ಒಮಾನ್ ಸಂದರ್ಶನಕ್ಕೆ ಆನ್‌ಲೈನ್‌ನಲ್ಲಿ ವೀಸಾ ಲಭ್ಯ

ಮಸ್ಕತ್: ಓಮನ್‌ಗೆ ಭೇಟಿ ನೀಡಲು ಬಯಸುವವರು ಪ್ರಯಾಣಿಸುವ ಮೊದಲೇ ಆನ್‌ಲೈನ್‌ನಲ್ಲಿ ವೀಸಾ ಪಡೆಯಲು ಸಾಧ್ಯವಾಗಲಿದೆ ಎಂದು ರಾಯಲ್ ಒಮಾನ್ ಪೊಲೀಸರು ಪ್ರಕಟಿಸಿದ್ದಾರೆ. ರಾಯಲ್ ಒಮಾನ್ ಪೊಲೀಸರು ವಾಯು ಮಾರ್ಗ, ರಸ್ತೆ ಮೂಲಕ ಮತ್ತು ಸಮುದ್ರದ ಮೂಲಕ ಒಮಾನ್‌ಗೆ ಪ್ರವೇಶಿಸುವವರಿಗಾಗಿ ಆನ್‌ಲೈನ್ ಸೇವೆಗಳನ್ನು ಹೆಚ್ಚು ಪ್ರಚಾರ ಮಾಡುತ್ತಿದೆ.

‘ವೀಸಾ ಆನ್ ಅರೈವಲ್’ ವ್ಯವಸ್ಥೆಯನ್ನು ತೆಗೆದುಹಾಕುವ ಗುರಿ ಹೊಂದಿದ್ದು, ಸಾಧ್ಯವಾದಷ್ಟು ಇ-ವೀಸಾಗಳನ್ನು ಬಳಸಬೇಕೆಂದು ಅಧಿಕಾರಿಗಳು ಒತ್ತಾಯಿಸಿದ್ದಾರೆ. ಪ್ರಸಕ್ತ ಇತರ ಕೊಲ್ಲಿ ರಾಷ್ಟ್ರಗಳಲ್ಲಿ ಸ್ಥಿರವಾಗಿ ವಾಸಿಸುತ್ತಿರುವ ವಿದೇಶಿ ಪ್ರಜೆಗಳು ಮತ್ತು ಅವರ ಜೊತೆಗಿನ ಸಂಬಂಧಿಕರು ಆನ್‌ಲೈನ್‌ನಲ್ಲಿ ನಾಲ್ಕು ವಾರಗಳ ಒಮಾನ್ ಸಂದರ್ಶಕರ ವೀಸಾವನ್ನು ಪಡೆಯಬಹುದು. ಅಗತ್ಯವಿದ್ದರೆ, ವೀಸಾ ಅವಧಿಯನ್ನು ಒಂದು ವಾರ ವಿಸ್ತರಿಸಬಹುದಾಗಿದೆ.

ಆನ್‌ಲೈನ್ ವೀಸಾಕ್ಕೆ ಪ್ರಾಯೋಜಕರ ಅಗತ್ಯವಿಲ್ಲ. ಅರ್ಜಿದಾರರು ಆರು ತಿಂಗಳ ಮಾನ್ಯತೆಯ ವಾಸ ಪರವಾನಗಿ, ಆರು ತಿಂಗಳವರೆಗೆ ಮಾನ್ಯವಾಗಿರುವ ಪಾಸ್‌ಪೋರ್ಟ್ ಇದ್ದರೆ ಪ್ರಾಯೋಜಕರಿಲ್ಲದೆ ಪ್ರವಾಸಕ್ಕೆ ಮುಂಚಿತವಾಗಿ ನೇರವಾಗಿ ಒಮಾನ್ ಇಮಿಗ್ರೇಷನ್ ಅನುಮೋದಿಸಿದ ಉದ್ಯೋಗಾರ್ಥಿಗಳಿಗೆ ಆನ್ಲೈನ್ ವೀಸಾ ಪಡೆಯಬಹುದಾಗಿದೆ. ಕೊಲ್ಲಿ ರಾಷ್ಟ್ರಗಳಲ್ಲಿ ಶಾಶ್ವತವಾಗಿ ವಾಸಿಸುವ ವಿದೇಶಿ ಪ್ರಜೆಗಳು ಜಿಸಿಸಿ ದೇಶಗಳಿಂದಲೇ ಒಮಾನಿಗೆ ನೇರವಾಗಿ ಆಗಮಿಸಬಹುದು. evisa.rop.gov.om ಮೂಲಕ ಇ-ವೀಸಾಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟನೆ ತಿಳಿಸಿದೆ

Leave a Reply

Your email address will not be published. Required fields are marked *

error: Content is protected !!