ಯುಎಇಯಲ್ಲಿ ಮೀಲಾದುನ್ನಬಿ ಪ್ರಯುಕ್ತ ನವೆಂಬರ್ 9 ಕ್ಕೆ ರಜೆ

ಅಬುಧಾಬಿ: ಯುಎಇಯಲ್ಲಿ ಈದ್ ಮೀಲಾದ್ ಪ್ರಯುಕ್ತ ನವೆಂಬರ್ 9 ಕ್ಕೆ ರಜೆ. ರಬೀಉಲ್ ಅವ್ವಲ್ ತಿಂಗಳ ಚಂದ್ರದರ್ಶನವು ಸೋಮವಾರ ಸಂಜೆ 5.35 ಕ್ಕೆ ಅಲ್ ಐನ್‌ನ ಜಬೆಲ್ ಹಫೀತ್ ನಲ್ಲಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅ.29 ರಬೀಉಲ್ ಅವ್ವಲ್ ಮೊದಲ ದಿನವಾಗಿರುತ್ತದೆ.

ಇದರ ಪ್ರಕಾರ ಪ್ರವಾದಿ ಜನ್ಮದಿನವಾದ ರಬೀಉಲ್ ಅವ್ವಲ್ 12 ನವೆಂಬರ್ 9 ರಂದು ಯುಎಇ ಯಲ್ಲಿ ಸಾರ್ವಜನಿಕ ರಜೆಯಾಗಿರುತ್ತದೆ.

ಈದ್ ಮಿಲಾದ್ ಪ್ರಯುಕ್ತ ರಜೆ ನೀಡುವಂತೆ ಯುಎಇ ಮಂತ್ರಿಮಂಡಲ ತೀರ್ಮಾನಿಸಿದ್ದಾಗಿ ಫೆಡರಲ್ ಅಥಾರಿಟಿ ಫಾರ್ ಗವರ್ಮೆಂಟ್ ಮಾನವ ಸಂಪನ್ಮೂಲ ವಿಭಾಗವು ಸಾಮಾಜಿಕ ತಾಣದಲ್ಲಿ ಈ ಹಿಂದೆ ಪ್ರಕಟಿಸಿತ್ತು.

Leave a Reply

Your email address will not be published. Required fields are marked *

error: Content is protected !!