ನವದೆಹಲಿ: ಏರ್ ಇಂಡಿಯಾದ ಎರಡು ಸರ್ವೀಸ್‌ಗಳಲ್ಲಿ ಝಂಝಂ ನೀರಿನ ಸಾಗಾಟಕ್ಕೆ ತಡೆ ನೀಡಲಾಗಿದೆ. ಎಐ 966 ಜಿದ್ದಾ/ಹೈದರಾಬಾದ್/ಮುಂಬೈ, ಎಐ964 ಜಿದ್ದಾ/ಕೊಚ್ಚಿನ್ ಮುಂತಾದ ಏರ್ ಇಂಡಿಯಾ ಸರ್ವೀಸ್‌ಗಳಲ್ಲಿ ಈ ನಿಷೇಧ ಏರ್ಪಡಿಸಲಾಗಿದೆ. ಹಜ್ ಯಾತ್ರಿಕರ ಕೊನೆಯ ತಂಡ ಭಾರತಕ್ಕೆ ಮರಳುವ ಸೆಪ್ಟೆಂಬರ್ 15 ರ ವರೆಗೆ ಈ ನಿಷೇಧ ಜಾರಿ ಇರಲಿದೆ. ವಿಸ್ತೃತ ರೂಪದಲ್ಲಿ ಇರುವ ವಿಮಾನದ ಬದಲಾಗಿ ಸಣ್ಣ ಪ್ರಮಾಣದ ವಿಮಾನಗಳು ಈ ಹಾದಿಯಲ್ಲಿ ಹಾರಾಟ ನಡೆಸುತ್ತಿದ್ದು, ಈ ಕಾರಣದಿಂದಾಗಿ ಈ ನಿಷೇಧ ಏರ್ಪಡಿಸಲಾಗಿದೆ ಎಂದು ಏರ್ ಇಂಡಿಯಾ ಸುತ್ತೋಲೆ ಹೊರಡಿಸಿದೆ.
ವಿಸ್ತೃತ ರೂಪದ ವಿಮಾನಗಳಿಗೆ ಈ ನಿಷೇಧ ಅನ್ವಯಿಸುವುದಿಲ್ಲ. ಕೇರಳದಿಂದ ಸರ್ವೀಸ್ ನಡೆಸುವ ಇತರ ವಿಮಾನಗಳಿಗೆ ಈ ನಿಷೇಧವಿಲ್ಲ. ಲಗೇಜ್‌ಗಳೊಂದಿಗೆ ಝಂಝಂನ ಕ್ಯಾನ್‌ಗಳನ್ನು ತುಂಬುವುದು ತ್ರಾಸದಾಯಕವೆಂದು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಈ ಹಾದಿಯಲ್ಲಿ ಹಾರಾಟ ನಡೆಸುತ್ತಿದ್ದ ವಿಮಾನಗಳು ಹಜ್ ಸರ್ವೀಸ್‌ಗಳಿಗಾಗಿ ಹಿಂಪಡೆದ ಕಾರಣಕ್ಕಾಗಿ ಸಣ್ಣ ಗಾತ್ರದ ವಿಮಾನಗಳು ಅಲ್ಲಿಗೆ ಹಾರಾಟ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಪರಾರಿ
ಖುರ್ಆನ್ ದುರ್ವ್ಯಾಖ್ಯಾನಕಾರರಿಂದ ಇಸ್ಲಾಂಗೆ ಭಾರೀ ಹಾನಿಯುಂಟಾಗುತ್ತಿದೆ- ಡಾ. ಝೈನೀ ಕಾಮಿಲ್
ಗ್ಯಾಸ್ ಸಿಲಿಂಡರ್ ಒಂದಕ್ಕೆ 266₹ ಹೆಚ್ಚಳ
ಭಾರತದಿಂದ ಸೌದಿ ಅರೇಬಿಯಾಕ್ಕೆ ನೇರವಾಗಿ ಪ್ರಯಾಣಿಸಲು ಅವಕಾಶ
ಮುಸ್ಲಿಮರು ಸರಕಾರದ ಕೆಲಸ ಮಾಡಬಾರದೇ? ಹಿಂದೂ ರಾಷ್ಟ್ರವಾಯಿತೇ ಭಾರತ!
ಆನ್ಲೈನ್ ಪರೀಕ್ಷೆ: ನಮ್ಮ ವ್ಯವಸ್ಥೆಯಲ್ಲಿ ಸಾಧ್ಯವಿಲ್ಲ- ಉನ್ನತ ಶಿಕ್ಷಣ ಸಚಿವ
ಕೊರೋನಾ ಅಬ್ಬರ: ಲಾಕ್ ಡೌನ್ ಬಗ್ಗೆ ಸಿಎಂ ಮಹತ್ವದ ಸಭೆ
ರಮೇಶ್ ಜಾರಕಿಹೊಳಿ ರಾಸಲೀಲೆ- ಸಂತ್ರಸ್ತೆಯಿಂದ ದೂರು ದಾಖಲು
ಬೆಳಗ್ಗಿನ ಅಝಾನ್ ಕರೆಗೂ ಧ್ವನಿವರ್ಧಕಗಳನ್ನು ಬಳಸಬಹುದು- ವಖ್ಫ್ ಬೋರ್ಡ್