ಶಾರ್ಜಾ: ಅಪರಾಧಗಳನ್ನು ಕಡಿಮೆಗೊಳಿಸಲು ಶಾರ್ಜಾದಾದ್ಯಂತ ಕಣ್ಗಾವಲು ಕ್ಯಾಮೆರಾ ಅಳವಡಿಸಲಾಗುತ್ತಿದ್ದು, ಈ ಯೋಜನೆಯನ್ನು ಶಾರ್ಜಾ ಕಾರ್ಯಕಾರಿ ಮಂಡಳಿ ಜಾರಿಗೊಳಿಸುತ್ತಿದೆ.
ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಎಮಿರೇಟ್ನಾದ್ಯಂತ ಭದ್ರತೆ ಒದಗಿಸುವ ಉದ್ದೇಶವನ್ನು ಶಾರ್ಜಾ ಪೊಲೀಸರು ಹೊಂದಿದ್ದಾರೆ. ಅಲ್ ನಹ್ದಾದಲ್ಲಿ ಪ್ರಯೋಗಾರ್ಥ ಆರಂಭಿಸಲಾದ 24 ಗಂಟೆಗಳ ಕಾಲ ಕಾರ್ಯಾಚರಿಸುವ ಮೊಬೈಲ್ ಪೊಲೀಸ್ ಠಾಣೆಯ ಮಾದರಿಯನ್ನು ಇತರ ಪ್ರದೇಶಗಳಿಗೂ ವಿಸ್ತರಿಸಲಾಗುವುದು.
ಕೊಲೆ, ಅಪಹರಣ, ದರೋಡೆ ಮತ್ತು ವಾಹನ ಕಳ್ಳತನದಂತಹ ಪ್ರಮುಖ ಅಪರಾಧಗಳನ್ನು ಗಮನಾರ್ಹವಾಗಿ ಕಡಿಮೆಗೊಳಿಸಲು ಇದು ಸಹಾಯಕವಾಗಲಿದೆ ಎಂದು ಪೊಲೀಸ್ ಕಾರ್ಯಾಚರಣೆಗಳ ಮಹಾನಿರ್ದೇಶಕ ಬ್ರಿಗೇಡಿಯರ್ ಮುಹಮ್ಮದ್ ರಶೀದ್ ಬಯಾತ್ ಆಶಿಸಿದ್ದಾರೆ. ಆ್ಯಂಬುಲೆನ್ಸ್ ವಾಹನಗಳಿಗೆ ತಡೆ ಉಂಟುಮಾಡುವ ವಾಹನಕ್ಕೆ ನೀಡಲಾಗುತ್ತಿದ್ದ ದಂಡವನ್ನು 3 ಸಾವಿರ ಮತ್ತು 6 ಬ್ಲಾಕ್ ಪಾಯಿಂಟ್ಗಳಿಗೆ ಹೆಚ್ಚಿಸಲಾಗಿದೆ.
ಅಂತರರಾಷ್ಟ್ರೀಯ ಕ್ರಿಮಿನಲ್ ಗ್ಯಾಂಗ್ಗಳು ಆನ್ಲೈನ್ನಲ್ಲಿ ಬ್ಯಾಂಕುಗಳಿಂದ ಹಣ ದೋಚಲು ಹೊಂಚು ಹಾಕುತ್ತಿದ್ದು, ತಮ್ಮ ಬ್ಯಾಂಕ್ ವಿವರಗಳನ್ನು ದೂರವಾಣಿ ಮೂಲಕ ಅಥವಾ ಆನ್ಲೈನ್ನಲ್ಲಿ ಮೂಲಕ ಹಂಚಿಕೊಳ್ಳದಂತೆ ಪೊಲೀಸರು ಎಚ್ಚರಿಸಿದ್ದಾರೆ.
ಹಬ್ಬದ ಹಿನ್ನೆಲೆಯಲ್ಲಿ ಕಾರ್ಯಾಚರಿಸುವ ಭಿಕ್ಷುಕರು ಮತ್ತು ರಸ್ತೆ ವ್ಯಾಪಾರಿಗಳನ್ನು ಪ್ರೋತ್ಸಾಹಿಸಬೇಡಿ. ಅಕ್ರಮವಾಗಿ ಮಾರಾಟಮಾಡಲಾಗುವ ಇಂಟರ್ನ್ಯಾಶನಲ್ ಸಿಮ್ ಕಾರ್ಡ್ಗಳನ್ನು ಖರೀದಿಸದೆ ಅಧಿಕೃತ ಸಂಸ್ಥೆಗಳಿಂದ ಖರೀದಿಸಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.
ಗಂಭೀರ ಅಪಘಾತಗಳು, ದರೋಡೆ ಮುಂತಾದ ತುರ್ತು ಪ್ರಕರಣಗಳಿಗೆ ಮಾತ್ರ 999 ಅನ್ನು ಬಳಸಬೇಕು ಅಲ್ಲದ ವೇಳೆ 901ಕ್ಕೆ ಸಂಪರ್ಕಿಸಬೇಕೆಂದು ಶಾರ್ಜಾ ಪೊಲೀಸರು ತಿಳಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ