ಪರಸ್ಪರ ಪ್ರೀತಿಯಿಂದ ಬಿಕ್ಕಟ್ಟನ್ನು ಎದುರಿಸಬೇಕು- ಸುಲ್ತಾನುಲ್ ಉಲಮಾ ಕಾಂತಪುರಂ

ಮಕ್ಕಾ: ದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ಲೆಕ್ಕಿಸದೆ ಪರಸ್ಪರ ಪ್ರೀತಿಸಲು, ಬೆಂಬಲಿಸಲು ಮತ್ತು ಪ್ರೀತಿ ಹಂಚಿಕೊಳ್ಳಲು ಮುಂದಾಗಬೇಕೆಂದು ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಮಕ್ಕಾದಲ್ಲಿ ಕರೆ ನೀಡಿದ್ದಾರೆ.

ಪ್ರಪಂಚದ ಅತ್ಯುತ್ತಮ ಜೀವಿಗಳಾದ ಮಾನವರು, ಸಹ ಜೀವಿಗಳೊಂದಿಗೆ ಪ್ರೀತಿ ಮತ್ತು ಸಾಮರಸ್ಯದಿಂದ ಬದುಕುವಂತಾಗಬೇಕು ಎಂದು
ಅವರು ಒತ್ತಾಯಿಸಿದರು. ಐಸಿಎಫ್ ರಾಷ್ಟ್ರೀಯ ಹಜ್ ಕಾರವಾನ್‌ನಲ್ಲಿ ನೀಡಿದ ಅಭಿನಂದನೆಯನ್ನು ಸ್ವೀಕರಿಸಿ ಅವರು ಮಾತನಾಡಿದರು.

ಮಹಾ ಪ್ರವಾಹವು ನಮ್ಮ ರಾಜ್ಯದ ಮೇಲೆ ಮತ್ತೊಮ್ಮೆ ಬಂದೆರಗಿದಾಗ, ಕೇರಳೀಯ ಸಮುದಾಯವು ಉಳಿಸಿಕೊಂಡಿರುವ ಸಾಮರಸ್ಯದ ಸರಪಳಿ, ಪ್ರೀತಿ ಮತ್ತು ಸಹಾನುಭೂತಿಯ ಪರಂಪರೆಯಿಂದಾಗಿ ಅದನ್ನು ಇತ್ಯರ್ಥಗೊಳಿಸಲು ನಮಗೆ ಸಾಧ್ಯವಾಯಿತು. ಬೆರಳೆಣಿಕೆಯ ಅಪಶಬ್ಧಗಳನ್ನು ಕಡೆಗಣಿಸಿ ನಾವು ರಾಜ್ಯದ ಪುನರ್ನಿರ್ಮಾಣಕ್ಕೆ ಮುಂದಾಗಬೇಕು.

ಪವಿತ್ರ ಹಜ್ ಕೂಡ ಪರಸ್ಪರ ಪ್ರೀತಿ ಮತ್ತು ಸಾಮರಸ್ಯದ ಸಂದೇಶವನ್ನು ನೀಡುತ್ತದೆ. ಸಹೋದರನ ವ್ಯಕ್ತಿತ್ವ ಮತ್ತು ಅಭಿಮಾನವು ಅಮೂಲ್ಯ. ಅದಕ್ಕೆ ಹಾನಿ ಉಂಟುಮಾಡುವ ಯಾವುದೇ ಕ್ರಿಯೆಗಳು
ನಮ್ಮಿಂದ ಉಂಟಾಗಬಾರದು, ಪರಸ್ಪರ ನೀಡಿ-ಪಡೆಯುವ ಮೂಲಕ ಸಾಮರಸ್ಯದ ಕೊಂಡಿಯನ್ನು ಕಾಪಾಡಿಕೊಳ್ಳಬೇಕು ಎಂದು ಕಾಂತಪುರಂ ಹೇಳಿದರು.

ರಾಷ್ಟ್ರೀಯ ಅಧ್ಯಕ್ಷ ಮತ್ತು ಮುಖ್ಯ ಅಮೀರ್, ಸೈಯದ್ ಹಬೀಬ್ ಅಲ್-ಬುಖಾರಿ ಅಧ್ಯಕ್ಷತೆ ವಹಿಸಿದ್ದರು. ಉದ್ಘಾಟನೆಯನ್ನು ದ‌ಅ್‌ವಾ ಅಧ್ಯಕ್ಷ ಮುಹಿಯುದ್ದೀನ್ ಸ‌ಅದಿ ಕೊಟುಕರ ನಿರ್ವಹಿಸಿದರು. ರಶೀದ್ ಉಸ್ತಾದ್ ರಿಯಾದ್, ಝುಬೈರ್ ಜಖಾಫಿ, ಸಿರಾಜ್ ಕುಟ್ಯಾಡಿ, ಅಶ್ರಫಲಿ, ಹಾರಿಸ್ ಜೌಹರಿ, ಸಯೀದ್ ಸಖಾಫಿ, ಸ‌ಅದ್ ಅಮಾನಿ, ಝೈನುದ್ದೀನ್ ಮುಸ್ಲಿಯಾರ್ ವಾಝವಾಟ, ಹಸನ್ ಅಹ್ಸನಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!