ದುಬೈ: ಮಿತಿಮೀರಿದ ವೇಗಕ್ಕಾಗಿ ಪಾವತಿಸಲಾಗುವ ಟ್ರಾಫಿಕ್ ದಂಡವನ್ನು ಕೈಬಿಡಲಾಗಿದೆ ಎಂಬಂತೆ ಸೋಶಿಯಲ್ ಮೀಡಿಯಾದಲ್ಲಿ ಹರಡಲಾದ ವದಂತಿಗಳನ್ನು ದುಬೈ ಪೊಲೀಸರು ನಿರಾಕರಿಸಿದ್ದಾರೆ.
ದುಬೈ ಪೊಲೀಸರಿಂದ ಸೌದಿ ಅರೇಬಿಯನ್ ಪ್ರಜೆಗೆ ಬಂದಿದೆ ಎನ್ನಲಾದ ಸಂದೇಶ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಲಾಗಿದೆ. ಅತಿಯಾದ ದಂಡದಿಂದ ವಿನಾಯಿತಿ ನೀಡಿರುವುದಾಗಿ ಅರೇಬಿಕ್ ಭಾಷೆಯಲ್ಲಿ ಬರೆದ ಸಂದೇಶದ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗಿದೆ. ಆದರೆ ವೈರಲ್ ಸಂದೇಶದ ಫೋಟೋ ಇತ್ತೀಚಿನದಲ್ಲ ಎನ್ನಲಾಗಿದೆ.
ಸದ್ರಿ ಫೋಟೋ 10 ವರ್ಷಗಳ ಹಿಂದೆ ದುಬೈ, ಪ್ರವಾಸಿಗರನ್ನು ಸಂತೋಷಪಡಿಸುವ ಯೋಜನೆಯ ಭಾಗವಾಗಿ ನೀಡಲಾದ ಸಂದೇಶವಾಗಿದೆ ಎಂದು ದುಬೈ ಪೊಲೀಸ್ ಭದ್ರತಾ ಮಾಧ್ಯಮ ವಿಭಾಗದ ನಿರ್ದೇಶಕ ಕರ್ನಲ್ ಫೈಸಲ್ ಅಲ್ ಖಾಸಿಮ್ ಹೇಳಿದ್ದಾರೆ. ಅದರಲ್ಲಿರುವ ದುಬೈ ಪೊಲೀಸ್ ಲಾಂಛನ ಕೂಡ ಹಳೆಯದಾಗಿದೆ.
ದುಬೈ ಪೊಲೀಸರು ತಮ್ಮ ಎಲ್ಲಾ ಉಪಕ್ರಮಗಳನ್ನು ತಮ್ಮ ಅಧಿಕೃತ ಚಾನೆಲ್‌ಗಳ ಮೂಲಕ ಪ್ರಕಟಿಸಲಿದ್ದಾರೆ. ಅನಧಿಕೃತ ಮೂಲಗಳಿಂದ ನಕಲಿ ಸುದ್ದಿಗಳನ್ನು ಹಂಚಿಕೊಳ್ಳಬಾರದು ಅಥವಾ ಹರಡಬಾರದು ಎಂದು ಕರ್ನಲ್ ಫೈಸಲ್ ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ಎಚ್ಚರಿಕೆ ನೀಡಿದರು.
ಈ ವರ್ಷದ ಆರಂಭದಲ್ಲಿ, ಸಹಿಷ್ಣುತೆ ವರ್ಷ ಪ್ರಯುಕ್ತ ಟ್ರಾಫಿಕ್ ದಂಡವನ್ನು ತೆಗೆದುಹಾಕಲು ದುಬೈ ಪೊಲೀಸರು ಸೆಟಲ್ ಯುವರ್ ಫೈನ್ಸ್ ಯೋಜನೆಯನ್ನು ಪ್ರಾರಂಭಿಸಿದ್ದರು. ಅದರಂತೆ, ಈ ವರ್ಷ ಯಾವುದೇ ಸಂಚಾರ ದಂಡವನ್ನು ಪಡೆಯದಿದ್ದರೆ, ಸಂಚಾರ ದಂಡದ ಸಂಪೂರ್ಣವಾಗಿ ಮನ್ನಾ ಆಗುತ್ತದೆ. ರಿಯಾಯಿತಿಯು ಫೆಬ್ರವರಿ 6ಕ್ಕೆ ಮೊದಲು ವಾಹನ ಚಾಲಕರು ಪಡೆದ ಒಟ್ಟು ಸಂಚಾರ ದಂಡವನ್ನು ಆಧರಿಸಿದೆ. ದುಬೈ ಪೊಲೀಸರ ಸರಹದ್ದಿನ ಟ್ರಾಫಿಕ್ ದಂಡಕ್ಕಾಗಿ ಈ ಯೋಜನೆ ಎನ್ನಲಾಗಿದೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ