ಮಸ್ಕತ್: ಓಮನ್‌ಗೆ ಭೇಟಿ ನೀಡಲು ಬಯಸುವವರು ಪ್ರಯಾಣಿಸುವ ಮೊದಲೇ ಆನ್‌ಲೈನ್‌ನಲ್ಲಿ ವೀಸಾ ಪಡೆಯಲು ಸಾಧ್ಯವಾಗಲಿದೆ ಎಂದು ರಾಯಲ್ ಒಮಾನ್ ಪೊಲೀಸರು ಪ್ರಕಟಿಸಿದ್ದಾರೆ. ರಾಯಲ್ ಒಮಾನ್ ಪೊಲೀಸರು ವಾಯು ಮಾರ್ಗ, ರಸ್ತೆ ಮೂಲಕ ಮತ್ತು ಸಮುದ್ರದ ಮೂಲಕ ಒಮಾನ್‌ಗೆ ಪ್ರವೇಶಿಸುವವರಿಗಾಗಿ ಆನ್‌ಲೈನ್ ಸೇವೆಗಳನ್ನು ಹೆಚ್ಚು ಪ್ರಚಾರ ಮಾಡುತ್ತಿದೆ.
‘ವೀಸಾ ಆನ್ ಅರೈವಲ್’ ವ್ಯವಸ್ಥೆಯನ್ನು ತೆಗೆದುಹಾಕುವ ಗುರಿ ಹೊಂದಿದ್ದು, ಸಾಧ್ಯವಾದಷ್ಟು ಇ-ವೀಸಾಗಳನ್ನು ಬಳಸಬೇಕೆಂದು ಅಧಿಕಾರಿಗಳು ಒತ್ತಾಯಿಸಿದ್ದಾರೆ. ಪ್ರಸಕ್ತ ಇತರ ಕೊಲ್ಲಿ ರಾಷ್ಟ್ರಗಳಲ್ಲಿ ಸ್ಥಿರವಾಗಿ ವಾಸಿಸುತ್ತಿರುವ ವಿದೇಶಿ ಪ್ರಜೆಗಳು ಮತ್ತು ಅವರ ಜೊತೆಗಿನ ಸಂಬಂಧಿಕರು ಆನ್‌ಲೈನ್‌ನಲ್ಲಿ ನಾಲ್ಕು ವಾರಗಳ ಒಮಾನ್ ಸಂದರ್ಶಕರ ವೀಸಾವನ್ನು ಪಡೆಯಬಹುದು. ಅಗತ್ಯವಿದ್ದರೆ, ವೀಸಾ ಅವಧಿಯನ್ನು ಒಂದು ವಾರ ವಿಸ್ತರಿಸಬಹುದಾಗಿದೆ.
ಆನ್‌ಲೈನ್ ವೀಸಾಕ್ಕೆ ಪ್ರಾಯೋಜಕರ ಅಗತ್ಯವಿಲ್ಲ. ಅರ್ಜಿದಾರರು ಆರು ತಿಂಗಳ ಮಾನ್ಯತೆಯ ವಾಸ ಪರವಾನಗಿ, ಆರು ತಿಂಗಳವರೆಗೆ ಮಾನ್ಯವಾಗಿರುವ ಪಾಸ್‌ಪೋರ್ಟ್ ಇದ್ದರೆ ಪ್ರಾಯೋಜಕರಿಲ್ಲದೆ ಪ್ರವಾಸಕ್ಕೆ ಮುಂಚಿತವಾಗಿ ನೇರವಾಗಿ ಒಮಾನ್ ಇಮಿಗ್ರೇಷನ್ ಅನುಮೋದಿಸಿದ ಉದ್ಯೋಗಾರ್ಥಿಗಳಿಗೆ ಆನ್ಲೈನ್ ವೀಸಾ ಪಡೆಯಬಹುದಾಗಿದೆ. ಕೊಲ್ಲಿ ರಾಷ್ಟ್ರಗಳಲ್ಲಿ ಶಾಶ್ವತವಾಗಿ ವಾಸಿಸುವ ವಿದೇಶಿ ಪ್ರಜೆಗಳು ಜಿಸಿಸಿ ದೇಶಗಳಿಂದಲೇ ಒಮಾನಿಗೆ ನೇರವಾಗಿ ಆಗಮಿಸಬಹುದು. evisa.rop.gov.om ಮೂಲಕ ಇ-ವೀಸಾಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟನೆ ತಿಳಿಸಿದೆ















ಇನ್ನಷ್ಟು ಸುದ್ದಿಗಳು
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್‌ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ