ ನವೆಂಬರ್ 10( ನಾಳೆ) ಸುಬಹಿ ನಮಾಝಿನ ಬಳಿಕ ಬೃಹತ್ ಹುಬ್ಬುರ್ರಸೂಲ್ ಮಜ್ಲಿಸ್ ನಡೆಯಲಿದೆ.
ಹಲವಾರು ಉಲಮಾ ಶಿರೋಮಣಿಗಳು ಭಾಗವಹಿಸಲಿದ್ದು ಪ್ರತ್ಯೇಕವಾಗಿ ಪ್ರಮುಖ ವಿದ್ವಾಂಸರೂ ಇಂಡಿಯನ್ ಗ್ರಾಂಡ್ ಮುಫ್ತಿ A.P ಉಸ್ತಾದರ ಸುಪುತ್ರ ಡಾ.ಅಬ್ದುಲ್ ಹಕೀಂ ಅಝ್ಹರಿ ಹುಬ್ಬುರ್ರಸೂಲ್ ಪ್ರಭಾಷಣ ಮಾಡಲಿದ್ದಾರೆ.
ಅದೇ ರೀತಿ ಸಂಸ್ಥೆಯ ಪ್ರಧಾನ ಮುದರ್ರಿಸರಾದ ನಿಝಾಮುದ್ದೀನ್ ಬಾಫಕಿ ತಂಙಳ್ ದುಆಃ ಆಶೀರ್ವಚನ ನಡೆಸಲಿದ್ದಾರೆ. ನವೆಂಬರ್ 12,13 ರಂದು ಮದ್ಹೇ ಮುಸ್ತಫಾ ಕಾಂಫರನ್ಸ್, ಬುರ್ದಾ ಮಜ್ಲಿಸ್, ಸಂಸ್ಥೆಯ ವಿಧ್ಯಾರ್ಥಿಗಳಿಂದ ಮುನಾಫಸಾ ಕಾರ್ಯಕ್ರಮ ನಡೆಯಲಿದ್ದು ಈ ಎಲ್ಲಾ ಕಾರ್ಯಕ್ರಮ ಯಶಸ್ವಿಗೊಳಿಸಲು ಸುನ್ನೀ ಕೋರ್ಡಿನೇಷನ್ ಕಮಿಟಿ ಕೈಕಂಬ ಕರೆ ನೀಡಿದೆ.
ಪ್ರತ್ಯೇಕವಾಗಿ ಸುನ್ನೀ ಕೋರ್ಡಿನೇಷನ್ ಸಮಿತಿಯ ಅಂಗ ಸಂಘಟನೆಗಳಾದ SJU, SJM, SMA, SYS, SSF ನೇತಾರರು ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಸುನ್ನೀ ಕೋರ್ಡಿನೇಷನ್ ಕಮಿಟಿ ಕೈಕಂಬ ಇದರ ಪ್ರಧಾನ ಕಾರ್ಯದರ್ಶಿ ಶಾಫಿ ಮದನಿ ಕರಾಯ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.















ಇನ್ನಷ್ಟು ಸುದ್ದಿಗಳು
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ