janadhvani

Kannada Online News Paper

ಓಲಾ, ಉಬರ್: ಕಾರ್ ಪೂಲಿಂಗ್, ಶೇರ್ ಟ್ಯಾಕ್ಸಿ ಕರ್ನಾಟಕದಲ್ಲಿ ನಿಷೇಧ

ಬೆಂಗಳೂರು(ಜೂ.28): ಓಲಾ ಹಾಗೂ ಉಬರ್ ಟ್ಯಾಕ್ಸಿಗಳು ಪ್ರತಿ ದಿನ ಹೊಸ ಹೊಸ ಯೋಜನೆ ಜಾರಿಮಾಡುತ್ತಿದೆ. ಆದರೆ ಓಲಾ ಹಾಗೂ ಉಬರ್ ವಿಸ್ತರಿಸಿದ ಸೇವೆಗಳನ್ನು ಕರ್ನಾಟಕ ಸರ್ಕಾರ ನಿಷೇಧಿಸಿದೆ.

ಓಲಾ ಕಂಪನಿ ಪರಿಚಯಿಸಿರುವ ಶೇರ್ ಟ್ಯಾಕ್ಸಿ ಹಾಗೂ ಉಬರ್ ಕಂಪನಿಯ ಕಾರ್ ಪೂಲಿಂಗ್ ಸೇವೆಯನ್ನು ತಕ್ಷಣದಿಂದ ಕರ್ನಾಟಕ ಸರ್ಕಾರ ನಿಷೇಧಿಸಿದೆ. ಓಲಾ ಹಾಗೂ ಉಬರ್ ನಿಷೇಧಿತ ಸೇವೆಯನ್ನು ಮುಂದುವರಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಟ್ರಾನ್ಸ್‌ಪೋರ್ಟ್ ಕಮಿಶನ್ ವಿಪಿ ಇಕ್ಕೇರಿ ಎಚ್ಚರಿಸಿದ್ದಾರೆ.

ಓಲಾ ಹಾಗೂ ಉಬರ್ ಕಂಪನಿಯ ಟ್ಯಾಕ್ಸಿ ಸೇವೆ ಇರಲಿದೆ. ಆದರೆ ಓಲಾದ ಶೇರಿಂಗ್ ಹಾಗೂ ಉಬರ್‌ನ ಕಾರ್ ಪೂಲಿಂಗ್ ಸೇವೆ ನಿಷೇಧಿಸಲಾಗಿದೆ.

ಕಾರ್ ಪೂಲಿಂಗ್ ನಾವು ವಿರೋಧಿಸುತ್ತಿಲ್ಲ. ಆದರೆ ಓಲಾ ಹಾಗೂ ಉಬರ್ ಕಾರ್ ಪೂಲಿಂಗ್ ‌ಸೇವೆಗೆ ಅನುಮತಿ ಪಡೆದಿಲ್ಲ. ಕೇವಲ ಟ್ಯಾಕ್ಸಿ ಸೇವೆಗೆ ಮಾತ್ರ ಅನುಮತಿ ಪಡೆದಿದೆ.