ಕೋಲ್ಕತ: ಕೇಂದ್ರ ಸರಕಾರ ಟಿಎಂಸಿ ನಾಯಕರನ್ನು ಬೆದರಿಸುತ್ತಿದ್ದು, ಬಿಜೆಪಿ ಸೇರದಿದ್ದರೆ ಚಿಟ್ಫಂಡ್ ಹಗರಣದಲ್ಲಿ ಸಿಲುಕಿಸಿ ತನಿಖಾ ಸಂಸ್ಥೆಗಳ ಮೂಲಕ ತನಿಖೆ ನಡೆಸುವುದಾಗಿ ಹೆದರಿಸುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಟಿಎಂಸಿ ವತಿಯಿಂದ ನಡೆದ ಹುತಾತ್ಮ ದಿನದ ರ್ಯಾಲಿ ಉದ್ದೇಶಿಸಿ ಭಾನುವಾರ ಮಾತನಾಡಿದ ಮಮತಾ ಬ್ಯಾನರ್ಜಿ, ಜುಲೈ 26ರಿಂದ ರಾಜ್ಯವ್ಯಾಪಿ ಹೋರಾಟ ಆರಂಭಿಸುವುದಾಗಿ ಹೇಳಿದರು.
ಭರವಸೆ ನೀಡಿದಂತೆ ಬಿಜೆಪಿಯು 15 ಲಕ್ಷ ರೂ.ಗಳನ್ನು ಜನರಿಗೆ ನೀಡಬೇಕು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.“ನೀವು ಟಿಎಂಸಿ ಜೊತೆ ಕಟ್ ಮನಿ ಕೇಳುತ್ತಿದ್ದೀರಾ? ನೀವು ಭರವಸೆ ನೀಡಿದ್ದ 15 ಲಕ್ಷ ರೂ.ಗಳನ್ನು ನೀಡಿ” ಎಂದವರು ಹೇಳಿದರು.
ಬಿಜೆಪಿ ಜತೆ ಸಂಪರ್ಕಕ್ಕೆ ಸಿಗದಿದ್ದರೆ ಚಿಟ್ಫಂಡ್ ಹಗರಣ ಮತ್ತು ಇತರ ಹಗರಣಗಳಲ್ಲಿ ಸಿಲುಕಿಸಿ ಜೈಲಿಗೆ ಅಟ್ಟಲಾಗುವುದು ಎಂದು ಕೇಂದ್ರ ತನಿಖಾ ಸಂಸ್ಥೆಗಳು ಟಿಎಂಸಿ ಶಾಸಕರು ಮತ್ತು ಇತರ ಚುನಾಯಿತ ಪ್ರತಿನಿಧಿಗಳನ್ನು ಬೆದರಿಸುತ್ತಿವೆ ಎಂದು ದೀದಿ ಆರೋಪಿಸಿದರು.
ಟಿಎಂಸಿ ಶಾಸಕರಿಗೆ ಬೆದರಿಕೆ ಹಾಗೂ ಆಮಿಷಗಳನ್ನು ಒಡ್ಡಿ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ಬಿಜೆಪಿಗೆ ಪಕ್ಷಾಂತರ ಮಾಡುವ ನಮ್ಮ ಪ್ರತಿಯೊಬ್ಬ ಶಾಸಕನಿಗೆ 2 ಕೋಟಿ ರೂ ಮತ್ತು ಪೆಟ್ರೋಲ್ ಪಂಪ್ ನೀಡುವುದಾಗಿ ಬಿಜೆಪಿ ಆಮಿಷ ಒಡ್ಡುತ್ತಿದೆ. ಕರ್ನಾಟಕದಂತೆ ಎಲ್ಲೆಡೆ ಕುದುರೆ ವ್ಯಾಪಾರದಲ್ಲಿ ಬಿಜೆಪಿ ತೊಡಗಿದೆ’ ಎಂದು ಬ್ಯಾನರ್ಜಿ ದೂರಿದರು.
ಕೇಂದ್ರದ ಬಿಜೆಪಿ ಸರಕಾರ 2 ವರ್ಷಕ್ಕಿಂತ ಹೆಚ್ಚು ಕಾಲ ಅಧಿಕಾರದಲ್ಲಿ ಇರುವುದಿಲ್ಲ ಎಂದು ಮಮತಾ ಹೇಳಿಕೊಂಡರು.















ಇನ್ನಷ್ಟು ಸುದ್ದಿಗಳು
ಚುನಾವಣಾ ಸಂಭ್ರಮಾಚರಣೆ: ಪಟಾಕಿ ಸಿಡಿದು ಮುಸ್ಲಿಂ ಲೀಗ್ ಕಾರ್ಯಕರ್ತ ಮೃತ್ಯು
ತಮ್ಮದೇ ಸರ್ಕಾರ ಮಂಡಿಸಿದ ಜಾತಿ ಸಮೀಕ್ಷೆ ವರದಿಯನ್ನು ಸುಟ್ಟು ಹಾಕಿದ ಕಾಂಗ್ರೆಸ್ ಎಂಎಲ್ಸಿ
ಕರ್ನಾಟಕ ಸರ್ಕಾರವನ್ನು ಬೀಳಿಸಲು ಕೇರಳ ದೇವಸ್ಥಾನದಲ್ಲಿ ಮೃಗ ಬಲಿ – ದೇವಸ್ವಂ ಸಚಿವರು ಹೇಳಿದ್ದೇನು?
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಮಣಿಪುರ: ಚುನಾವಣೆ ಬಹಿಷ್ಕಾರ ಕ್ಕೆ ಕರೆ ಕೊಟ್ಟ ಕುಕಿ!!
ಬಡತನದಿಂದ ಬಳಲುತ್ತಿರುವ ಕುಟುಂಬದ ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಷಕ್ಕೆ 1 ಲಕ್ಷ ರೂಪಾಯಿ
ಸಯ್ಯಿದ್ ಹಸನುಲ್ ಅಹ್ದಲ್ ತಂಙಳರಿಗೆ ಗೌರವ ‘ಅತ್ತಕ್ರೀಂ’- ಸ್ವಾಗತ ಸಮಿತಿ ಅಸ್ತಿತ್ವಕ್ಕೆ
ಪುಟ್ಟ ಬಾಲಕಿಯ ಅತ್ಯಾಚಾರ,ಹತ್ಯೆ ಪ್ರಕರಣ- ಆರೋಪಿ ಅಶ್ಫಾಕ್ ಆಲಂಗೆ ಮರಣ ದಂಡನೆ
ಕಳಮಶ್ಶೇರಿಯಲ್ಲಿ ಬಾಂಬ್ ಸ್ಫೋಟಿಸಿದ್ದು ಡೊಮಿನಿಕ್ ಮಾರ್ಟಿನ್- ದೃಢೀಕರಿಸಿದ ಪೊಲೀಸ್
ಕಳಮಶ್ಶೇರಿಯಲ್ಲಿ ಬಾಂಬ್ ಇಟ್ಟಿದ್ದು ನಾನೇ – ಪೊಲೀಸ್ ಠಾಣೆಯಲ್ಲಿ ಶರಣಾಗಿ ತಪ್ಪೊಪ್ಪಿಗೆ