ಸಂದರ್ಶಕ ವೀಸಾದಲ್ಲಿ ಖಾಸಗಿ ವಲಯಕ್ಕೆ ವರ್ಗಾವಣೆ ಸಾಧ್ಯವಿಲ್ಲ

ಕುವೈತ್ ನಗರ: ಕುವೈತ್‌ನಲ್ಲಿ ಸಂದರ್ಶಕ ವಿಸಾದಲ್ಲಿರುವವರಿಗೆ ನಿರ್ಬಂಧಗಳೊಂದಿಗೆ ಕೆಲವು ವಲಯಗಳಿಗೆ ಮಾತ್ರ ವಿಸಾ ವರ್ಗಾವಣೆ ನೀಡಲು ಅವಕಾಶವಿದೆ.

ಖಾಸಗಿ ಉದ್ಯಮಗಳಿಗೆ ವರ್ಗಾವಣೆಗೆಯನ್ನು ನೀಡಲು ಸರಕಾರ ಅವಕಾಶ ನೀಡುವುದಿಲ್ಲ ಎಂದು ಮಾನವ ಸಂಪನ್ಮೂಲ ಸಮಿತಿಯ ಉಪ ಮಹಾನಿರ್ದೇಶಕ ಮುಬಾರಕ್ ಅಲ್ ಜ‌ಅಫರ್ ಹೇಳಿದ್ದಾರೆ. ಸಂದರ್ಶಕ ವೀಸಾ ಹೊಂದಿರುವವರಿಗೆ ವಿವಿಧ ವಲಯಗಳಿಗೆ ವೀಸಾ ಬದಲಾವಣೆಗೆ ಅವಕಾಶ ನೀಡುವ ಬಗ್ಗೆ ಗೃಹ ಸಚಿವಾಲಯ ಕಳೆದ ವಾರ ಹೊರಡಿಸಿದ ಆದೇಶ ಖಾಸಗಿ ಸಂಸ್ಥೆಗಳಿಗೆ ಅನ್ವಯಿಸುವುದಿಲ್ಲ ಎಂದು ಅವರು ಹೇಳಿದರು. ಸರಕಾರಿ ಸಂಸ್ಥೆಗಳು ಮತ್ತು ಸರಕಾರಿ ಮೇಲ್ವಿಚಾರಣಾ ಯೋಜನೆಗಳಿಗೆ ವೀಸಾ ಬದಲಾವಣೆ ಸಾಧ್ಯವಾಗಲಿದೆ.

ಗೃಹ ಸಚಿವ ಶೈಖ್ ಖಾಲಿದ್ ಅಲ್-ಜರಾಹ್ ಅಲ್-ಸಬಾ ಜುಲೈ 22 ರಂದು ಸುಗ್ರೀವಾಜ್ಞೆ ಹೊರಡಿಸಿದ್ದು, ಸಂದರ್ಶಕ ವೀಸಾದಲ್ಲಿರುವವರಿಗೆ ಗೃಹ ಕೆಲಸ, ಕುಟುಂಬ ವಿಸಾ, ಸರಕಾರಿ ಮತ್ತು ಸರಕಾರಿ ಪ್ರಾಯೋಜಿತ ಯೋಜನೆಗಳಂತಹ ವಲಯಗಳಿಗೆ ವೀಸಾ ಬದಲಾವಣೆಯ ಅವಕಾಶವನ್ನು ನೀಡಿದೆ. ಆದರೆ ಆದೇಶದ ಬಗ್ಗೆ ಸಾಕಷ್ಟು ಅಸ್ಪಷ್ಟತೆ ಇತ್ತು. ಹೊಸ ಕಾನೂನು ಖಾಸಗಿ ಸಂಸ್ಥೆಗಳ ವೀಸಾಗಳಿಗೂ ಅವಕಾಶ ನೀಡುತ್ತದೆ ಎಂಬ ವದಂತಿಯೂ ಹರಡಿತ್ತು. ಹಾಗಾಗಿ ಮಾನವ ಸಂಪನ್ಮೂಲ ಸಮಿತಿ ವಿವರಣೆಯನ್ನು ನೀಡಿದೆ.

ಸಂದರ್ಶಕ ವೀಸಾ ಅಥವಾ ಪ್ರವಾಸಿ ವೀಸಾದಲ್ಲಿ ದೇಶಕ್ಕೆ ಬರುವ ಸಂಗಾತಿ ಮತ್ತು ಮಕ್ಕಳ ನಿವಾಸ ವೀಸಾವನ್ನು ಕುಟುಂಬ ವಿಸಾಗೆ ವರ್ಗಾಯಿಸಲು ಯಾವುದೇ ನಿರ್ಬಂಧಗಳಿಲ್ಲ. ಕುಟುಂಬ ವೀಸಾಗಳಿಗೆ ಅನ್ವಯವಾಗುವ ಕನಿಷ್ಠ ವೇತನ ಮಿತಿಯೂ ಅನ್ವಯಿಸುತ್ತದೆ. ಸಂದರ್ಶಕರ ವೀಸಾಗಳನ್ನು ಗೃಹ ವಲಯಕ್ಕೂ ವರ್ಗಾಯಿಸಬಹುದು. ಯಾವುದೇ ವೆಚ್ಚವಿಲ್ಲದೆ ಸ್ಥಳೀಯರಿಗೆ ಗೃಹ ಕೆಲಸಗಾರರನ್ನು ಲಭ್ಯವಾಗುವಂತೆ ಮಾಡುವ ಗುರಿಯನ್ನು ಗೃಹ ಸಚಿವಾಲಯ ಹೊಂದಿದೆ. ನೇಮಕಾತಿ ಏಜೆನ್ಸಿಗಳ ಮೂಲಕ ಗೃಹ ಕಾರ್ಮಿಕರನ್ನು ಕರೆತರಲು ಪ್ರಸ್ತುತ ಸುಮಾರು 1000 ದಿಂದ 1500 ದಿನಾರ್ ವೆಚ್ಚವಾಗುತ್ತದೆ.

Leave a Reply

Your email address will not be published. Required fields are marked *

error: Content is protected !!