ಸುಪ್ರೀಂ ಕೋರ್ಟ್ ತೀರ್ಪನ್ನು ಗೌರವಿಸುತ್ತೇವೆ

ಉಡುಪಿ: ಬಾಬರಿ ಮಸೀದಿಯ ವಿವಾದದ ಬಗ್ಗೆ ಬಹಳ ವರ್ಷಗಳ ಬಳಿಕ ನೀಡಿದ ಸುಪ್ರೀಂ ಕೋರ್ಟ್ ತೀರ್ಪು ಮುಸ್ಲಿಮರಲ್ಲಿ ಅತ್ರಿಪ್ತಿ ತಂದಿದರೂ ಕೋರ್ಟ್ ನ ತೀರ್ಪನ್ನು ನಾವು ಗೌರವಿಸುತ್ತೇವೆ.

ಹಲವು ವರ್ಷಗಳಿಂದ ಹಿಂದು ಹಾಗೂ ಮುಸ್ಲಿಮರ ಮಧ್ಯೆ ಐಕ್ಯತೆಯನ್ನು ಕದಡಿಸುವವರಿಗೆ ಆಯುಧವಾಗಿರುವ ಈ ಬಾಬರಿ ಮಸೀದಿ ಹಾಗೂ ರಾಮ ಜನ್ಮಭೂಮಿಯ ಸಮಸ್ಯೆಗೆ ಸುಪ್ರೀಂ ಕೋರ್ಟ್ ನಾಂದಿ ಹಾಡಿರುವುದು ಸಂತೋಷಕರ.

ಈ ಒಂದು ವಿವಾದದಿಂದ ತುಂಬಾ ಮಾನವ ಜೀವಗಳನ್ನು ಕಳೆದುಕೊಂಡಿದೆ. ಇನ್ನಾದರೂ ಅದಕ್ಕೆ ಕಡಿವಾಣ ಬೀಳಲಿ.

ಈ ನೆಪದಲ್ಲಿ ನಡೆಯುತ್ತಾ ಇರುವ ರಾಜಕೀಯ ಕೊನೆಗೊಳ್ಳಲಿ. ಇದನ್ನು ನೆಪವಾಗಿಟ್ಟುಕೊಂಡು ನಾವು ಯಾವುದೇ ಸಮುದಾಯಗಳು ಮತ್ತು ಸಂಘಟನೆಗಳು ಸಮಾಜದ ಐಕ್ಯತೆಗೆ ಭಂಗತರುವ ಕೆಲಸಕ್ಕೆ ಕೈ ಹಾಕಬಾರದಾಗಿ ಕರ್ನಾಟಕ ಮುಸ್ಲಿಂ ಜಮಾಅತ್ ಉಡುಪಿ ಜಿಲ್ಲಾ ಸಮಿತಿ, ಸುನ್ನೀ ಸಂಯುಕ್ತ ಜಮಾಅತ್ ಹಾಗೂ ಎಸ್ ವೈ ಎಸ್ ಉಡುಪಿ ಜಿಲ್ಲಾ ಸಮಿತಿ ವಿನಂತಿಸುತ್ತಿದೆ.

Leave a Reply

Your email address will not be published. Required fields are marked *

error: Content is protected !!