ಮಕ್ಕಾ.ಆ,14: 2019 ನೇ ಸಾಲಿನ ಹಜ್ ಕರ್ಮವು ಆ,9 ರಂದು ಆರಂಭಿಸಿ ಇಂದು ಸಮಾಪ್ತಿಗೊಂಡಿದೆ. ವಿದಾಇನ ತ್ವವಾಫ್ ನೊಂದಿಗೆ ಹಜ್ ಯಾತ್ರಿಕರು ಸ್ವದೇಶಕ್ಕೆ ಮರಳಲಿದ್ದು,ರೌಳಾ ಝಿಯಾರತ್ ಕೈಗೊಳ್ಳದವರು ಮದೀನಾ ಕಡೆ ಯಾತ್ರೆ ಹೊರಡಲಿದ್ದಾರೆ.
ಈ ಬಾರಿ ಹಜ್ಜ್‌ಗಾಗಿ ಜಗತ್ತಿನ ವಿವಿಧ ದಿಕ್ಕಿನಿಂದ ಸುಮಾರು 22 ಲಕ್ಷಕ್ಕೂ ಮಿಕ್ಕ ಯಾತ್ರಿಕರು ಆಗಮಿಸಿದ್ದರು.ಇಷ್ಟೊಂದು ಹಜ್ ಯಾತ್ರಿಕರ ಸೇವೆಗಾಗಿ ಸ್ವಯಂ ಸೇವಕರ ತಂಡ ಬಹಳ ಮುಖ್ಯ.
ಇದನ್ನು ಗಂಭೀರವಾಗಿ ಪರಿಗಣಿಸಿದ ಕೆಸಿಎಫ್ (ಕರ್ನಾಟಕ ಕಲ್ಚರಲ್ ಫೌಂಡೇಶನ್) ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಅಧೀನದಲ್ಲಿ ಸುಮಾರು 500 ಕ್ಕೂ ಮಿಕ್ಕ ಅನುಭವೀ ಸ್ವಯಂ ಸೇವಕರನ್ನು ಸಜ್ಜುಗೊಳಿಸಿತ್ತು.
ಅರಫಾ, ಮಿನಾ, ಮುಝ್ದಲಿಫಾ ಮತ್ತು ಮಕ್ಕಾ ಮದೀನಾ ಹರಂ ಪರಿಸರದಲ್ಲಿ ಸುಡು ಬಿಸಿಲಿನಲ್ಲೂ, ಬೋರ್ಗೆರೆಯುವ ಮಳೆಯಲ್ಲೂ ಅಲ್ಲಾಹನ ಪ್ರೀತಿಯನ್ನು ಮಾತ್ರ ಮನಗಂಡು ಹಜ್ಜಾಜ್ ಗಳ ಸೇವೆಯಲ್ಲಿ ತೊಡಗಿದ್ದ ತಂಡದ ಪ್ರಮುಖರಾದ, HVC ಪ್ರ.ಕಾರ್ಯದರ್ಶಿ ಇಬ್ರಾಹೀಂ ಕಿನ್ಯಾ, ಫೈಝಲ್ ಕೃಷ್ಣಾಪುರ, ಮುಹಮ್ಮದ್ ಮಲೆಬೆಟ್ಟು, ಹಾಫಿಲ್ ಜಿ.ಎಂ. ಸುಲೈಮಾನ್ ಹನೀಫಿ,ಮೂಸಾ ಹಾಜಿ ಮಕ್ಕಾ, ಝಹೀರ್ ಅಬ್ಬಾಸ್ ಉಳ್ಳಾಲ, ಸಲಾಂ ಪಡ್ಪು,ಎನ್ಮೂರು ಹಾಗೂ ಅಶ್ರಫ್ ಮದೀನಾ ಮುಂತಾದವರೊಂದಿಗೆ ಕೈಜೋಡಿಸಿ ಕಾರ್ಯಾಚರಿಸಿದ ಸ್ವಯಂ ಸೇವಕ ತಂಡದ ಸೇವಾ ಕಾರ್ಯವು ಅತ್ಯಂತ ಶ್ಲಾಘನೀಯ.
ಸ್ವಯಂ ಸೇವಕ ತಂಡದ ಪ್ರಾಮಾಣಿಕ ಸೇವೆಗೆ ಸೌದಿ ಅರೇಬಿಯಾದ ವಿವಿಧ ಪೋಲಿಸ್ ಅಧಿಕಾರಿಗಳಿಂದ ಪ್ರಶಂಸೆಯ ಮಹಾಪೂರವೇ ಹರಿದುಬಂದಿದೆ.ಮಾತ್ರವಲ್ಲದೆ ಈ ಬಾರಿಯೂ ಕೆಸಿಎಫ್ HVC ತಂಡಕ್ಕೆ ಸೌದಿ ಅರೇಬಿಯಾದ ಆರೋಗ್ಯ ಇಲಾಖೆಯಿಂದ ಪ್ರಶಂಸೆ ಪತ್ರ ಲಭಿಸಿದೆ.
ಕೆಸಿಎಫ್ ರಾಷ್ಟ್ರೀಯ ಅಧ್ಯಕ್ಷ ಡಿ.ಪಿ.ಯೂಸುಫ್ ಸಖಾಫಿ ಬೈತಾರ್,ಪ್ರಧಾನ ಕಾರ್ಯದರ್ಶಿ ಸ್ವಾಲಿಹ್ ಬೆಳ್ಳಾರೆ, ಕೆಸಿಎಫ್ ಐಎನ್‌ಸಿ ನಾಯಕ ಎನ್‌ಎಸ್ ಅಬ್ದುಲ್ಲಾ ಹಾಜಿ, ಕೆಸಿಎಫ್ ರಾಷ್ಟ್ರೀಯ ನಾಯಕ ಬಶೀರ್ ತಲಪಾಡಿ ಮುಂತಾದವರ ಸಮ್ಮುಖದಲ್ಲಿ ಪ್ರಶಂಸೆ ಪತ್ರವನ್ನು ಸ್ವೀಕರಿಸಲಾಯಿತು.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ