ನವದೆಹಲಿ: ವಾಯು ಚಂಡಮಾರುತದ ಹಿನ್ನೆಲೆಯಲ್ಲಿ ಕರಾವಳಿ ತೀರದ ಹತ್ತಿರವಿರುವ ಸುಮಾರು 2,15,000 ಕ್ಕೂ ಅಧಿಕ ಜನರನ್ನು ಗುಜರಾತನಲ್ಲಿ ಕೆಳಮಟ್ಟದ ಪ್ರದೇಶಗಳಿಂದ ಸ್ಥಳಾಂತರಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
“ತೀವ್ರ ಚಂಡಮಾರುತದ ಬಿರುಗಾಳಿ” ಆಗಿ ಪರಿವರ್ತನೆಗೊಂಡ ‘ವಾಯು’ ಚಂಡಮಾರುತವು ತನ್ನ ದಿಕ್ಕನ್ನು ಸ್ವಲ್ಪ ಮಟ್ಟಿಗೆ ಬದಲಿಸಿದೆ ಮತ್ತು ಇದೀಗ ದಕ್ಷಿಣದಲ್ಲಿ ವೆರಾವಲ್ ಮತ್ತು ಪಶ್ಚಿಮದಲ್ಲಿ ದ್ವಾರಕಾ ನಡುವಿನ ಕರಾವಳಿಗೆ ಅಪ್ಪಳಿಸಲಿದೆ ಎಂದು ಹವಾಮಾನ ವರದಿ ತಿಳಿಸಿದೆ. ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ ಇದುವರೆಗೆ ಕಳೆದ 24 ಗಂಟೆಗಳಲ್ಲಿ 2,15,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಹೇಳಿದ್ದಾರೆ.
ಈಗ ಗುಜರಾತ್ ಕರಾವಳಿ ಪ್ರದೇಶದಲ್ಲಿ ಒಟ್ಟು 36 ಎನ್ಡಿಆರ್ಎಫ್ ತಂಡವನ್ನು ನಿಯೋಜಿಸಲಾಗಿದೆ, 11 ಹೆಚ್ಚುವರಿ ತಂಡಗಳು ಸಿದ್ಧವಾಗಿವೆ ಎಂದು ಗುಜರಾತ್ ರೆವಿನ್ಯೂ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಂಕಜ್ ಕುಮಾರ್ ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ.
ಒಂಬತ್ತು ಎಸ್ಡಿಆರ್ಎಫ್ ತಂಡಗಳು,14 ಎಸ್ಆರ್ಪಿ ಕಂಪೆನಿಗಳು ಮತ್ತು 300 ಸಾಗರ ಕಮಾಂಡೊಗಳನ್ನು ಸಹ ನಿಯೋಜಿಸಲಾಗಿದೆ.ಒಂಬತ್ತು ಹೆಲಿಕಾಪ್ಟರ್ಗಳು ಕಾರ್ಯತಂತ್ರದ ಸ್ಥಳಗಳಲ್ಲಿ ಇರಿಸಲಾಗಿದೆ ಮತ್ತು 10,000 ಪ್ರವಾಸಿಗರನ್ನು ಸ್ಥಳಾಂತರಿಸಲಾಗಿದೆ” ಎಂದು ಅವರು ಹೇಳಿದರು.
ಗೃಹ ಕಾರ್ಯದರ್ಶಿ ರಾಜೀವ್ ಗೌಬ ಇಂದು ರಾಷ್ಟ್ರೀಯ ಬಿಕ್ಕಟ್ಟಿನ ನಿರ್ವಹಣಾ ಸಮಿತಿಯ (ಎನ್ಸಿಎಂಸಿ) ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದರು. ಇಲ್ಲಿನ ಪರಿಹಾರ ಮತ್ತು ರಕ್ಷಣಾ ಕಾರ್ಯಗಳ ಬಗ್ಗೆ ಚರ್ಚೆ ನಡೆಸಲಾಯಿತು.















ಇನ್ನಷ್ಟು ಸುದ್ದಿಗಳು
ಚುನಾವಣಾ ಸಂಭ್ರಮಾಚರಣೆ: ಪಟಾಕಿ ಸಿಡಿದು ಮುಸ್ಲಿಂ ಲೀಗ್ ಕಾರ್ಯಕರ್ತ ಮೃತ್ಯು
ತಮ್ಮದೇ ಸರ್ಕಾರ ಮಂಡಿಸಿದ ಜಾತಿ ಸಮೀಕ್ಷೆ ವರದಿಯನ್ನು ಸುಟ್ಟು ಹಾಕಿದ ಕಾಂಗ್ರೆಸ್ ಎಂಎಲ್ಸಿ
ಕರ್ನಾಟಕ ಸರ್ಕಾರವನ್ನು ಬೀಳಿಸಲು ಕೇರಳ ದೇವಸ್ಥಾನದಲ್ಲಿ ಮೃಗ ಬಲಿ – ದೇವಸ್ವಂ ಸಚಿವರು ಹೇಳಿದ್ದೇನು?
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಮಣಿಪುರ: ಚುನಾವಣೆ ಬಹಿಷ್ಕಾರ ಕ್ಕೆ ಕರೆ ಕೊಟ್ಟ ಕುಕಿ!!
ಬಡತನದಿಂದ ಬಳಲುತ್ತಿರುವ ಕುಟುಂಬದ ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಷಕ್ಕೆ 1 ಲಕ್ಷ ರೂಪಾಯಿ
ಸಯ್ಯಿದ್ ಹಸನುಲ್ ಅಹ್ದಲ್ ತಂಙಳರಿಗೆ ಗೌರವ ‘ಅತ್ತಕ್ರೀಂ’- ಸ್ವಾಗತ ಸಮಿತಿ ಅಸ್ತಿತ್ವಕ್ಕೆ
ಪುಟ್ಟ ಬಾಲಕಿಯ ಅತ್ಯಾಚಾರ,ಹತ್ಯೆ ಪ್ರಕರಣ- ಆರೋಪಿ ಅಶ್ಫಾಕ್ ಆಲಂಗೆ ಮರಣ ದಂಡನೆ
ಕಳಮಶ್ಶೇರಿಯಲ್ಲಿ ಬಾಂಬ್ ಸ್ಫೋಟಿಸಿದ್ದು ಡೊಮಿನಿಕ್ ಮಾರ್ಟಿನ್- ದೃಢೀಕರಿಸಿದ ಪೊಲೀಸ್
ಕಳಮಶ್ಶೇರಿಯಲ್ಲಿ ಬಾಂಬ್ ಇಟ್ಟಿದ್ದು ನಾನೇ – ಪೊಲೀಸ್ ಠಾಣೆಯಲ್ಲಿ ಶರಣಾಗಿ ತಪ್ಪೊಪ್ಪಿಗೆ