ಕಳೆದ ಮೂರು ವರ್ಷಗಳಿಂದ ಸಕ್ರಿಯವಾಗಿ ಹಲವಾರು ಯೋಜನೆಗಳೊಂದಿಗೆ ಸಾಮಾಜಿಕ ರಂಗದಲ್ಲಿ ಮಿಂಚುತ್ತಿರುವ ಬ್ಯಾರಿ ನಿಖಾಃ ಹೆಲ್ಪ್ ಲೈನ್ ತಂಡ ವಧು ವರರಿಗೆ ಸೂಕ್ತ ವೈವಾಹಿಕ ಸಂಭಂಧವನ್ನು ಕಲ್ಪಿಸಿಕೊಡುವುದಲ್ಲದೇ ಆರ್ಥಿಕವಾಗಿ ಅಶಕ್ತರಾದ ಕುಟುಂಬದ ವಿವಾಹ ಸಮಾರಂಭಕ್ಕೆ ಮದುವೆ ಉಡುಪುಗಳನ್ನು ನೀಡಿಯೂ , ಪ್ರವಾಹ ಪೀಡಿತ ಪ್ರದೇಶ ನಿವಾಸಿಗಳಿಗೆ ತಕ್ಷಣ ಸ್ಪಂದಿಸಿ ಬಟ್ಟೆ ಬರೆ, ಆಹಾರ ಹಾಗೂ ದಿನ ಬಳಕೆಯ ಸಾಮಾಗ್ರಿಗಳನ್ನು ನೀಡಿ ನೆರೆ ಪರಿಹಾರದಲ್ಲಿ ತೊಡಗಿಸಿಕೊಳ್ಳುತ್ತಾ, ಮಂಗಳೂರಿನ ಆಸುಪಾಸಿನ ನಿರಾಶ್ರಿತರಿಗೂ ಸರಕಾರೀ ಆಸ್ಪತ್ರೆಗಳಲ್ಲಿರುವ ಒಳರೋಗಿಗಳಿಗೂ ಮೂಲಭೂತ ಹಕ್ಕುಗಳ ನೆರವು ನೀಡುತ್ತಾ ಸಂತೃಪ್ತಿ ಹೊಂದುವ ಬ್ಯಾರಿ ನಿಖಾಃ ಹೆಲ್ಪ್ ಲೈನ್ ತಂಡದ ಅಂತರಾಷ್ಟ್ರೀಯ ನೂತನ ಸಮಿತಿಯು ರಚನೆಯಾಯಿತು.
ತಂಡದ ಅಧ್ಯಕ್ಷರಾಗಿ ಇಮ್ತಿಯಾಝ್ ಉಡುಪಿ ( ಒಮಾನ್ ), ಉಪಾಧ್ಯಕ್ಷರಾಗಿ ಅಬ್ದುಲ್ ಮಜೀದ್ ಬಾಹಸನೀ( ಸೌದಿ ಅರೇಬಿಯಾ ), ಪ್ರಧಾನ ಕಾರ್ಯದರ್ಶಿಯಾಗಿ ಇರ್ಫಾನ್ ಕಲ್ಲಡ್ಕ ( ದುಬೈ), ಸಂಘಟನಾ ಸಲಹೆಗಾರರಾಗಿ ಖಲಂದರ್ ರಝ್ವಿ ಬೆಜ್ಜವಳ್ಳಿ ( ದುಬೈ), ಕೋಶಾಧಿಕಾರಿಯಾಗಿ ಸುಹೈಲ್ ತೊಕ್ಕೊಟ್ಟು, ಸಾಂತ್ವನ ವಿಭಾಗದ ಕಾರ್ಯದರ್ಶಿಯಾಗಿ ಮಜೀದ್ ಬಿಕರ್ನಕಟ್ಟೆ, ಮಾಧ್ಯಮ ವಿಭಾಗದ ಕಾರ್ಯದರ್ಶಿಯಾಗಿ ಫೌಸಿಲ್ ನೆಕ್ಕರೆ, ಮಾಹಿತಿ – ಸಂಪರ್ಕ ಕಾರ್ಯದರ್ಶಿಯಾಗಿ ಅಶ್ರಫ್ ಶಿರ್ವ ( ಸೌದಿ ಅರೇಬಿಯಾ ), ಸಂಘಟನಾ ಕಾರ್ಯದರ್ಶಿಯಾಗಿ ನೌಶಾದ್ ಅಮ್ಮೆಂಬಳ ಆಯ್ಕೆಯಾದರು.
ನೂತನವಾಗಿ ನೇಮಕಗೊಂಡ ಎಲ್ಲಾ ಪದಾಧಿಕಾರಿಗಳಿಗೂ ಶುಭಕೋರಿದ ತಂಡದ ಸ್ಥಾಪಕಾಧ್ಯಕ್ಷರಾದ ರಾಶ್ ಬ್ಯಾರಿ ಮುಂದಿನ ಯೋಜನೆಯ ಬಗೆಗಿನ ಮಾಹಿತಿ ಹಾಗೂ ಕಾರ್ಯಕ್ಷಮತೆಯ ಬಗ್ಗೆ ನಿರ್ದೇಶನವನ್ನು ನೀಡಿದರು.
ಮಾಧ್ಯಮ ವಿಭಾಗ :(ಬ್ಯಾರಿ ನಿಖಾಃ ಹೆಲ್ಪ್ ಲೈನ್)















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ