ಅಪರಾಧಗಳನ್ನು ತಡೆಗಟ್ಟಲು ಶಾರ್ಜಾದಾದ್ಯಂತ ಕಣ್ಗಾವಲು ಕ್ಯಾಮೆರಾ ಅಳವಡಿಕೆ

ಶಾರ್ಜಾ: ಅಪರಾಧಗಳನ್ನು ಕಡಿಮೆಗೊಳಿಸಲು ಶಾರ್ಜಾದಾದ್ಯಂತ ಕಣ್ಗಾವಲು ಕ್ಯಾಮೆರಾ ಅಳವಡಿಸಲಾಗುತ್ತಿದ್ದು, ಈ ಯೋಜನೆಯನ್ನು ಶಾರ್ಜಾ ಕಾರ್ಯಕಾರಿ ಮಂಡಳಿ ಜಾರಿಗೊಳಿಸುತ್ತಿದೆ.

ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಎಮಿರೇಟ್‌ನಾದ್ಯಂತ ಭದ್ರತೆ ಒದಗಿಸುವ ಉದ್ದೇಶವನ್ನು ಶಾರ್ಜಾ ಪೊಲೀಸರು ಹೊಂದಿದ್ದಾರೆ. ಅಲ್ ನಹ್ದಾದಲ್ಲಿ ಪ್ರಯೋಗಾರ್ಥ ಆರಂಭಿಸಲಾದ 24 ಗಂಟೆಗಳ ಕಾಲ ಕಾರ್ಯಾಚರಿಸುವ ಮೊಬೈಲ್ ಪೊಲೀಸ್ ಠಾಣೆಯ ಮಾದರಿಯನ್ನು ಇತರ ಪ್ರದೇಶಗಳಿಗೂ ವಿಸ್ತರಿಸಲಾಗುವುದು.

ಕೊಲೆ, ಅಪಹರಣ, ದರೋಡೆ ಮತ್ತು ವಾಹನ ಕಳ್ಳತನದಂತಹ ಪ್ರಮುಖ ಅಪರಾಧಗಳನ್ನು ಗಮನಾರ್ಹವಾಗಿ ಕಡಿಮೆಗೊಳಿಸಲು ಇದು ಸಹಾಯಕವಾಗಲಿದೆ ಎಂದು ಪೊಲೀಸ್ ಕಾರ್ಯಾಚರಣೆಗಳ ಮಹಾನಿರ್ದೇಶಕ ಬ್ರಿಗೇಡಿಯರ್ ಮುಹಮ್ಮದ್ ರಶೀದ್ ಬಯಾತ್ ಆಶಿಸಿದ್ದಾರೆ. ಆ್ಯಂಬುಲೆನ್ಸ್ ವಾಹನಗಳಿಗೆ ತಡೆ ಉಂಟುಮಾಡುವ ವಾಹನಕ್ಕೆ ನೀಡಲಾಗುತ್ತಿದ್ದ ದಂಡವನ್ನು 3 ಸಾವಿರ ಮತ್ತು 6 ಬ್ಲಾಕ್ ಪಾಯಿಂಟ್‌ಗಳಿಗೆ ಹೆಚ್ಚಿಸಲಾಗಿದೆ.

ಅಂತರರಾಷ್ಟ್ರೀಯ ಕ್ರಿಮಿನಲ್ ಗ್ಯಾಂಗ್‌ಗಳು ಆನ್‌ಲೈನ್‌ನಲ್ಲಿ ಬ್ಯಾಂಕುಗಳಿಂದ ಹಣ ದೋಚಲು ಹೊಂಚು ಹಾಕುತ್ತಿದ್ದು, ತಮ್ಮ ಬ್ಯಾಂಕ್ ವಿವರಗಳನ್ನು ದೂರವಾಣಿ ಮೂಲಕ ಅಥವಾ ಆನ್‌ಲೈನ್‌ನಲ್ಲಿ ಮೂಲಕ ಹಂಚಿಕೊಳ್ಳದಂತೆ ಪೊಲೀಸರು ಎಚ್ಚರಿಸಿದ್ದಾರೆ.

ಹಬ್ಬದ ಹಿನ್ನೆಲೆಯಲ್ಲಿ ಕಾರ್ಯಾಚರಿಸುವ ಭಿಕ್ಷುಕರು ಮತ್ತು ರಸ್ತೆ ವ್ಯಾಪಾರಿಗಳನ್ನು ಪ್ರೋತ್ಸಾಹಿಸಬೇಡಿ. ಅಕ್ರಮವಾಗಿ ಮಾರಾಟಮಾಡಲಾಗುವ ಇಂಟರ್ನ್ಯಾಶನಲ್ ಸಿಮ್ ಕಾರ್ಡ್‌ಗಳನ್ನು ಖರೀದಿಸದೆ ಅಧಿಕೃತ ಸಂಸ್ಥೆಗಳಿಂದ ಖರೀದಿಸಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.

ಗಂಭೀರ ಅಪಘಾತಗಳು, ದರೋಡೆ ಮುಂತಾದ ತುರ್ತು ಪ್ರಕರಣಗಳಿಗೆ ಮಾತ್ರ 999 ಅನ್ನು ಬಳಸಬೇಕು ಅಲ್ಲದ ವೇಳೆ 901ಕ್ಕೆ ಸಂಪರ್ಕಿಸಬೇಕೆಂದು ಶಾರ್ಜಾ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!