janadhvani

Kannada Online News Paper

ಕೆಸಿಎಫ್ ಜಿಝಾನ್ ಬೇಶ್ ಸೆಕ್ಟರ್: ಬೃಹತ್ ಇಫ್ತಾರ್ ಕೂಟ

ಕೆ.ಸಿ.ಎಫ್ ಜಿಝಾನ್ ಬೇಶ್ ಸೆಕ್ಟರ್ ವತಿಯಿಂದ ಪ್ರತಿ ವರ್ಷದಂತೆ ಇಫ್ತಾರ್ ಕೂಟ ಕಾರ್ಯಕ್ರಮವು ದಿ,23-5-2019 ರಂದು ಖಾರ್ಡಿನಿಯಾದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕೆ. ಸಿ. ಎಫ್ ಜಿದ್ದಾ ಝೋನ್ ಅಧ್ಯಕ್ಷರಾದ ಸಿ. ಎಚ್. ಅಬ್ದುಲ್ಲ ಸಖಾಫಿ ಉಸ್ತಾದರು ಸಂಘಟನೆಯ ಪ್ರಾಮುಖ್ಯತೆ, ಕೆ. ಸಿ.ಎಫ್. ಸಂಘಟನೆಯು ಇತರ ಸಂಘಟನೆಗಳಿಗಿಂತ ಯಾಕೆ ಮತ್ತು ಹೇಗೆ ಭಿನ್ನ ಎಂಬುದನ್ನು ಎಲ್ಲರಿಗೂ ಮನ ಮುಟ್ಟುವ ಶೈಲಿಯಲ್ಲಿ ವಿವರಿಸಿದರು.

ಮುಖ್ಯ ಅತಿಥಿಗಳಾಗಿ ಅಶ್ರ‌ಫ್ ಸ‌ಖಾಫಿ ಮಾಡಾವು (ವ್ಯ‌ವ‌ಸ್ಥಾಪ‌ಕ‌ರು ಅಲ್ ಮ‌ದೀನ‌ತುಲ್ ಮುನ‌ವ್ವ‌ರ ಮೂಡ‌ಡ್ಕ‌‌), ಮುಹ‌ಮ್ಮ‌ದ್ ಕ‌ಮಾಲ್ ರ‌ಝ್ವಿ ಅಲ್ ಅಮ್ಜ‌ದಿ ( ಸಂಘ‌ಟ‌ಕ‌ರು, ಮ‌ಜ್ಲಿಸುಶಿಫಾ ಅಸ್ಸ‌ಖಾಫುಲ್ ಇಸ್ಲಾಮಿಯ್ಯ‌, ಆದೂರು), ಮುಹ‌ಮ್ಮ‌ದ್ ಮುಸ್ಲಿಯಾರ್, ಚೆರ್ವ‌ತ್ತೂರ್, ಕುಞಿಕೋಯ‌ ತಂಙ‌ಳ್ (ಸಂಘ‌ಟ‌ಕ‌ರು, ಮ‌ಹ್’ದಿನ್ ಅಕಾಡೆಮಿ) ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯರು ಕುಟುಂಬ ಸಮೇತ ಭಾಗವಹಿಸಿದರು. ಕೂನೆಯಲ್ಲಿ ಕೋಶಾಧಿಕಾರಿ ಸಲೀಂ ಯೂಸುಫ್ ಉಪ್ಪಿನಂಗಡಿ ವಂದಿಸಿದರು.