janadhvani

Kannada Online News Paper

ತ್ಯಾಗ ಸನ್ನದ್ಧ ಜೀವನಕ್ಕೆ ಕಾರ್ಯಕರ್ತರು ಸಜ್ಜಾಗಬೇಕು : ಖಮರುದ್ದೀನ್ ಗೂಡಿನಬಳಿ

ವೈಯುಕ್ತಿಕ ಸಾಮೂಹಿಕ ಜೀವನದಲ್ಲಿ ತ್ಯಾಗ ಭರಿತವಾದ ಜೀವನಕ್ಕೆ ಕೆ.ಸಿ.ಎಫ್. ಕಾರ್ಯಕರ್ತರು ಸಜ್ಜಾಗಬೇಕೆಂದು ಕೆ.ಸಿ.ಎಫ್. ಅಂತರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಖಮರುದ್ದೀನ್ ಗೂಡಿನಬಳಿ ಕರೆ ನೀಡಿದರು. ಹಿಜ್-ರಾ ಪಲಾಯನವಲ್ಲ, ಹೊಸತನವಕ್ಕೆ ಪಯಣವೆಂಬ ಶೀರ್ಷಿಕೆಯಡಿಯಲ್ಲಿ ಮೊಹರ್ರಮ್ ಹತ್ತರ ಪುಣ್ಯ ರಾತ್ರಿ ಯಲ್ಲಿ ಕೆ.ಸಿ.ಎಫ್. ದಮ್ಮಾಮ್ ನಾರ್ತ್ ಸಮಿತಿ ಹಮ್ಮಿಕೊಂಡ WHAT NEXT ವಿಶೇಷ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿ ಮಾತನಾಡುತ್ತಿದ್ದರು.

ತ್ಯಾಗದಿಂದ ಮಾತ್ರ ಜಗತ್ತಿನಲ್ಲಿ ಏನಾದಾರೂ ಸಾಧನೆ ಮಾಡಬಹುದು. ಪ್ರವಾದಿ ಪೈಗಂಬರ್ ಸಲ್ಲಲ್ಲಾಹು ಅಲೈಹಿವಸಲ್ಲಮರು ಸ್ವಹಾಬಾ ಗಳೊಂದಿಗೆ ನಡೆಸಿದ ತ್ಯಾಗ ಭರಿತ ಹಿಜ್ರಾ ಇಸ್ಲಾಮಿನಲ್ಲಿ ಎಂದಿಗೂ ಅದ್ವಿತೀಯವಾದುದು. ಹಾಜರ ಬೀವಿ (ರ) ತ್ಯಾಗಮಾಯ ಜೀವನದಿಂದಲೇ ಜಗತ್ತು ಇಂದಿಗೂ ಅವರನ್ನು ಸ್ಮರಿಸುತ್ತಲೇ ಇದೆ. ಕಾರ್ಯಕರ್ತರು ತುಂಬು ಹೃದಯದಿಂದ ತನು – ಮನ – ಧನದ ತ್ಯಾಗಕ್ಕೆ ಜೀವನದಲ್ಲಿ ಸದಾ ಸನ್ನದ್ಧವಾಗಿರಬೇಕು.

ದೀನಿಗಾಗಿ ತ್ಯಾಗ ಮಾಡಿದ ಎಲ್ಲರನ್ನೂ ಜಗತ್ತು ಇಂದು ಸ್ಮರಿಸುತ್ತಲೇ ಇದೆ. ಅದು ನಮ್ಮ ಕಡ್ಡಾಯ ಬಾಧ್ಯತೆ ಎಂದು ಹೇಳಿದರು. ಇತ್ತೀಚೆಗೆ ನಮ್ಮಿಂದ ಅಗಲಿದ ಶರಫುಲ್ ಉಲಮಾ ಅನುಸ್ಮರಣೆ ಗೈದ ಕೆ.ಸಿ.ಎಫ್. ರಾಷ್ಟ್ರೀಯ ಸಮಿತಿ ಅಧ್ಯಕ್ಷ ಬಹು:ಡಿ.ಪಿ. ಯೂಸುಫ್ ಸಖಾಫಿ ಬೈತಾರ್ ಶರಫುಲ್ ಉಲಮಾ ಈ ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸವಿಸ್ತಾರವಾಗಿ ಪ್ರದಿಪಾದಿಸಿದರು ಹಾಗೂ ಕಾರ್ಯಕತರು ಅಲ್ – ಮದೀನಾ ಸಂಸ್ಥೆಯನ್ನು ಎದೆಗೆತ್ತಿಕೊಳ್ಳಬೇಕೆಂದೂ ಕರೆ ನೀಡಿದರು.

ಕೆ.ಸಿ.ಎಫ್. ಅಂತರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಆಗಿ ಆಯ್ಕೆ ಆದ ಬಳಿಕ ಪ್ರಥಮವಾಗಿ ದಮ್ಮಾಮ್ ಗೆ ಭೇಟಿ ನೀಡಿರುವ ಖಮರುದ್ದೀನ್ ಗೂಡಿನಬಳಿಯವರನ್ನು ಸಭೆಯೂ ತುಂಬು ಆದರದಿಂದ ಬರಮಾಡಿಕೊಂಡು ಸಂಘಟನೆಯ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಸರಿಸಾಟಿ ಇಲ್ಲದ ಹತ್ತು ಹಲವು ದಅವಾ ಚಟುವಟಿಕೆಗಳೊಂದಿಗೆ ಕರ್ನಾಟಕದ ಚರಿತ್ರೆಯಲ್ಲಿ ಹೊಸ ಇತಿಹಾಸವನ್ನೇ ಸ್ರಷ್ಟಿಸಿರುವ ಕರ್ನಾಟಕ ರಾಜ್ಯ ಎಸ್.ಎಸ್.ಎಫ್. ಇದರ ಹೆಮ್ಮೆಯ ಘಟಕ ಇಹ್ಸಾನ್, ಇದರ ಅಂತಾರಾಷ್ಟ್ರೀಯ ಸಮಿತಿಯ ನೂತನ ಚೇರ್ಮಾನ್ ಆಗಿ ಆಯ್ಕೆ ಆದ ನಮ್ಮ ಸೆಕ್ಟರ್ ನ ನಿರ್ದೇಶಕರು ಹಾಗೂ ರೈಸ್ಕೋ ಗ್ರೂಪ್ ಇದರ ಸಿ.ಈ.ಓ. ಆಗಿರುವ ಅಬೂಬಕ್ಕರ್ ಪಡುಬಿದ್ರಿ ಇವರಿಗೆ ಸಭೆಯಲ್ಲಿ ಗೌರವಾರ್ಪಣೆ ಮಾಡಲಾಯಿತು.

ದಮ್ಮಾಮ್ ಝೋನ್ ಸಮಿತಿ ಇದರ ಅಧ್ಯಕ್ಷ ಬಹು: ರಶೀದ್ ಸಖಾಫಿ ಕಾರ್ಯಕ್ರಮ ಉದ್ಘಾಟಣೆಗೈದರು. ಯೂಸುಫ್ ಸಅದಿ ಅಯ್ಯಂಗೇರಿ ಆಧ್ಯಾತ್ಹ್ಮಿಕ ಮಜಲಿಸ್ ನ ನೇತ್ರತ್ವ ವಹಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೆಕ್ಟರ್ ಅಧ್ಯಕ್ಷರಾದ ಶಿಯಾಬುದ್ದೀನ್ ಸಖಾಫಿ( ಹಿಮಮಿ)ಯವರು ವಹಿಸಿದ್ದರು. ಆರಂಭದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ನೌಶಾದ್ ತಲಪಾಡಿ ಸ್ವಾಗತ ಬಯಸಿ ಕೊನೆಯಲ್ಲಿ ತ್ವಾಹ ಕಾಟಿಪಳ್ಳ ಧನ್ಯವಾದವಿತ್ತರು.