janadhvani

Kannada Online News Paper

ಚಾಮರಾಜನಗರ ಜಿಲ್ಲೆಯಲ್ಲಿ ನಡೆದ ಎಸ್ಸೆಸ್ಸೆಫ್ Qteam ZACVIK

ಗುಂಡ್ಲುಪೇಟೆ : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ ರಾಜ್ಯದಾದ್ಯಂತ ಹಮ್ಮಿಕೊಂಡ ಜಿಲ್ಲಾ ಮಟ್ಟದ ಕ್ಯು ಟೀಂ ಝಾಕ್ವಿಕ್ ಚಾಮರಾಜನಗರ ಜಿಲ್ಲಾ ಮಟ್ಟದ ಕಾರ್ಯಕ್ರಮ ಗುಂಡ್ಲುಪೇಟೆಯ ದಾರುಸ್ಸಲಾಂನಲ್ಲಿ ಅಬ್ದುರ್ರಹ್ಮಾನ್ ನೂರಾನಿಯವರ ಅಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ನಡೆಯಿತು.

ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ನವಾಝ್ ಭಟ್ಕಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಾಜ್ಯ ಉಪಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಮಂಗಳೂರು ರಾಜ್ಯದಾದ್ಯಂತ ಎಸ್ಸೆಸ್ಸೆಫ್ ಕಾರ್ಯವೈಖರಿ ಹಾಗೂ ಕ್ಯು ಟೀಂ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು.

ರಾಜ್ಯ ನಾಯಕ ಮುನೀರ್ ಮದನಿ ಮೈಸೂರು, ಶಿಹಾಬ್ ಸಖಾಫಿ ಮೈಸೂರು ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಮೌಲಾನಾ ಸಲೀಂ ಭಾಷಾ ಉಲೂಮಿ ಸ್ವಾಗತಿಸಿ ವಂದಿಸಿದರು.