ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಸಮಿತಿ ವತಿಯಿಂದ ಧ್ವಜ ದಿನ ಸಂಭ್ರಮಾಚರಣೆ ಕಾರ್ಯಕ್ರಮ *#ರೀಚ್* ಸೆಪ್ಟಂಬರ್ 19ರಂದು ಎಸ್.ವೈ.ಎಸ್ ರಾಜ್ಯ ಸಮಿತಿ ಸದಸ್ಯರಾದ ಅಬ್ದುಲ್ ಹಮೀದ್ ಬೀಜಕೊಚ್ಚಿ ಅಧ್ಯಕ್ಷತೆಯಲ್ಲಿ ಸಂದೀಪಾ ಸ್ಪೆಷಲ್ ಸ್ಕೂಲ್ ನಲ್ಲಿ ಜರಗಿತು. ಎಸ್ಸೆಸ್ಸೆಫ್ ದ.ಕ ಈಸ್ಟ್ ಝೋನ್ ಕಾರ್ಯದರ್ಶಿ ಸಿದ್ದೀಖ್ ಗೂನಡ್ಕ ಉದ್ಘಾಟಿಸಿದರು. ಎಸ್.ವೈ.ಎಸ್ ಸುಳ್ಯ ಸೆಂಟರ್ ಸಮಿತಿ ಅಧ್ಯಕ್ಷರಾದ ಎ.ಬಿ ಅಶ್ರಫ್ ಸಅದಿ ದುಆ ನೆರೆವೇರಿಸಿದರು.
ರೀಚ್ – ಧ್ವಜ ದಿನ ಸಂಭ್ರಮಾಚರಣೆಯಲ್ಲಿ ಸಂಘಟನೆಯ ಪ್ರಾರಂಭ ಕಾಲದಲ್ಲಿ ಅದರ ಚುಕ್ಕಾಣಿ ಹಿಡಿದು ಬಲಿಷ್ಠಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಕರ್ನಾಟಕ ಎಸ್ಸೆಸ್ಸೆಫ್ ಸ್ಥಾಪಕಧ್ಯಕ್ಷರಾದ ಎ.ಬಿ ಹಸನುಲ್ ಫೈಝಿ ಮತ್ತು ಪ್ಲಾಸ್ಟಿಕ್ ಮುಕ್ತ ಸ್ವಚ್ಛ ಸುಳ್ಯ, ಬೆಳಕು-ಮನೆ ಯೋಜನೆಯ ಮೂಲಕ ಸುಳ್ಯದ ಅಭಿವೃದ್ಧಿ ಕನಸಾಗಿಟ್ಟುಕೊಂಡು ತಾಲೂಕನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿರುವ ಸುಳ್ಯ ತಾಲೂಕು ತಹಶೀಲ್ದಾರ್ ಶ್ರೀ ಕುಂಞಿ ಅಹ್ಮದ್ ಹಾಗೂ ಎಂ.ಬಿ ಫೌಂಡೇಶನ್ ಮೂಲಕ ವಿಕಲಚೇತನ ಮಕ್ಕಳ ವಿದ್ಯಾರ್ಜನೆಯ ಶೈಕ್ಷಣಿಕ ಹರಿಕಾರ ಮಾದರಿ, ಸ್ಫೂರ್ತಿದಾಯಕ ಕಾರ್ಯಚಟುವಟಿಕೆಗಳು ನೇತೃತ್ವ ನೀಡುತ್ತಿರುವ ಡಾ. ಎಂ.ಬಿ ಸದಾಶಿವ ರವರುಗಳನ್ನು ಗೌರವಿಸಲಾಯಿತು. ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಅಧ್ಯಕ್ಷ ಸ್ವಬಾಹ್ ಹಿಮಮಿ ಅಭಿನಂದನಾ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ರವರ ಅಭಿವೃದ್ಧಿ ಯೋಜನೆಗಳ ರೂವಾರಿಗಳಾದ ಶರೀಫ್ ಜಟ್ಟಿಪಳ್ಳ, ಲೋಕೇಶ್ ಗುಡ್ಡಮನೆ, ವಿನೋದ್ ಲಸಾರ್ಡೋ ಹಳೆಗೇಟು ಹಾಗೂ ಎಸ್.ವೈ.ಎಸ್, ಎಸ್ಸೆಸ್ಸೆಫ್ ಸಾಂತ್ವನ ಸಮಿತಿ ನಾಯಕರಾದ ರಫೀಕ್ ಬಿ.ಎ ಹಾಗೂ ಸಿದ್ದೀಕ್ ಗೂನಡ್ಕ ರವರನ್ನು ಅಭಿನಂದಿಸಲಾಯಿತು. ಫೈಝಲ್ ಝುಹ್ರಿ ಕಲ್ಲುಗುಂಡಿ, ಉಮರ್ ಪಿ.ಎ ಗೂನಡ್ಕ, ಅಂದುಂಞಿ ಗೋರಡ್ಕ, ಸಿದ್ದೀಕ್ ಕಟ್ಟೆಕಾರ್, ಲತೀಫ್ ಕುತ್ತಮಟ್ಟೆ, ಹಸೈನಾರ್ ಜಯನಗರ ಮುಂತಾದ ನಾಯಕರು ಸಂಸ್ಥೆಯ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸ್ವಾದಿಖ್ ಮಾಸ್ಟರ್ ಕಲ್ಲುಗುಂಡಿ ಸ್ವಾಗತಿಸಿ ಮಾಲಿಕ್ ಕೊಯಂಗಿ ವಂದಿಸಿದರು.















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ