ಮನಾಮ: ಕರ್ನಾಟಕ ಕಲ್ಚರಲ್ ಫೌಂಡೇಷನ್ ಕೆ.ಸಿ.ಎಫ್ ಬಹರೈನ್ ಇದರ ವತಿಯಿಂದ ” ಹಬೀಬ್ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮ್ ನಮ್ಮ ಜೊತೆ” ಎಂಬ ಎಂಬ ಘೋಷ ವಾಕ್ಯದೊಂದಿಗೆ ಬೃಹತ್ ಮೀಲಾದ್ ಕಾನ್ಫರೆನ್ಸ್ ನವೆಂಬರ್ ಒಂದರಂದು ಶುಕ್ರವಾರ 7:30ಕ್ಕೆ ಪಾಕಿಸ್ತಾನ ಕ್ಲಬ್ ಮನಾಮದಲ್ಲಿ ನಡೆಯಲಿದೆ.
ಈ ಐತಿಹಾಸಿಕ ಬೃಹತ್ ಸಮ್ಮೇಳನದಲ್ಲಿ ಸಯ್ಯಿದ್ ಕುಟುಂಬದ ಅಗ್ರಗಣ್ಯ ನೇತಾರರಾದ ಅಸಯ್ಯದ್ ಅಲಿ ಬಾಫಖಿ ತಂಙಳ್ ದುಃಆ ಆಶೀರ್ವಚನ ನೀಡಲಿದ್ದಾರೆ. ಹಾಗೂ ಅವರ ಮೊಮ್ಮಗ ಸಯ್ಯಿದ್ ನಿಝಾಮುದ್ದೀನ್ ಬಾಫಖಿ ತಂಙಳ್ ರವರು ಕಾರ್ಯಕ್ರಮ ವನ್ನು ಉದ್ಘಾಟಿಸಲಿದ್ದಾರೆ. ಬಹುಭಾಷಾ ಪಂಡಿತ,ಖ್ಯಾತ ವಾಗ್ಮಿ ಪ್ರಭಾಷಣ ಲೋಕದ ನಕ್ಷತ್ರ ತಾರೆ ನೌಫಲ್ ಸಖಾಫಿ ಕಳಸ ಉಸ್ತಾದ್ ರವರ ಪ್ರಡೋಜ್ವಲ ಭಾಷಣ ನಡೆಯಲಿದೆ.
ಹಲವಾರು ಸಾದಾತ್ ಗಳು, ಉಲಮಾ ಉಮಾರಾ ನಾಯಕರು, ಗಣ್ಯಾತಿ ಗಣ್ಯ ವ್ಯಕ್ತಿಗಳು ಹಾಗೂ ಧಾರ್ಮಿಕ, ಸಾಮಾಜಿಕ ಸಂಘ ಸಂಸ್ಥೆಗಳ ನೇತಾರರು ಪಾಲ್ಗೊಳ್ಳುವ
ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೆ.ಸಿ.ಎಫ್ ಬಹರೈನ್ ಮೀಲಾದ್ ಸ್ವಾಗತ ಸಮಿತಿ ಚೇರ್ಮ್ಯಾನ್ ಬಷೀರ್ ಕಾರ್ಲೆ ಹಾಗೂ , ಕನ್ವೀನರ್ ಸಯ್ಯದ್ ಇರ್ದೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕೆಸಿಎಫ್ ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ ಸಾಂತ್ವನ ವಿಭಾಗದ ಅಧ್ಯಕ್ಷರಾದ ಅಲಿ ಮುಸ್ಲಿಯಾರ್,ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಜಮಾಲುದ್ದೀನ್ ವಿಟ್ಟಲ್, ಪ್ರಧಾನ ಕಾರ್ಯದರ್ಶಿ ಹಾರೀಸ್ ಸಂಪ್ಯ ಕೋಶಾಧಿಕಾರಿ ಇಕ್ಬಾಲ್ ಮಂಜನಾಡಿ ಹಾಗೂ ಸಾಂತ್ವನ ವಿಭಾಗದ ಚೆಯರ್ಮೆನ್ ಕರೀಂ ಉಚ್ಚಿಲ,ಕನ್ವೀನರ್ ಹನೀಫ್ ಜಿ ಕೆ ರಾಷ್ಟ್ರೀಯ ಸಮಿತಿ ಪಬ್ಲಿಕೇಶನ್ ವಿಭಾಗದ ಚಯರ್ಮೆನ್ ಲತೀಫ್ ಪೆರೋಲಿ, ಕಾರ್ಯದರ್ಶಿ ತೌಫೀಕ್ ಉಮ್ಮರ್ ರವರು, ಉಪಸ್ಥಿತರಿದ್ದರು.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು