ದೊಹ ಖತ್ತರ್: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆ.ಸಿ.ಎಫ್. ಅಂತರಾಷ್ಟ್ರೀಯ ಸಮಿತಿಯ ಅಧೀನದಲ್ಲಿ ಅಕ್ಟೋಬರ್ 4ರಿಂದ ಡಿಸೆಂಬರ್ 4ರ ವರೆಗೆ, ಲೋಕ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ರವರ ಮೀಲಾದ್ ಪ್ರಯುಕ್ತ ಹಬೀಬ್ ಸ್ವಲ್ಲಲ್ಲಾಹು ಅಲೈಹಿವಸಲ್ಲಂ ನಮ್ಮ ಜತೆಗಿರಲಿ ಎಂಬ ಶೀರ್ಷಿಕೆಯಲ್ಲಿ ಹಮ್ಮಿಕೊಂಡಿರುವ ಎರಡು ತಿಂಗಳ ಮೀಲಾದ್ ಅಭಿಯಾನದ ಅಂಗವಾಗಿ ಕೆ.ಸಿ.ಎಫ್. ಖತ್ತರ್ ವತಿಯಿಂದ ನಡೆಯುವ ಮೀಲಾದ್ ಸಮಾವೇಶದ ಉದ್ಘಾಟನಾ ಸಮಾರಂಭವು, ಬಿನ್ ಉಮ್ರಾನ್ ಹೋಟೆಲ್ ಸಭಾಂಗಣದಲ್ಲಿ ದಿನಾಂಕ 04-10-2019 ಶುಕ್ರವಾರದಂದು ಕೆ.ಸಿ.ಎಫ್ ಖತ್ತರ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಯೂಸುಫ್ ಸಖಾಫಿ ಅಯ್ಯಂಗೇರಿ ಅವರ ಅಧ್ಯಕ್ಷತೆಯಲ್ಲಿ ಜರಗಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ
ಕರ್ನಾಟಕ ಸುನ್ನೀ ಜಂಯತ್ತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಶೈಖುನಾ ಝೈನುಲ್ ಉಲಮಾ ಮಾಣಿ ಅಬ್ದುಲ್ ಹಮೀದ್ ಮುಸ್ಲಿಯಾರ್ ರವರು ಮೀಲಾದ್ ಅಭಿಯಾನವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೀಲಾದ್ ಆಚರಣೆಯ ಮಹತ್ವ ಹಾಗೂ ಮನುಷ್ಯನ ಸೃಷ್ಟಿಯ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ದಾರುಲ್ ಇರ್ಶಾದ್ ಮಾಣಿ ಇದರ ಮುದರ್ರಿಸ್ ಬದ್ರುದ್ದೀನ್ ಅಹ್ಸನಿಯವರು ಮಿಲಾದ್ ಅಭಿಯಾನದ ಕುರಿತು ಕಿರು ಸಂದೇಶ ನೀಡಿದರು. ಕೆ.ಸಿ.ಎಫ್. ಖತ್ತರ್ ವತಿಯಿಂದ
01-11-2019 ರಂದು ನಡೆಯಲಿರುವ ಬೃಹತ್ ಮೀಲಾದ್ ಸಮಾವೇಶದ ಸ್ವಾಗತ ಸಮಿತಿಗೆ ಕಬೀರ್ ದೇರಳಕಟ್ಟೆ” ಮೊಹಮ್ಮದ್ ಪುಂಜಾಲ್ ಕಟ್ಟೆ” ಅಧ್ಯಕ್ಷರು ಮತ್ತು ಉಪಾದ್ಯಕ್ಷರಾಗಿಯು ಮುನೀರ್ ಮಾಗುಂಡಿ” ಮಿರ್ಷಾದ್ ಕನ್ಯಾನ ಕಾರ್ಯದರ್ಶಿಗಳಾಗಿಯು ಹಾಗೂ 24 ಕ್ಕು ಸದಸ್ಯರನ್ನೊಳಗೊಂಡ ಸಮಿತಿಯನ್ನು ಈ ಸಂದರ್ಭದಲ್ಲಿ ಶೈಖುನಾ ಮಾಣಿ ಉಸ್ತಾದರು ಘೋಷಿಸಿದರು.
ವೇದಿಕೆಯಲ್ಲಿ ಕೆ.ಸಿ.ಎಫ್. ಅಂತರಾಷ್ಟ್ರೀಯ ಸಮಿತಿ ಇಹ್ಸಾನ್ ವಿಭಾಗದ ಕಾರ್ಯದರ್ಶಿ ರಹೀಂ ಸ’ಅದಿ ಪಾಣೆಮಂಗಳೂರು, ಕೆ.ಸಿ.ಎಫ್. ಅಂತರಾಷ್ಟ್ರೀಯ ಸಮಿತಿ ಸದಸ್ಯರಾದ ಹಾಫಿಳ್
ಉಮರುಲ್ ಫಾರೂಕ್ ಸಖಾಫಿ, ಕೆ.ಸಿ.ಎಫ್. ಖತ್ತರ್ ರಾಷ್ಟ್ರೀಯ ಸಮಿತಿ ಶಿಕ್ಷಣ ವಿಭಾಗದ ಅಧ್ಯಕ್ಷ ಸತ್ತಾರ್ ಅಶ್ರಫಿ ಮಠ, ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಕಬೀರ್ ದೇರಳಕಟ್ಟೆ, ರಾಷ್ಟ್ರೀಯ ಸಮಿತಿ ಇಹ್ಸಾನ್ ವಿಭಾಗದ ಅಧ್ಯಕ್ಷ ಮುನೀರ್ ಮಾಗುಂಡಿ, ಅಬ್ದುರಹ್ಮಾನ್
ಪುಂಜಾಲ್ ಕಟ್ಟೆ, ಸಾದಿಕ್ ಮೂಳೂರು ಮೊದಲಾದವರು ಉಪಸ್ಥಿತರಿದ್ದರು.
ಕೆ.ಸಿ.ಎಫ್ ಖತ್ತರ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಹಂಡುಗೂಳಿ ಸ್ವಾಗತಿಸಿ, ಕೊನೆಯಲ್ಲಿ ಮಿರ್ಷಾದ್ ಕನ್ಯಾನ ವಂದಿಸಿದರು .
ಮೀಡಿಯಾ ವಿಭಾಗ
ಕೆ.ಸಿ.ಎಫ್. ಖತ್ತರ್















ಇನ್ನಷ್ಟು ಸುದ್ದಿಗಳು
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್