ತಿರುವನಂತಪುರ: ಫೇಸ್‌ಬುಕ್ ಲೈವ್‌ನಲ್ಲಿ ಮಹಿಳೆಯರನ್ನು ಅಪಮಾನಿಸಲಾಗಿದೆ ಎಂದು ಆರೋಪಿಸಿ ಚಾರಿಟಿ ಕಾರ್ಯಕರ್ತ ಫಿರೋಝ್ ಕುನ್ನುಂಪರಂಬಲ್ ವಿರುದ್ಧ ಕೇರಳ ರಾಜ್ಯ ಮಹಿಳಾ ಆಯೋಗದಿಂದ ಸ್ವಯಂಪ್ರೇರಿತ ಮೊಕದ್ದಮೆ ದಾಖಲು. ಕೆಎಸ್‌ಯು ಮಾಜಿ ನಾಯಕಿ ವಿರುದ್ಧ ನಡೆಸಿದ ವ್ಯಕ್ತಿ ನಿಂಧನೆ ಸಂಬಂಧಿಸಿ ಈ ಕ್ರಮ ಕೈಗೊಳ್ಳಲಾಗಿದೆ.
ಮಂಜೇಶ್ವರದ ಯುಡಿಎಫ್ ಅಭ್ಯರ್ಥಿ ಎಂ.ಸಿ.ಖಮರುದ್ದೀನ್ ಅವರೊಂದಿಗಿನ ಭೇಟಿಯನ್ನು ಟೀಕಿಸಿದ ಮಹಿಳೆಯ ವಿರುದ್ಧ ಫಿರೋಝ್ ವಿವಾದಾತ್ಮಕ ಹೇಳಿಕೆ ನೀಡಿದ್ದರು ಎನ್ನಲಾಗಿದೆ. ತನ್ನ ಕುಟುಂಬದಲ್ಲಿ ಉಳಿಯದ, ವೇಶ್ಯಾವಾಟಿಕೆ ನಡೆಸುವ ಮತ್ತಿತರ ಕೆಟ್ಟ ಶಬ್ಧಗಳಿಂದ ನಿಂಧಿಸಲಾಗಿತ್ತು.
ಫಿರೋಝ್ ರಾಜ್ಯದ ಎಲ್ಲಾ ಮಹಿಳೆಯರನ್ನು ಅವಮಾನಿಸಿದ್ದಾರೆ ಮತ್ತು ಪೊಲೀಸರು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಎಂ.ಸಿ. ಜೋಸೆಫೈನ್ ಆಗ್ರಹಿಸಿದರು.
ಚಾರಿಟಿ ಕಾರ್ಯದಲ್ಲಿ ತೊಡಗಿಸಿಕೊಂಡ ವ್ಯಕ್ತಿಯೊಬ್ಬರು ಈ ರೀತಿ ಮಹಿಳೆಯರ ವಿರುದ್ಧ ಅಷ್ಟು ಕೆಟ್ಟದಾಗಿ ನಿಂಧನೆ ಮಾಡಬಾರದು. ಅಂತಹ ವ್ಯಕ್ತಿಗಳನ್ನು ಸಮುದಾಯ ಪ್ರತ್ಯೇಕಿಸಬೇಕು ಎಂದು ಜೋಸೆಫೈನ್ ಹೇಳಿದರು.






